ಕಲಬುರಗಿ: ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್‌ ಪಲ್ಟಿ, ಇಬ್ಬರು ಸಾವು

By Kannadaprabha News  |  First Published May 20, 2020, 2:14 PM IST

ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ಉರುಳಿ ಬಿದ್ದ ಟ್ರ್ಯಾಕ್ಟರ್‌| ಇಬ್ಬರು ಸ್ಥಳದಲ್ಲಿಯೇ ಇಬ್ಬರು ಸಾವು| ಕಲಬುರಗಿ ಜಿಲ್ಲೆ ಶಹಾಬಾದ ತಾಲೂಕಿನ ಮರತೂರ ಸ್ಟೇಷನ್‌ ತಾಂಡಾದ ಬಳಿ ನಡೆದ ಘಟನೆ| ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಹಾಬಾದ್‌ ಪಿಐ ಬಿ.ಅಮರೇಶ|


ಶಹಾಬಾದ(ಮೇ.20): ಟ್ರ್ಯಾಕ್ಟರ್‌ವೊಂದು ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕಿನ ಮರತೂರ ಸ್ಟೇಷನ್‌ ತಾಂಡಾದ ಬಳಿ ಮಂಗಳವಾರ ನಡೆದಿದೆ. ಮೃತರನ್ನ ಪ್ರಭು ರಾಠೋಡ (25), ದೇವರಾಜ ಚವ್ಹಾಣ (30) ಎಂದು ಗುರುತಿಸಲಾಗಿದೆ.

ಬೆಳಗ್ಗೆ ಸ್ಟೇಷನ್‌ ತಾಂಡಾದಿಂದ ಮರತೂರ ಗ್ರಾಮದತ್ತ ಹೊರಟಿದ್ದ ಟ್ರ್ಯಾಕ್ಟರ್‌ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. 

Tap to resize

Latest Videos

ರಾಜ್ಯಕ್ಕೆ ಮುಳುವಾದ ಮುಂಬೈ ಸಂಪರ್ಕ; ದಿನೇ ದಿನೇ ಹೆಚ್ಚಾಗುತ್ತಿವೆ ಪಾಸಿಟೀವ್ ಕೇಸ್‌ಗಳು

ಘಟನಾ ಸ್ಥಳಕ್ಕೆ ಶಹಾಬಾದ್‌ ಪಿಐ ಬಿ.ಅಮರೇಶ ಭೇಟ್ಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶಹಾಬಾದ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

click me!