ಬೆಂಗಳೂರು: ಬಿಡಿಎ ವಿಲ್ಲಾ ಮಾರ್ಚ್‌ಗೆ ಸಿದ್ಧ..!

Published : Jan 01, 2023, 08:23 AM IST
ಬೆಂಗಳೂರು: ಬಿಡಿಎ ವಿಲ್ಲಾ ಮಾರ್ಚ್‌ಗೆ ಸಿದ್ಧ..!

ಸಾರಾಂಶ

ಹುಣ್ಣಿಗೆರೆ ಬಿಡಿಎ ವಿಲ್ಲಾ ಮಾರ್ಚ್‌ಗೆ ಪೂರ್ಣ, 271 ಕೋಟಿ ವೆಚ್ಚದ ಯೋಜನೆ, 31 ಎಕರೆಯಲ್ಲಿ ವಿಲ್ಲಾ ನಿರ್ಮಾಣ, ಈಗಾಗಲೇ ಶೇ.85ರಷ್ಟು ಕಾಮಗಾರಿ ಪೂರ್ಣ, ಅಪಾರ್ಟ್‌ಮೆಂಟ್‌ ಸಿದ್ಧ. 

ಸಂಪತ್‌ ತರೀಕೆರೆ

ಬೆಂಗಳೂರು(ಜ.01): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತುಮಕೂರು ರಸ್ತೆಯ ದಾಸನಪುರ ಹೋಬಳಿಯ ಹುಣ್ಣಿಗೆರೆಯಲ್ಲಿ 271.46 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಲ್ಲಾ ಯೋಜನೆಯು ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಹುಣ್ಣಿಗೆರೆಯಲ್ಲಿ ವಿಲ್ಲಾ ಯೋಜನೆಗೆಂದು 31 ಎಕರೆ ಜಾಗವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇದರಲ್ಲಿ 170 ನಾಲ್ಕು ಬಿಎಚ್‌ಕೆ ವಿಲ್ಲಾ(35/50 ಅಳತೆ), 31 ಮೂರು ಬಿಎಚ್‌ಕೆ ವಿಲ್ಲಾ (35/50 ಅಳತೆ) ಮತ್ತು 121 ಮೂರು ಬಿಎಚ್‌ಕೆ ವಿಲ್ಲಾಗಳ (30/40 ಅಳತೆ) ನಿರ್ಮಾಣ ಕಾಮಗಾರಿ ಶೇ.85ರಷ್ಟು ಪೂರ್ಣಗೊಂಡಿದೆ. ಇನ್ನು ಕೇವಲ ಶೇ.15ರಷ್ಟುಕಾಮಗಾರಿ ಮಾತ್ರ ಬಾಕಿಯಿದೆ. ಆರ್ಥಿಕವಾಗಿ ಹಿಂದುಳಿದವರಿಗಾಗಿ ನಿರ್ಮಿಸಲಾಗಿರುವ 320 ಒಂದು ಬಿಎಚ್‌ಕೆ(ಇಡಬ್ಲ್ಯೂಎಸ್‌) ಪ್ಲಾಟ್‌ಗಳಿರುವ ಮೂರು ಅಂತಸ್ತಿನ ಅಪಾರ್ಚ್‌ಮೆಂಟ್‌ ಕಾಮಗಾರಿ ಮುಕ್ತಾಯಗೊಂಡಿದೆ. ಸಾರ್ವಜನಿಕ ಹಂಚಿಕೆಗೆ ಸಿದ್ಧಗೊಂಡಿದೆ.

ಹುಣ್ಣಿಗೆರೆ ವಿಲ್ಲಾ ಯೋಜನೆಯನ್ನು 2018ರ ಸೆ.25ರಂದು ಹೊಂಬಾಳೆ ಕನ್‌ಸ್ಟ್ರಕ್ಷನ್‌ ಯ್ಯಾಂಡ್‌ ಎಸ್ಟೆಟ್‌ ಪ್ರೈ.ಲಿ. ಕಂಪನಿಗೆ ಕಾಮಗಾರಿ ಆರಂಭಿಸಲು ಕಾರ್ಯಾದೇಶ ನೀಡಲಾಗಿದೆ. ಈ ಯೋಜನೆಯು 2023ರ ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳಿಸುವ ಭರವಸೆಯನ್ನು ಗುತ್ತಿಗೆ ಪಡೆದಿರುವ ಕಂಪನಿಯು ನೀಡಿದೆ. ಎಸಿಎಸ್‌ ಡಿಸೈನ್‌ ಕನ್ಸಲ್ಟೆಂಟ್ಸ್‌ ಕಂಪನಿಯು ಕಟ್ಟಡಗಳ ವಿನ್ಯಾಸ ಮಾಡಿದ್ದು, ಡಿಸೈನ್‌ ಪಾಯಿಂಟ್‌ ಕನ್ಸಲ್ಟೆಂಟ್ಸ್‌ ಯೋಜನೆಯ ನಿರ್ವಹಣೆ ಮಾಡುತ್ತಿದೆ ಎಂದು ಬಿಡಿಎ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ಬೆಂಗಳೂರಿನ 29 ಕೆರೆ ಅಭಿವೃದ್ಧಿಗೆ 114 ಕೋಟಿ..!

ವಿಲ್ಲಾಗಳಿಗೆ ಆಧುನಿಕ ಸೌಕರ‍್ಯ

ಹುಣ್ಣಿಗೆರೆ ವಿಲ್ಲಾ ನಿರ್ಮಾಣಗೊಳ್ಳುತ್ತಿರುವ ಪ್ರದೇಶದ ಸುತ್ತ 2.1 ಮೀಟರ್‌ ಎತ್ತರದ ಕಾಂಪೌಂಡ್‌ ನಿರ್ಮಿಸಲಾಗಿದೆ. 0.6 ಮೀಟರ್‌ ಮುಳ್ಳುತಂತಿ ಬೇಲಿ ಅಳವಡಿಸಲಾಗಿದೆ. 6 ಮೀಟರ್‌ ಅಗಲದ ರಸ್ತೆ, 5 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಭೂದೃಶ್ಯ(ಉದ್ಯಾನ), ಬಾಸ್ಕೆಟ್‌ಬಾಲ್‌, ಕ್ರಿಕೆಟ್‌ ಮತ್ತು ಮಕ್ಕಳ ಆಟದ ಮೈದಾನ, 600 ಕೆಎಲ್‌ಡಿಯ ಎಸ್‌ಟಿಪಿ ಘಟಕ, 1.5 ಲಕ್ಷ ಲೀಟರ್‌ ಕುಡಿಯುವ ನೀರಿನ ಓವರ್‌ಹೆಡ್‌ ಟ್ಯಾಂಕ್‌(ಒಎಚ್‌ಟಿ), 1.5 ಲಕ್ಷ ಲೀಟರ್‌ ಸಾಮರ್ಥ್ಯಕ್ಕೆ ಸಂಪ್‌, 10 ಕೊಳವೆ ಬಾವಿಗಳು ಇರಲಿದ್ದು, ಸಾಮರ್ಥ್ಯಕ್ಕೆ ಅನುಗುಣವಾಗಿ ಪಂಪ್‌ಗಳು, ಪೈಪ್‌ ಸಂಪರ್ಕ ಇತ್ಯಾದಿಗಳನ್ನು ಅಳವಡಿಸಲಾಗುತ್ತಿದೆ.

ಈ ಹತ್ತು ಕೊಳವೆ ಬಾವಿಗಳು ಮಳೆ ನೀರಿನಿಂದ ಪುನಶ್ಚೇತನಗೊಳ್ಳುವಂತೆ ಮಳೆ ನೀರು ಕೊಯ್ಲು ಮಾದರಿಯಲ್ಲಿ ಪೈಪ್‌ಲೈನ್‌ ಸಂಪರ್ಕವನ್ನು ಕೊಡಲು ಯೋಜಿಸಲಾಗಿದೆ. ಅಲ್ಲದೇ ಇಲ್ಲಿನ ನಿವಾಸಿಗಳ ವಾಹನಗಳ ನಿಲುಗಡೆಗೆ(ಪಾರ್ಕಿಂಗ್‌) ಅನುಕೂಲವಾಗುವಂತೆ ವಿವಿಧ ಮಾದರಿಯ ಪಾರ್ಕಿಂಗ್‌ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ತೆರೆದ ಪಾರ್ಕಿಂಗ್‌ಗೆಂದು 2640 ಚದರ ಮೀಟರ್‌ ಮತ್ತು ಆವರಿಸಿದ ಪಾರ್ಕಿಂಗ್‌ ವ್ಯವಸ್ಥೆಗೆ 5827.75 ಚದರ ಮೀಟರ್‌ ಪ್ರದೇಶವನ್ನು ಮೀಸಲು ಇಡಲಾಗಿದೆ. ಪರಿಸರ ಸ್ನೇಹಿ ವಿದ್ಯುತ್‌ ವಾಹನಗಳ ಚಾರ್ಜಿಂಗ್‌ಗೆ ಅನುಕೂಲವಾಗುವಂತೆ ವಿದ್ಯುತ್‌ ವಾಹನಗಳ (ಇವಿ)ಚಾರ್ಜಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಇದೀಗ ವಿಲ್ಲಾಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕಾರ್ಯವೊಂದು ಬಾಕಿಯಿದೆ ಎಂದು ಬಿಡಿಎ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಆಲೂರಿನ ಎಲ್ಲ ವಿಲ್ಲಾ ಮಾರಾಟ

ಬಿಡಿಎ ಮೊದಲ ವಿಲ್ಲಾ ಯೋಜನೆಯಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದು, ಆಲೂರಿನಲ್ಲಿ ನಿರ್ಮಿಸಿದ್ದ 452 ವಿಲ್ಲಾಗಳು ಶೇ.100ರಷ್ಟುಮಾರಾಟವಾಗಿವೆ. ಇದರ ಯಶಸ್ಸಿನಿಂದ ಪ್ರೇರಣೆಗೊಂಡ ಬಿಡಿಎ ಹುಣ್ಣಿಗೆರೆಯಲ್ಲಿ ಮತ್ತೊಂದು ವಿಲ್ಲಾ ಯೋಜನೆ ಗೆ ಕೈಹಾಕಿತ್ತು. ಇದೀಗ ಈ ಯೋಜನೆ ಅಂತಿಮ ಹಂತಕ್ಕೆ ಬಂದಿದ್ದು, ಸಾರ್ವಜನಿಕರಿಂದಲೂ ಉತ್ತಮ ಬೇಡಿಕೆ ಬರುತ್ತಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.

PREV
Read more Articles on
click me!

Recommended Stories

ಲಕ್ಕುಂಡಿ ನಿಧಿ ಆಯ್ತು, ಜನರ ಕಣ್ಣು ಬಳ್ಳಾರಿಯ ತೆಕ್ಕಲಕೋಟೆ ಮೇಲೆ: ಉತ್ಖನನದ ಸಮಯದಲ್ಲಿ ಸಂಚಲನ
Kamalakar Bhat Case: ಜಮೀನ್ದಾರನಿಗೆ ಗಾಳ, ಅಪ್ಪು ಆರ್ಕೆಸ್ಟ್ರಾ ಶುರು; ಸುಚಿತ್ರಾಳ ಮತ್ತೊಂದು ಕರ್ಮಕಾಂಡ ಬಯಲು