ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ: ಅಡಿಕೆ‌ ತೋಟ ನೋಡಲು ತೆರಳಿದ್ದ ‌ವೃದ್ಧೆ ನಾಪತ್ತೆ

By Girish GoudarFirst Published Jul 26, 2023, 8:51 AM IST
Highlights

ತಾಯಿಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತಾಯಿಹಳ್ಳದಲ್ಲಿ ವೃದ್ಧೆ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ತಾಯಿಹಳ್ಳದ ಬಳಿ‌ ವೃದ್ಧೆಯ ಚಪ್ಪಲಿ, ಉರುಗೋಲು ಪತ್ತೆ. 

ಚಿಕ್ಕಮಗಳೂರು(ಜು.26):  ಮುಳುಗಡೆಯಾದ ಅಡಿಕೆ‌ ತೋಟ ನೋಡಲು ತೆರಳಿದ್ದ ‌ವೃದ್ಧೆ ನಾಪತ್ತೆಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹೊಸಸಿದ್ರಳ್ಳಿ ಗ್ರಾಮದ ಬಳಿ ಇಂದು(ಬುಧವಾರ) ನಡೆದಿದೆ. ಹೊಸಸಿದ್ರಳ್ಳಿ ಗ್ರಾಮದ ರೇವಮ್ಮ (62) ಎಂಬಾಕೆಯೇ ನಾಪತ್ತೆಯಾದ ವೃದ್ಧೆಯಾಗಿದ್ದಾಳೆ. 

ತಾಯಿಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತಾಯಿಹಳ್ಳದಲ್ಲಿ ವೃದ್ಧೆ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ತಾಯಿಹಳ್ಳದ ಬಳಿ‌ ವೃದ್ಧೆಯ ಚಪ್ಪಲಿ, ಉರುಗೋಲು ಪತ್ತೆಯಾಗಿದೆ. 

Latest Videos

ಮಳೆ ಅಬ್ಬರ ಅವಘಡಗಳ ಸರಣಿ, ಮುಳ್ಳಯ್ಯನಗಿರಿಯಲ್ಲಿ ಭೂ ಕುಸಿತ , ಪ್ರವಾಸಿಗರಿಗೆ ನಿರ್ಬಂಧ

ಪಶ್ಚಿಮಘಟ್ಟಗಳ ಸಾಲಿನಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಯಿಹಳ್ಳ ತುಂಬಿ ಹರಿಯುತ್ತಿದೆ. ಅಡಿಕೆ ತೋಟವನ್ನ ತಾಯಿಹಳ್ಳ ಜಲಾವೃತ ಮಾಡಿದೆ. ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

click me!