ಈರುಳ್ಳಿ, ಟೊಮ್ಯಾಟೋ 100 ರೂ. ಇದ್ದಾಗ ಸರ್ಕಾರ ಮಧ್ಯಸ್ಥಿಕೆವಹಿಸಿ ಕಡಿಮೆ ಮಾಡಿತು; ಈಗ ದರ ಕುಸಿದಿದೆ ಎಲ್ಲಿದೆ ಸರ್ಕಾರ

By Sathish Kumar KH  |  First Published Feb 28, 2024, 7:54 PM IST

ದೇಶದಲ್ಲಿ ಈರುಳ್ಳಿ, ಟೊಮ್ಯಾಟೋ ದರ 100 ರೂ. ಗಡಿ ದಾಟಿದಾಗ ಸರ್ಕಾರವೇ ಮಧ್ಯಸ್ಥಿಕೆವಹಿಸಿ ದರ ಕಡಿಮೆ ಮಾಡಿತ್ತು. ಆದರೆ, ಈಗ ದರ ಕುಸಿತವಾಗಿದೆ ಎಲ್ಲಿದೆ ಸರ್ಕಾರ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಫೆ.28): 
ಟೊಮ್ಯಾಟೊ, ಈರುಳ್ಳಿ ದರ ಕುಸಿತದಿಂದ ಕಂಗಾಲಾದ ಕೋಟೆನಾಡಿನ ಅನ್ನದಾತರು. ನಿಗದಿತ ದರ ಘೋಷಿಸಿ ಎಂದು ಡಿಸಿ ಕಚೇರಿ ಮುಂದೆ ರಸ್ತೆ ಮೇಲೆ ತರಕಾರಿ ಸುರಿದು ಆಕ್ರೋಶ‌ ಹೊರಹಾಕಿದ ರೈತರು. ಬೆಲೆ ಜಾಸ್ತಿ ಇದ್ದಾಗ ಕಡಿಮೆ ಮಾಡುವ ಸರ್ಕಾರ, ದರ ಕುಸಿತ ಕಂಡಾಗ ಜಾಸ್ತಿ ಮಾಡಲು ಹಿಂದೇಟು ಯಾಕೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೀಗೆ ರಸ್ತೆ ಮೇಲೆ ಈರುಳ್ಳಿ, ಟೊಮ್ಯಾಟೊ ಸುರಿದು ಆಕ್ರೋಶ ಹೊರ ಹಾಕ್ತಿರೋ ರೈತರು.‌ ಕೊರಳಿಗೆ ಈರುಳ್ಳಿ ಹಾಕಿಕೊಂಡು ನಮಗೆ ನ್ಯಾಯ ಕೊಡಿ ಸ್ವಾಮಿ ಎಂದು ಬೊಬ್ಬೆ ಹಾಕ್ತಿರೋ ರೈತರು. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಬರದನಾಡು ಚಿತ್ರದುರ್ಗ. ಕಳೆದೊಂದು ತಿಂಗಳಿಂದಲೂ ಈರುಳ್ಳಿ, ಟೊಮ್ಯಾಟೊ ಬೆಲೆ ದಿನದಿಂದ ದಿನಕ್ಕೆ ಕುಸಿತ ಕಂಡಿದ್ದು, ಸಾಲ ಸೂಲ ಮಾಡಿ ಬೆಳೆದಿದ್ದ ಅನ್ನದಾತರು ಇಂದು ಬೀದಿದೆ ಬಂದು ನಿಂತಿದ್ದಾರೆ.

Latest Videos

undefined

ನಟ ಡಾಲಿ ಧನಂಜಯ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ರಾಯಭಾರಿಯಾಗಿ ನೇಮಕ

ಈ ಹಿಂದೆ 100 ರೂಪಾಯಿಗೆ 1 ಕೆಜಿ ಈರುಳ್ಳಿ ಇದ್ದ ಸಂದರ್ಭದಲ್ಲಿ ಸರ್ಕಾರವೇ ಖುದ್ದು ಎಂಟ್ರಿಯಾಗಿ ದರ ಕಡಿಮೆ ಮಾಡಿ ಗ್ರಾಹಕರಿಗೆ ಹೊರೆ ಆಗಬಾರದು ಎಂದು ರೈತರ ಹೊಟ್ಟೆ ಮೇಲೆ ಬರೆ ಹಾಕಿತ್ತು. ಆದ್ರೆ ಇಂದು 5 ರೂಪಾಯಿಗೂ ಈರುಳ್ಳಿ ಕೊಳ್ಳುವವರು ಯಾರೂ ಇಲ್ಲದಂತಾಗಿದೆ. ಈಗ ಸರ್ಕಾರ ಯಾಕೆ ಮಧ್ಯ ಪ್ರವೇಶಿಸಿ ರೈತರಿಗೆ ಆಗ್ತಿರುವ ಅನ್ಯಾಯವನ್ನು ಯಾಕೆ ಬಗೆಹರಿಸ್ತಿಲ್ಲ. ದರ ಕುಸಿತದಿಂದ ರೈತರು ವಿಷ ಕುಡಿಯುವ ಸ್ಥಿತಿ ಬಂದಿದೆ. ಇನ್ನಾದ್ರು ಸರ್ಕಾರ ಟೊಮ್ಯಾಟೊ, ಈರುಳ್ಳಿ ದರ ನಿಗದಿ ಪಡಿಸಿ ರೈತರನ್ನ ಸಂಕಷ್ಟದಿಂದ ಪಾರು ಪಾಡಿ ಎಂದು ರೈತರು ಸರ್ಕಾರಕ್ಕೆ ಆಗ್ರಹಿಸಿದರು.

ಈ ಹಿಂದೆ ಟೊಮ್ಯಾಟೊ ಬೆಲೆ ಗಗನಕ್ಕೆ ಏರಿದಾಗ ಸರ್ಕಾರ ಸೇರಿದಂತೆ ಜನರು ಕೂಡ ರೈತರು ಪಾವನರಾಗಿ ಹೋದರು ಎಂದು ಬೊಬ್ಬೆ ಹೊಡೆಯುತ್ತಿದ್ದರು. ಆದ್ರೆ ಈ ದಿನ ಅದೇ ರೈತರು ಬೆಲೆ ಕುಸಿತಕ್ಕೆ ಕಂಗಾಲಾಗಿ ಬೀದಿಗೆ ಬಂದಿದ್ದಾರೆ ಇವಾಗ ಯಾರು ಹೊಣೆ. ಈರುಳ್ಳಿ, ಟೊಮ್ಯಾಟೊ ಬೆಲೆ ಕುಸಿತದಿಂದ ಇಂದು ಬೆಳೆಯನ್ನು ಜಮೀನಿನಲ್ಲಿಯೇ ಬಿಡುವಂತಹ ವಾತಾವರಣ ಸೃಷ್ಟಿಯಾಗಿದೆ. ಅದನ್ನು ಬಿಡಿಸು ಮಾರುವುದಕ್ಕೆ ಕೊಡುವ ಕೂಲಿಯೂ ಗಿಟ್ಟುತ್ತಿಲ್ಲ. ಆದ್ದರಿಂದ ಸರ್ಕಾರ ಬೆಂಬಲ ಬೆಲೆ ನಿಗದಿ ಪಡಿಸಿ ರೈತರು ಸಾಲ ಸೂಲಕ್ಕೆ ಸಿಲುಕಿರುವವರಿಗೆ ನೆರಬಾಗಬೇಕಾಗಿ ವಿನಂತಿ ಎಂದು ಮನವಿ ಮಾಡಿದರು.

ಅವ್ನಲ್ಲಾ.. ಅವ್ನಲ್ಲಾ.. ಇಲ್ಲಿದ್ದಾನೆ ನೋಡಿ, ಪಾಕ್ ಪರ ಘೋಷಣೆ ಕೂಗಿದ ಆರೋಪಿ; ಬಿಜೆಪಿ ಆರೋಪ

ಒಟ್ಟಾರೆಯಾಗಿ ಟೊಮ್ಯಾಟೊ, ಈರುಳ್ಳಿ ಬೆಲೆ ಕುಸಿತದಿಂದ ರೈತರಿಗೆ ದಿಕ್ಕು ತೋಚದಂತಾಗಿದ್ದು, ಮಾರುಕಟ್ಟೆಗೆ ತೆಗೆದುಕೊಂಡ ಹೋಗಿ ಮಾರಲಿಕ್ಕೂ ಆಗದೇ ಬೀದಿಗೆ ತಂದು ಸುರಿಯುವ ದುಸ್ಥಿತಿ ಬಂದೊದಗಿದೆ. ಆದ್ದರಿಂದ ಸರ್ಕಾರ ರೈತರ ಬೆಳೆಗೆ ನಿಗದಿತ ಬೆಲೆ ಘೋಷಿಸಿ ರೈತರನ್ನ ಕಾಪಾಡಬೇಕಿದೆ.

click me!