ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ಬಂಡೆಯ ಮೇಲೆ ಪ್ರವಾಸಿಗರ ಹುಚ್ಚಾಟ..!

By Girish Goudar  |  First Published Jul 26, 2023, 9:58 AM IST

ಚಾರ್ಮಾಡಿ ಘಾಟ್‌ನಲ್ಲಿ ಗಸ್ತು ತಿರುಗುವ ಪೊಲೀಸರ ಕಣ್ಣುತಪ್ಪಿಸುವ ಪ್ರವಾಸಿಗರು ಹುಚ್ಚಾಟ ಮಾಡುತ್ತಿದ್ದಾರೆ. ಪೊಲೀಸರ ಕಣ್ತಪ್ಪಿಸಿ ಅಪಾಯ ತಂದೊಡ್ಡುತ್ತಿರುವುದು ಪ್ರವಾಸಿಗರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. 


ಚಿಕ್ಕಮಗಳೂರು(ಜು.26):  ಚಾರ್ಮಾಡಿ ಘಾಟ್ ಬಂಡೆಯ ಮೇಲೆ ಪ್ರವಾಸಿಗರು ಹುಚ್ಚಾಟ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ನಲ್ಲಿ ನಡೆದಿದೆ. ಅಪಾಯದ ಸ್ಥಳದಲ್ಲಿ ಪ್ರವಾಸಿಗರು ಬಂಡೆಯನ್ನ ಏರುತ್ತಿದ್ದಾರೆ. 

ಮಳೆಯಿಂದ ಚಾರ್ಮಾಡಿ ಘಾಟ್‌ನಲ್ಲಿ  ಹೊಸ ಲೋಕವೇ ಸೃಷ್ಠಿಯಾಗಿದೆ. ಬಂಡೆಯ ಮೇಲಿಂದ ಸುರಿಯುವ ನೀರಿಗೆ ಮೈಯೊಡ್ಡಲು ಪ್ರವಾಸಿಗರು ಮುಂದಾಗುತ್ತಿದ್ದಾರೆ. ಪ್ರವಾಸಿಗರು ಬಂಡೆ ಹತ್ತುವ ಸಾಹಸ ಮಾಡಿ ಹುಚ್ಚಾಟದಲ್ಲಿ ತೊಡಗಿದ್ದಾರೆ.  

Tap to resize

Latest Videos

undefined

ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ: ಅಡಿಕೆ‌ ತೋಟ ನೋಡಲು ತೆರಳಿದ್ದ ‌ವೃದ್ಧೆ ನಾಪತ್ತೆ

ಮಳೆಯಿಂದ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮಿನಿ ಜಲಪಾತಗಳ ಅನಾವರಣವೇ ಸೃಷ್ಠಿಯಾಗಿದೆ. ಹೀಗಾಗಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿ ಪ್ರಾಣ ಕಳೆದುಕೊಂಡಿರುವ ನಿದೇರ್ಶನವಿದ್ದರೂ ಇಂತಹ ಅಪಾಯ ಸ್ಥಳದಲ್ಲಿ ನಿಂತು ಪ್ರವಾಸಿಗರು ಹುಚ್ಚಾಟದಲ್ಲಿ ತೊಡಗಿದ್ದಾರೆ. 

ನಾಮಫಲಕವಿದ್ದರೂ ಡೋಟ್ ಕೇರ್ ಮಾಡಿ ಪ್ರವಾಸಿಗರಿಂದ ಮೋಜು ಮಸ್ತಿ ಮಾಡುತ್ತಿದ್ದಾರೆ. ಸೆಲ್ಫಿ, ರೀಲ್ಸ್‌ ಮಾಡೋದ್ರಲ್ಲಿ ಪ್ರವಾಸಿಗರು ತೋಡಗಿದ್ದಾರೆ. 

ಚಾರ್ಮಾಡಿ ಘಾಟ್‌ನಲ್ಲಿ ಗಸ್ತು ತಿರುಗುವ ಪೊಲೀಸರ ಕಣ್ಣುತಪ್ಪಿಸುವ ಪ್ರವಾಸಿಗರು ಹುಚ್ಚಾಟ ಮಾಡುತ್ತಿದ್ದಾರೆ. ಪೊಲೀಸರ ಕಣ್ತಪ್ಪಿಸಿ ಅಪಾಯ ತಂದೊಡ್ಡುತ್ತಿರುವುದು ಪ್ರವಾಸಿಗರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. 

click me!