ಜಿಲ್ಲೆಗಾಗಿ ಆಗ್ರಹಿಸಿ ಅ. 3 ರಂದು ಜಮಖಂಡಿ ಬಂದ್‌

Published : Oct 02, 2019, 11:09 AM ISTUpdated : Oct 02, 2019, 11:11 AM IST
ಜಿಲ್ಲೆಗಾಗಿ ಆಗ್ರಹಿಸಿ ಅ. 3 ರಂದು ಜಮಖಂಡಿ ಬಂದ್‌

ಸಾರಾಂಶ

ಜಮಖಂಡಿ ನಗರವನ್ನು ಜಿಲ್ಲೆ ಮತ್ತು ಸಾವಳಗಿ ಪಟ್ಟಣವನ್ನು ತಾಲೂಕನ್ನಾಗಿ ಮಾಡಲು ಅ. 3 ರಂದು ಜಮಖಂಡಿ ನಗರ ಬಂದ್‌ ಮಾಡಲಾಗುವುದು ಎಂದ ಓಲೇಮಠದ ಡಾ.ಚನ್ನಬಸವ ಶ್ರೀಗಳು| ನಗರವನ್ನು ಬಂದ್‌ ಮಾಡಲು ಎಲ್ಲ ಸಂಘ-ಸಂಸ್ಥೆಗಳು, ವ್ಯಾಪಾರಸ್ಥರು, ಶಾಲಾ ಕಾಲೇಜು, ಶಿಕ್ಷಣ ಸಂಸ್ಥೆಗಳು ಬೆಂಬಲ ಸೂಚಿಸಬೇಕು| ಸುತ್ತಮುತ್ತಲಿನ ತಾಲೂಕಿನವರು ಪ್ರತಿಭಟನೆಯಲ್ಲಿ ಭಾಗವಹಿಸಬೇಕು| ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ನೋಡಿಕೊಳ್ಳಬೇಕು ಎಂದ ಶ್ರೀಗಳು|  

ಜಮಖಂಡಿ(ಅ.2): ಜಮಖಂಡಿ ನಗರವನ್ನು ಜಿಲ್ಲೆ ಮತ್ತು ಸಾವಳಗಿ ಪಟ್ಟಣವನ್ನು ತಾಲೂಕನ್ನಾಗಿ ಮಾಡಲು ಅ. 3 ರಂದು ಜಮಖಂಡಿ ನಗರವನ್ನು ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಬಂದ್‌ ಮಾಡಿ ಪ್ರತಿಭಟನೆ ಮಾಡಲಾಗುತ್ತದೆಂದು ಓಲೇಮಠದ ಡಾ.ಚನ್ನಬಸವ ಶ್ರೀ ತಿಳಿಸಿದರು.

ಇಲ್ಲಿನ ಖಾಸಗಿ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರವನ್ನು ಬಂದ್‌ ಮಾಡಲು ಎಲ್ಲ ಸಂಘ-ಸಂಸ್ಥೆಗಳು, ವ್ಯಾಪಾರಸ್ಥರು, ಶಾಲಾ ಕಾಲೇಜು, ಶಿಕ್ಷಣ ಸಂಸ್ಥೆಗಳು ಬೆಂಬಲ ಸೂಚಿಸಬೇಕು. ಸುತ್ತಮುತ್ತಲಿನ ತಾಲೂಕಿನವರು ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ವಕೀಲ ಮಲ್ಲು ಮಠ ಮಾತನಾಡಿ, ಎಲ್ಲ ಮಠಾಧೀಶರ ನೇತೃತ್ವದಲ್ಲಿ ಸುತ್ತಮುತ್ತಲಿನ ತಾಲೂಕಿನ ಜನಪ್ರತಿನಿಧಿಗಳಿಗೆ ಭೇಟಿ ಮಾಡಿ ಮನವಿ ಸಲ್ಲಿಸಿ, ಎಲ್ಲರ ಬೆಂಬಲ ಪಡೆದುಕೊಳ್ಳಲಾಗಿದೆ. ಅ. 4 ರಂದು ಬಾಗಲಕೋಟೆಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಶ್ರೀಗಳು, ಕೊಣ್ಣೂರು ಹೊರ ಗಿನಮಠದ ಡಾ.ವಿಶ್ವಪ್ರಭು ಶ್ರೀಗಳು, ಮುತ್ತಿನಕಂತಿಮಠದ ಶಿವಲಿಂಗ ಶ್ರೀಗಳು, ಚಿಮ್ಮಡ ವಿರ ಕ್ತಮಠದ ಪ್ರಭು ಶ್ರೀಗಳು, ರವಿ ಯಡಹಳ್ಳಿ, ಗಣೇಶ ಶಿರಗಣ್ಣವರ, ಉಮೇಶ ಆಲಮೇಲಕರ ಇತರರು ಇದ್ದರು.
 

PREV
click me!

Recommended Stories

ಶಿವಮೊಗ್ಗ: ಕಾಂಗ್ರೆಸ್ ಪ್ರತಿಭಟನೆಯಲ್ಲಿ ಎಎಸ್ಐ ಮಾಂಗಲ್ಯ ಸರ ಕಳುವು: ಕಣ್ಣೀರಿಟ್ಟ ಅಧಿಕಾರಿ, ಕದ್ದವರು ಯಾರು?
ವೈದ್ಯಾಧಿಕಾರಿಯಿಂದ ನರ್ಸ್‌ಗೆ ನಿರಂತರ ಕಿರುಕುಳ, ಆಸ್ಪತ್ರೆಯಲ್ಲೇ 20ಕ್ಕೂ ಹೆಚ್ಚು ನಿದ್ರೆ ಮಾತ್ರೆ ಸೇವಿಸಿ ಆತ್ಮ*ಹತ್ಯೆ ಯತ್ನ!