Uttara Kannada: ಕರ್ಫ್ಯೂ ತೆರವುಗೊಂಡರೂ ಗೋಕರ್ಣ, ಮುರ್ಡೇಶ್ವರದಲ್ಲಿ ಪ್ರವಾಸಿಗರು ವಿರಳ

By Kannadaprabha News  |  First Published Jan 23, 2022, 4:13 AM IST

*  ಮಹಾಬಲೇಶ್ವರ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಸಹ ಭಕ್ತರ ಸಂಖ್ಯೆ ವಿರಳ
*  ವಾರಾಂತ್ಯದ ಕರ್ಫ್ಯೂ ರದ್ದು: ಜಿಲ್ಲೆಯಲ್ಲಿ ಎಂದಿನ ಜನಜೀವನ
*  ಸ್ವಯಂ ಪ್ರೇರಿತ ಲಾಕ್‌ಡೌನ್‌


ಗೋಕರ್ಣ(ಜ.23): ಸರ್ಕಾರ ವೀಕೆಂಡ್‌ ಕರ್ಫ್ಯೂ(Weekend Curfew) ತೆರವುಗೊಳಿಸಿದೆ, ಆದರೂ ಪ್ರವಾಸಿ ತಾಣಗಳಾದ ಗೋಕರ್ಣದಲ್ಲಿ(Gokarna) ಶನಿವಾರ ಪ್ರವಾಸಿಗರ(Tourists ) ಸಂಖ್ಯೆ ಕುಸಿದಿದಿದೆ. ಶನಿವಾರ ಮುಂಜಾನೆ ಗೋಕರ್ಣದ ಪ್ರಮುಖ ಕಡಲತೀರದಲ್ಲಿ ಜನರ ಓಡಾಟ ಕಂಡು ಬಂತು. ಇನ್ನೂ ಇಲ್ಲಿನ ಮಹಾಬಲೇಶ್ವರ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಸಹ ಭಕ್ತರ(Devotees) ಸಂಖ್ಯೆ ವಿರಳವಾಗಿದೆ. ಅಂಗಡಿ ಮುಂಗಟ್ಟುಗಳಲ್ಲಿ ಜನರು ಎಂದಿನಂತೆ ವ್ಯಾಪಾರ ವಹಿವಾಟು)Business Transaction) ನಡೆಸಿದ್ದಾರೆ. ಬಸ್‌ ಸಂಚಾರ, ಗ್ರಾಮೀಣ ಜನರ ಓಡಾಟ ಸಾಮಾನ್ಯವಾಗಿದ್ದು, ಒಟ್ಟಾರೆ ವೀಕೆಂಡ್‌ ಕರ್ಫ್ಯೂ ವೇಳೆ ಇದ್ದ ಪ್ರವಾಸಿಗರಿಗಿಂತ ತೆರವುಗೊಳಿಸಿದ ನಂತರ ಕಡಿಮೆಯಾಗಿದೆ.

ಸ್ವಯಂ ಪ್ರೇರಿತ ಲಾಕ್‌ಡೌನ್‌

Latest Videos

undefined

ಕಳೆದ ಹಲವು ದಿನಗಳಿಂದ ಜನರಿಲ್ಲದೆ ಬಿಕೋ ಎನ್ನುತ್ತಿದ್ದ ಪ್ರವಾಸಿತಾಣದಲ್ಲಿ ಶನಿವಾರ ಜನರು ಆಗಮಿಸುವ ನಿರೀಕ್ಷೆ ಇತ್ತು, ಆದರೆ ಸಂಜೆಯವರೆಗೂ ಜನರ ಸಂಖ್ಯೆ ಕ್ಷೀಣಿಸಿದ್ದು, ಜನರೇ ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್‌(Lockdown) ಘೋಷಿಸಿಕೊಂಡರೆ ಎನ್ನುವಂತಾಗಿದೆ. ಕಪ್ರ್ಯೂ ತೆರವಿನ ಬಗ್ಗೆ ಸರ್ಕಾರ(Government of Karnataka) ಸಂಜೆ ನಿರ್ಧಾರ ಪ್ರಕಟಿಸಿದರೂ ಈ ಮೊದಲು ಹೆಚ್ಚಿನ ಪ್ರವಾಸಿಗರು ಅದರಲ್ಲಿಯೂ ಬೆಂಗಳೂರಿನ(Bengaluru) ಯುವ ಸಮುದಾಯದ ಉದ್ಯೋಗಿಗಳು(Employees) ಶುಕ್ರವಾರವೇ ಇಲ್ಲಿಗೆ ಲಗ್ಗೆ ಇಡುತ್ತಿದ್ದರು, ಆದರೆ ಇವರ ಸಂಖ್ಯೆಯು ಕಡಿಮೆಯಾಗಿದ್ದು, ಇನ್ನೂ ಭಾನುವಾರವಾದರೂ ಇತ್ತ ಮುಖಮಾಡುತ್ತಾರೆಯೇ ಎಂದು ಇಲ್ಲಿನ ವಸತಿ ಗೃಹ, ರೆರ್ಸಾಟ್‌ನವರು ಮತ್ತಿತರ ವ್ಯಾಪಾರಸ್ಥರು ನಿರೀಕ್ಷೆಯಲ್ಲಿದ್ದಾರೆ.

Karwar Accident: ಚಾಲಕನ ನಿಯಂತ್ರಣ ತಪ್ಪಿ ಕಂಟೇನರ್‌ಗೆ ಆ್ಯಂಬ್ಯುಲೆನ್ಸ್ ಡಿಕ್ಕಿ!

ವಾರಾಂತ್ಯದ ಕರ್ಫ್ಯೂ ರದ್ದು: ಜಿಲ್ಲೆಯಲ್ಲಿ ಎಂದಿನ ಜನಜೀವನ

ಕಾರವಾರ(Karwar): ಕಳೆದ ಎರಡು ವಾರಾಂತ್ಯವನ್ನು ಮನೆಯಲ್ಲಿ ಕಳೆದಿದ್ದ ಉತ್ತರ ಕನ್ನಡದ(Uttara Kannada) ಜನತೆ ವೀಕೆಂಡ್‌ ಕರ್ಫ್ಯೂ ರದ್ದಾದ ಹಿನ್ನೆಲೆಯಲ್ಲಿ ಶನಿವಾರ ಎಂದಿನ ಸಾಮಾನ್ಯ ಜೀವನಶೈಲಿಗೆ ಮರಳಿದರು.
ಎರಡು ವಾರಗಳ ಕಾಲ ವೀಕೆಂಡ್‌ ಕರ್ಫ್ಯೂ ಇದ್ದ ಕಾರಣ ಬಿಕೋ ಎನ್ನುವ ವಾತಾವರಣ ಇತ್ತು. ಜನ ಮನೆಯಿಂದ ಹೊರ ಬರಲು ಸಾಧ್ಯ ಆಗಿರಲಿಲ್ಲ. ಆದರೆ, ಶುಕ್ರವಾರ ಕರ್ಫ್ಯೂ ರದ್ದು ಆದೇಶ ಹೊರಬೀಳುತ್ತದ್ದಂತೆ ನಿರಾಳರಾಗಿದ್ದರು.

ಜಿಲ್ಲೆಯ ಪ್ರವಾಸಿ ಕೇಂದ್ರಗಳಲ್ಲಿ ಕೂಡ ಅಷ್ಟಾಗಿ ಪ್ರವಾಸಿಗರು ಆಗಮಿಸಿರಲಿಲ್ಲ. ಅದರೆ ಶನಿವಾರ ವಾರಾಂತ್ಯದ ಬಿಡುವು ಕಳೆಯಲು ಇತರೆಡೆಗಳಿಂದ ಜನತೆ ಆಗಮಿಸಿದ್ದರು. ಜತೆಗೆ, ಗೋಕರ್ಣ, ಮುರುಡೇಶ್ವರ(Murdeshwara), ಇಡಗುಂಜಿ ಮಾರಿಕಾಂಬಾ ದೇವಾಲಯ(Temple) ಸೇರಿದಂತೆ ಇತರೆ ಧಾರ್ಮಿಕ ಕ್ಷೇತ್ರದಲ್ಲಿ ಜನ ಕಂಡುಬಂದರು.

ಉಳಿದಂತೆ, ಮಾರುಕಟ್ಟೆಗಳಲ್ಲಿ ದಿನನಿತ್ಯದಂತೆ ತೆರೆದಿದ್ದವು. ವ್ಯಾಪಾರ-ವಹಿವಾಟು ನಿರಾತಂಕವಾಗಿ ನಡೆಯಿತು. ಹೊಟೆಲ್‌ ಗಳು ಕುಳಿತು ಊಟ, ಉಪಾಹಾರ ಸೇವನೆ ಮಾಡಲು ಅವಕಾಶವಿತ್ತು. ಬೀದಿ ಬದಿಯಲ್ಲಿ ತರಕಾರಿ, ಮೀನು, ಹೂಹಣ್ಣು ಮಾರಾಟ ನಡೆದಿತ್ತು.

Uttara Kannada: ಜಮೀನು ಮಂಜೂರಾತಿಗೆ ಒದ್ದಾಡುತ್ತಿರುವ ನಿವೃತ್ತ ಯೋಧರು: ಪ್ರಧಾನಿ ಕಚೇರಿಗೂ ಪತ್ರ!

ಕಾರವಾರದಲ್ಲಿ ಮೀನು ಮಾರುಕಟ್ಟೆ ಬಂದ್‌(Fish Market) ಹಿನ್ನೆಲೆಯಲ್ಲಿ ಬೀದಿಬದಿ ಮೀನು ಖರೀದಿಗೆ ಮುಂದಾಗಿದ್ದರು. ಇಲ್ಲಿ ಜನ ಹೆಚ್ಚಾಗಿ ಸೇರಿದಂತೆ ನಿಯಂತ್ರಣಕ್ಕೆ ನಗರದಲ್ಲಿ ಪೊಲೀಸ್‌(Police) ನಿಯೋಜನೆ ಮಾಡಲಾಗಿತ್ತು. ಇತರೆ ಸ್ಥಳದಲ್ಲಿ ಕೂಡ ಜನರು ಗುಂಪು ಸೇರದಂತೆ ಪೊಲೀಸ್‌ ಇಲಾಖೆ(Police Department) ಕ್ರಮ ವಹಿಸಿತ್ತು. ಮಾಸ್ಕ್‌(Mask), ಸಾಮಾಜಿಕ ಅಂತರ(Social Distance) ಕಾಪಾಡಿಕೊಳ್ಳುವಂತೆ ಎಚ್ಚರಿಕೆ ನೀಡಿದರು.

ಪ್ರವಾಸಿ ತಾಣಗಳಿಗೆ ಹೊರಗಡೆಯಿಂದ ಬಂದವರನ್ನು ಹೊರತುಪಡಿಸಿ ಉಳಿದಂತೆ ನಗರ ಪ್ರದೇಶಗಳಲ್ಲಿ ಅನಗತ್ಯವಾಗಿ ಓಡಾಟ, ಗುಂಪು ಸೇರುವುದು ಕಂಡುಬರಲಿಲ್ಲ. ಕೋವಿಡ್‌(Covid-19) ಹೆಚ್ಚಳ, ಸಾಮಾನ್ಯ ಜ್ವರ(Fever), ನೆಗಡಿ(Cold) ಕೂಡ ಕಾಡುತ್ತಿರುವ ಕಾರಣ ಜನರು ಹೆಚ್ಚಾಗಿ ಓಡಾಟಕ್ಕೆ ಬ್ರೇಕ್‌ ಹಾಕಿದ್ದರು.
 

click me!