ಪಟ್ಟಕ್ಕಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಪೈಪೋಟಿ ನಡೆಯುತ್ತಿದ್ದು, ಆದರೆ ಜೆಡಿಎಸ್ ನಲ್ಲಿ ಬಂಡಾಯದ ಸೂಚನೆ ಕಂಡು ಬಂದಿದೆ.
ರಾಮನಗರ(ಮಾ.16) : ಬಿಡದಿ ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗುತ್ತಿದ್ದಂತೆ ಜೆಡಿಎಸ್ ಮತ್ತು ಕಾಂಗ್ರೆಸ್‌ನಲ್ಲಿ ಗದ್ದುಗೆಗಾಗಿ ಪೈಪೋಟಿ ಆರಂಭವಾಗಿದೆ. ರಾಜ್ಯ ಸರ್ಕಾರ ಬರೊಬ್ಬರಿ ಒಂದು ವರ್ಷಗಳ ತರುವಾಯ ಪುರಸಭೆ ಅಧ್ಯಕ್ಷ ಸ್ಥಾನ ಬಿಸಿಎಂ(ಎ) ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟಜಾತಿ ಮಹಿಳೆಗೆ ಮೀಸಲು ನಿಗದಿ ಪಡಿಸಿದೆ. ಮೀಸಲಾತಿ ಆದೇಶ ಹೊರ ಬೀಳುತ್ತಿದ್ದಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಲ್ಲಿನ ಆಕಾಂಕ್ಷಿತರು ಲಾಭಿ ನಡೆಸುತ್ತಿದ್ದಾರೆ.
ಬಿಡದಿ ಪುರಸಭೆಯಲ್ಲಿ ಮೇಲ್ನೋಟಕ್ಕೆ ಜೆಡಿಎಸ್ 16, ಕಾಂಗ್ರೆಸ್ 10 ಸದಸ್ಯರ ಬೆಂಬಲ ಕಾಣುತ್ತಿದೆ. ಆದರೆ, ವಿಪ್ ಜಾರಿಯಾಗುವುದರಿಂದ ಚಿತ್ರಣ ಬದಲಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಕೆಲವು ಸದಸ್ಯರು ಬಂಡಾಯದ ಬಾವುಟ ಹಾರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕೈ, ಬಿಜೆಪಿ ಹಿಂದಿಕ್ಕಿ ಜೆಡಿಎಸ್ ಗೆ ಹೆಚ್ಚು ಸ್ಥಾನ : ಪಟ್ಟ ಯಾರಿಗೆ..?...
ಅಧ್ಯಕ್ಷ ಸ್ಥಾನದ ಮೀಸಲು ಪಟ್ಟಿ ಪ್ರಕಟಕ್ಕೂ ಮುನ್ನ ಸಾಮಾನ್ಯ ವರ್ಗಕ್ಕೆ ಅವಕಾಶ ಕಲ್ಪಿಸುವಂತೆ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಪ್ರಬಲ ಆಕಾಂಕ್ಷಿತರು ಮತ್ತು ಅವರ ಬೆಂಬಲಿಗರು ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರೆಂದು.
ಆದರೆ, ತಮ್ಮ ಬೇಡಿಕೆಗೆ ಸ್ಪಂದಿಸಲಿಲ್ಲ ಎನ್ನುವ ಕಾರಣಕ್ಕೆ ಮುನಿಸಿಕೊಂಡಿರುವ ಜೆಡಿಎಸ್‌ನ ಐದಾರು ಸದಸ್ಯರು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ತಟಸ್ಥವಾಗಿ ಉಳಿಯುವ ಮುಖೇನ ಬಂಡಾಯದ ಬಿಸಿ ಮುಟ್ಟಿಸುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಹೀಗಾಗಿ ಜೆಡಿಎಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ವಾತಾವರಣ ಸೃಷ್ಟಿಯಾಗಿದ್ದು, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಕೊನೆಯ ಕ್ಷಣದವರೆಗೂ ರಾಜಕೀಯ ಚದುರಂಗದಾಟ ನಡೆಯುವ ಸಾಧ್ಯತೆಯಿದೆ. ಅಂತಿಮವಾಗಿ ಫಲಿತಾಂಶ ಅದಲು-ಬದಲಾಗುವುದನ್ನೂ ತಳ್ಳಿಹಾಕುವಂತಿಲ್ಲ ಎನ್ನಲಾಗುತ್ತಿ