
ಚಿಕ್ಕಬಳ್ಳಾಪುರ(ಜ.01): ಇಂದು ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಪ್ರವಾಸಿ ತಾಣ ನಂದಿ ಬೆಟ್ಟ ನೋಡಲು ಜನರು ಮುಗಿಬಿದ್ದಿದ್ದಾರೆ. ವರ್ಷದ ಆರಂಭದ ದಿನ ಹಾಗೂ ಭಾನುವಾರವಾಗಿದ್ದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ನಂದಿ ಬೆಟ್ಟಕ್ಕೆ ತೆರಳುತ್ತಿದ್ದಾರೆ. ವೀಕೆಂಡ್ ಜೊತೆಗೆ ಹೊಸ ವರ್ಷ ಹಿನ್ನೆಲೆಯಲ್ಲಿ ನಂದಿ ಬೆಟ್ಟಕ್ಕೆ ಸಾವಿರಾರು ಪ್ರವಾಸಿಗರು ಹೋಗುತ್ತಿದ್ದಾರೆ. ರಾತ್ರಿಯ ಸೆಲೆಬ್ರೇಶನ್‌ಗೆ ನಂದಿ ಬೆಟ್ಟಕ್ಕೆ ನಿಷೇಧಾಜ್ಞೆ ಮಾಡಲಾಗಿತ್ತು. ಇಂದು ಬೆಳಿಗ್ಗೆ 6:00ಗೆ ಪ್ರವೇಶ ಇದ್ದಿದ್ದರಿಂದ ತಡರಾತ್ರಿಯಿಂದಲೇ ಪ್ರವಾಸಿಗರು ಕಾದು ಕುಳಿತಿದ್ದಾರೆ.
ನಂದಿ ಬೆಟ್ಟದ ಕೆಳಗಡೆ ಸುಮಾರು 6 ಕಿ.ಮೀ ನಷ್ಟು ಸಂಚಾರ ದಟ್ಟಣೆ ಉಂಟಾಗಿದೆ. ನಂದಿ ಬೆಟ್ಟಕ್ಕೆ ಮೇಲಕ್ಕೆ ಹೋಗಲು ಕೆಳಗಡೆ ಬಾರಲು ಆಗದೆ ಕೆಲವು ಪ್ರವಾಸಿಗರ ಪರದಾಡುತ್ತಿದ್ದಾರೆ. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ.
CHIKKABALLAPUR : ಐದೂ ಕ್ಷೇತ್ರಕ್ಕೂ ಪ್ರಬಲ ಅಭ್ಯರ್ಥಿಗಳು ಕಣಕ್ಕೆ ಇಳಿಸ್ತೀವಿ
ಹೊಸ ವರ್ಷಾಚರಣೆ ಹಿನ್ನೆಲೆ, ನಂದಿ ಬೆಟ್ಟಕ್ಕೆ ಸಾರ್ವಜನಿಕರ ನಿಷೇಧ
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ನಂದಿ ಬೆಟ್ಟಕ್ಕೆ ಸಾರ್ವಜನಿಕರ ನಿಷೇಧ ಹೇರಲಾಗಿದೆ. 2023ರ ಜನವರಿ 01 ರಂದು ಹೊಸ ದಿನಾಚರಣೆಯ ಸಂಬಂಧವಾಗಿ ಚಿಕ್ಕಬಳ್ಳಾಪುರ ತಾಲೂಕಿನ ಪ್ರಸಿದ್ಧ ಸ್ಥಳವಾದ ನಂದಿ ಗಿರಿಧಾಮದ ಪರಿಸರವನ್ನು, ಪಾವಿತ್ರತೆಯನ್ನು ಕಾಪಾಡುವ ಮತ್ತು ಸಾರ್ವಜನಿಕರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವು ಹರಡದಂತೆ ತಡೆಗಟ್ಟುವ ಮುಂಜಾಗ್ರತಾ ಕ್ರಮಕ್ಕಾಗಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಠಿಯಿಂದ ಪ್ರವಾಸಿಗರು ಆ ದಿನ ನಂದಿ ಗಿರಿಧಾಮಕ್ಕೆ ಬಂದು ಗುಂಪು-ಗುಂಪಾಗಿ ತಿರುಗಾಡುವುದು, ಮದ್ಯಪಾನ ಮಾಡುವುದು, ಪ್ಲಾಸ್ಟಿಕ್ ಬಾಟಲ್ ಗಳನ್ನು ಎಸೆಯುವುದರಿಂದಾಗಿ ಪರಿಸರ ಮಾಲಿನ್ಯ ಉಂಟಾಗುತ್ತದೆ. ಆದ್ದರಿಂದ ಇದನ್ನು ತಡೆಗಟ್ಟುವ ಸಲುವಾಗಿ ನಂದಿ ಗಿರಿಧಾಮದಲ್ಲಿ 2022ರ ಡಿಸೆಂಬರ್ 31 ರ ಸಂಜೆ 6:00 ಗಂಟೆಯಿಂದ 2023ರ ಜನವರಿ 01 ರ ಬೆಳಿಗ್ಗೆ 6:00 ಗಂಟೆಯವರೆಗೆ ಸಾರ್ವಜನಿಕ ನಿಷೇಧಾಜ್ಞೆಯನ್ನು ವಿಧಿಸಿ ಆದೇಶಿಸಲಾಗಿತ್ತು.