ಕರ್ನಾಟಕದ ಜನತೆಗೆ ಸಂತಸದ ಸುದ್ದಿ: ಟೊಮೆಟೋ ದರ ಇಳಿಕೆ

By Kannadaprabha News  |  First Published Aug 5, 2023, 3:15 AM IST

ಶುಕ್ರವಾರ ನಡೆದ ಹರಾಜಿನಲ್ಲಿ 15 ಕೆ.ಜಿ ನಾಟಿ ಟೊಮೆಟೊ ಬಾಕ್ಸ್‌ ದರ 1,500 ರೂ. ಇತ್ತು. ಅತಿ ಹೆಚ್ಚು ಎಂದರೆ 1,680 ರೂ.ಗೆ ಮಾರಾಟವಾಗಿದೆ. ಇದೇ ಪ್ರಮಾಣದ ಟೊಮೆಟೊ ಗುರುವಾರ ಸರಾಸರಿ 1,700 ರೂ.ಗೆ, ಅತಿ ಹೆಚ್ಚು ಎಂದರೆ 1,810 ರೂ.ಗೆ ಮಾರಾಟವಾಗಿತ್ತು. ನಾಲ್ಕು ದಿನಗಳ ಹಿಂದೆಯಷ್ಟೇ 15 ಕೆ.ಜಿ.ಬಾಕ್ಸ್‌ ಟೊಮೆಟೊ 2,700 ರೂ.ಗೆ ಮಾರಾಟವಾಗಿ ಸಾರ್ವಕಾಲಿಕ ದಾಖಲೆ ನಿರ್ಮಿಸಿತ್ತು.


ಕೋಲಾರ(ಆ.05):  ಟೊಮೆಟೋ ಪೂರೈಕೆ ಹೆಚ್ಚಿದಂತೆ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೋ ದರ ಮತ್ತಷ್ಟು ಕಡಿಮೆಯಾಗಿದೆ. ಶುಕ್ರವಾರ ನಡೆದ ಹರಾಜಿನಲ್ಲಿ 15 ಕೆ.ಜಿ ನಾಟಿ ಟೊಮೆಟೊ ಬಾಕ್ಸ್‌ ದರ 1,500 ರೂ. ಇತ್ತು. ಅತಿ ಹೆಚ್ಚು ಎಂದರೆ 1,680 ರೂ.ಗೆ ಮಾರಾಟವಾಗಿದೆ. ಇದೇ ಪ್ರಮಾಣದ ಟೊಮೆಟೊ ಗುರುವಾರ ಸರಾಸರಿ 1,700 ರೂ.ಗೆ, ಅತಿ ಹೆಚ್ಚು ಎಂದರೆ 1,810 ರೂ.ಗೆ ಮಾರಾಟವಾಗಿತ್ತು. ನಾಲ್ಕು ದಿನಗಳ ಹಿಂದೆಯಷ್ಟೇ 15 ಕೆ.ಜಿ.ಬಾಕ್ಸ್‌ ಟೊಮೆಟೊ 2,700 ರೂ.ಗೆ ಮಾರಾಟವಾಗಿ ಸಾರ್ವಕಾಲಿಕ ದಾಖಲೆ ನಿರ್ಮಿಸಿತ್ತು.

ಎಪಿಎಂಸಿಗೆ 10,590 ಕ್ವಿಂಟಲ್‌ ಅಂದರೆ 70,600 ಬಾಕ್ಸ್‌ ಟೊಮೆಟೊ ಆವಕವಾಗಿತ್ತು. ಗುರುವಾರ 9,703 ಕ್ವಿಂಟಲ್‌ ಅಂದರೆ 64,693 ಬಾಕ್ಸ್‌ ಟೊಮೆಟೊ ಪೂರೈಕೆ ಆಗಿತ್ತು. ಒಂದೇ ದಿನದಲ್ಲಿ ಸುಮಾರು ಆರು ಸಾವಿರ ಬಾಕ್ಸ್‌ ಟೊಮೆಟೊ ಹೆಚ್ಚು ಪೂರೈಕೆ ಆಗಿದೆ. ಹೀಗಾಗಿ, ಬೇಡಿಕೆ ತಗ್ಗಿದೆ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

Latest Videos

undefined

ದಿಲ್ಲಿಯಲ್ಲಿ ಕೇಜಿ ಟೊಮೆಟೋ 260: ಸಾರ್ವಕಾಲಿಕ ದಾಖಲೆ, ಕಂಗಾಲಾದ ಗ್ರಾಹಕ..!

ಪಿಎಸ್‌ಆರ್‌ ಮಂಡಿಯವರು ರೈತರಿಂದ 400 ಬಾಕ್ಸ್‌ಗಳನ್ನು ತಲಾ 1,680 ರೂ.ಗೆ, ಜೆಕೆ ಮಂಡಿಯವರು 500 ಬಾಕ್ಸ್‌ಗಳನ್ನು ತಲಾ 1,550 ರೂ.ಗೆ, ಕೆಎನ್‌ಎನ್‌ ಮಂಡಿಯವರು 650 ಬಾಕ್ಸ್‌, ಕೆಎನ್‌ಎಸ್‌ ಮಂಡಿಯವರು 400 ಬಾಕ್ಸ್‌, ಎಸ್‌ಎಂಎಸ್‌ ಮಂಡಿಯವರು 700 ಬಾಕ್ಸ್‌ಗಳನ್ನು ತಲಾ 1,500ರ ದರದಲ್ಲಿ ಖರೀದಿಸಿದ್ದಾರೆ.

click me!