ಕೊರೋನಾ ಬಗ್ಗೆ ಡಿಸಿಎಂ ಹೇಳಿಕೆ: ಆತಂಕದಲ್ಲಿ ವಿಜಯಪುರದ ಜನತೆ

By Suvarna NewsFirst Published Apr 12, 2020, 3:07 PM IST
Highlights

ಜಿಲ್ಲಾಧಿಕಾರಿ, ಪೋಲಿಸ್ ವರಿಷ್ಠಾಧಿಕಾರಿ ಉತ್ತಮ ಕಾರ್ಯ ನಿರ್ವಹಿಸಿದ್ದರು| ಕೆಲವರು ಹೊರದೇಶ, ಹೊರ ರಾಜ್ಯ, ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿ ಬಂದವರು ತಮ್ಮನ್ನು ತಾವು ಮುಚ್ಚಿಟ್ಟುಕೊಳ್ಳುವ ಮೂಲಕ ರೋಗ ಹರಡುವಂತೆ ಮಾಡಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ ಕಾರಜೋಳ|

ವಿಜಯಪುರ(ಏ.12): ಇಷ್ಟು ದಿನ ನಿರಾಳವಾಗಿದ್ದ ವಿಜಯಪುರ ಜಿಲ್ಲೆಗೂ ಪರೋಕ್ಷವಾಗಿ ಕೊರೋನಾ ಬಂದಿರುವ ಕುರಿತು ಡಿಸಿಎಂ ಗೋವಿಂದ ಕಾರಜೋಳ ಮಾತನಾಡುವ ಮೂಲಕ ವಿಜಯಪುರ ನಾಗರಿಕರನ್ನು ಆತಂಕ ಗೊಳ್ಳುವಂತೆ ಮಾಡಿದೆ.

ಇಂದು ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಿನ್ನೆ(ಶನಿವಾರದ)ವರೆಗೂ ಸಮಸ್ಯೆಗಳಿರಲಿಲ್ಲ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ, ಪೋಲಿಸ್ ವರಿಷ್ಠಾಧಿಕಾರಿ ಉತ್ತಮ ಕಾರ್ಯ ನಿರ್ವಹಿಸಿದ್ದರು. ಆದರೆ ಕೆಲವರು ಹೊರದೇಶ, ಹೊರ ರಾಜ್ಯ, ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿ ಬಂದವರು ತಮ್ಮನ್ನು ತಾವು ಮುಚ್ಚಿಟ್ಟುಕೊಳ್ಳುವ ಮೂಲಕ ರೋಗ ಹರಡುವಂತೆ ಮಾಡಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಕೊರೋನಾ ಸೋಂಕು ದೃಢ: ರಾತ್ರೋರಾತ್ರಿ ವಿಜಯಪುರದಲ್ಲಿ ಸೀಲ್‌ಡೌನ್‌!

ಸಾರ್ವಜನಿಕರು ಯಾರೂ ಮುಜುಗರಕ್ಕೆ ಒಳಗಾಗಬಾರದು. ಆಸ್ಪತ್ರೆಗೆ ಬಂದು ಸ್ವಯಂ ಪ್ರೇರಣೆಯಿಂದ ತಪಾಸಣೆಗೆ ಒಳಪಡಬೇಕು. ತಪ್ಪಿಸಿಕೊಂಡು ಓಡಾಡಿದರೆ ಸಮಾಜಕ್ಕೆ ಹಾನಿಯಾಗುವುದರ ಜೊತೆಗೆ ನಿಮ್ಮ ಜೀವ ಕೂಡಾ ಉಳಿಯುವದಿಲ್ಲ ಎಂದರು.  ಇನ್ನು ಪೋಲಿಸರು, ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಕೆಲಸ ನಿರ್ವಹಿಸುತ್ತಿದ್ದಾರೆ. ಅವರೊಂದಿಗೆ ಸಹಕರಿಸಬೇಕು ಎಂದು ಡಿಸಿಎಮ್ ಕಾರಜೋಳ ಮನವಿ ಮಾಡಿದರು.
 

click me!