ಕೋವಿಡ್‌ ವಿರುದ್ಧ ಹೋರಾಟ: ತೋಂಟದಾರ್ಯ ಮಠದಿಂದ 10 ಲಕ್ಷ ರು. ಚೆಕ್‌

By Suvarna News  |  First Published Apr 12, 2020, 3:22 PM IST

ತೋಂಟದಾರ್ಯ ಮಠದದಿಂದ 10 ಲಕ್ಷ ರು. ಚೆಕ್‌ ವಿತರಣೆ| ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ‌ ಪಾಟೀಲ ಹಾಗೂ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಚೆಕ್ ವಿತರಣೆ ಮಾಡಿದ ಡಾ. ಸಿದ್ದರಾಮ ಮಹಾಸ್ವಾಮೀಜಿ|


ಗದಗ(ಏ.12): ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಗದಗ ತೋಂಟದಾರ್ಯ ಮಠ ಸಹಾಯ ಹಸ್ತ ಚಾಚಿದೆ. ಹೌದು, ತೋಂಟದಾರ್ಯ ಮಠದ ಡಾ. ಸಿದ್ದರಾಮ ಮಹಾಸ್ವಾಮೀಜಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ‌ ಪಾಟೀಲ ಹಾಗೂ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಚೆಕ್ ವಿತರಣೆ ಮಾಡಿದ್ದಾರೆ. 

ಮಹಾಮಾರಿ ಕೊರೋನಾ ವಿರುದ್ಧ ಹೋರಾಡುತ್ತಿರುವ ಸರ್ಕಾರ ತೀವ್ರ ಸಂಕಷ್ಟದಲ್ಲಿದೆ. ಹೀಗಾಗಿ ಈ ಸಂದರ್ಭದಲ್ಲಿ ನಾಡಿನ ಮಠಗಳೊಂದಾದ  ತೋಂಟದಾರ್ಯ ಮಠ ಧನ ಸಹಾಯ ಮಾಡುವ ಮೂಲಕ ಉದಾರತೆಯ ಮೆರೆದಿದೆ.  

Tap to resize

Latest Videos

undefined

25 ಕೋಟಿ ರೂ ನೆರವಿನ ಬಳಿಕ ಮತ್ತೆ 3 ಕೋಟಿ ; ಅಕ್ಷಯ್ ಕುಮಾರ್‌ಗೆ ಯಾರೂ ಇಲ್ಲ ಸರಿಸಾಟಿ!

ತೋಂಟದಾರ್ಯ ಮಠದಲ್ಲಿ ತೋಂಟದಾರ್ಯ ಸ್ವಾಮೀಜಿ ಅವರು ಸಿ.ಸಿ‌ ಪಾಟೀಲ ಅವರಿಗೆ ಚೆಕ್ ನೀಡಿ ಆಶೀರ್ವದಿಸಿದ್ದಾರೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಪರಿಹಾರ ನಿಧಿ ಖಾತೆಗೆ 5 ಲಕ್ಷ ಹಾಗೂ ರಾಜ್ಯದ ಮುಖ್ಯಮಂತ್ರಿ ಪರಿಹಾರ ನಿಧಿ ಖಾತೆಗೆ 5 ಲಕ್ಷ ರೂ. ಚೆಕ್ ವಿತರಣೆ ಮಾಡಿದ್ದಾರೆ. ಬ

click me!