ಕಡಲೆ ಕಾಳು ಹಾಗೂ ಸಾಸಿವೆಕಾಳು ಗಣೇಶ, ಉಗ್ರನರಸಿಂಹ, ಮಹಾನವಮಿ ದಿಬ್ಬ, ರಾಣಿಸ್ನಾನ ಗೃಹ ಸೇರಿದಂತೆ ಇನ್ನಿತರ ಸ್ಮಾರಕಗಳ ವೀಕ್ಷಿಸಿದ ಬಹುಭಾಷಾ ನಟ ಶ್ರೀಕಾಂತ್ ಭೇಟಿ| ತೆಲುಗು ಚಲನಚಿತ್ರ ರಂಗದಲ್ಲಿ ಅಪಾರ ಖ್ಯಾತಿ ಗಳಿಸಿದ ನಟ ಶ್ರೀಕಾಂತ್| ಮೂಲತಃ ಕೊಪ್ಪಳ ಜಿಲ್ಲೆ ಗಂಗಾವತಿ ನಿವಾಸಿ ನಟ ಶ್ರೀಕಾಂತ್|
ಹೊಸಪೇಟೆ(ಅ.14): ವಿಶ್ವಪರಂಪರೆ ತಾಣ ಹಂಪಿಗೆ ಮಂಗಳವಾರ ಬಹುಭಾಷಾ ನಟ ಶ್ರೀಕಾಂತ್ ಭೇಟಿ ನೀಡಿ ಸ್ಮಾರಕಗಳನ್ನು ವೀಕ್ಷಿಸಿದ್ದಾರೆ.
ಹಂಪಿಯ ಶ್ರೀವಿರೂಪಾಕ್ಷೇಶ್ವರ ಸ್ವಾಮಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ ಶ್ರೀಕಾಂತ್ ಬಳಿಕ ದೇವಸ್ಥಾನದ ಎಡಭಾಗದಲ್ಲಿರುವ ಪಂಪಾಂಬಿಕೆ ಹಾಗೂ ಭುವನೇಶ್ವರಿ ದೇವಿಯ ದರ್ಶನ ಪಡೆದುಕೊಂಡರು. ದೇಗುಲದ ಅರ್ಚಕರು ಶ್ರೀಕಾಂತ್‌ರನ್ನು ಗೌರವಿಸಿದರು. ನಂತರ ಕಡಲೆ ಕಾಳು ಹಾಗೂ ಸಾಸಿವೆಕಾಳು ಗಣೇಶ, ಉಗ್ರನರಸಿಂಹ, ಮಹಾನವಮಿ ದಿಬ್ಬ, ರಾಣಿಸ್ನಾನ ಗೃಹ ಸೇರಿದಂತೆ ಇನ್ನಿತರ ಸ್ಮಾರಕಗಳ ವೀಕ್ಷಿಸಿದರು.
undefined
ಸಚಿವ ಶ್ರೀರಾಮುಲು ಖಾತೆ ಬದಲು: ಸಾಮಾಜಿಕ ಜಾಲತಾಣದಲ್ಲಿ ಭುಗಿಲೆದ್ದ ಆಕ್ರೋಶ
ಮೂಲತಃ ಕೊಪ್ಪಳ ಜಿಲ್ಲೆ ಗಂಗಾವತಿ ನಿವಾಸಿಯಾಗಿರುವ ನಟ ಶ್ರೀಕಾಂತ್ ತೆಲುಗು ಚಲನಚಿತ್ರ ರಂಗದಲ್ಲಿ ಅಪಾರ ಖ್ಯಾತಿ ಗಳಿಸಿದ್ದು, ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇಗುಲದ ಪರಮ ಭಕ್ತರಾಗಿದ್ದಾರೆ. ಹೊಸಪೇಟೆ ಹಾಗೂ ಗಂಗಾವತಿ ಭಾಗದಲ್ಲಿ ಸ್ನೇಹಿತರನ್ನು ಹೊಂದಿದ್ದಾರೆ. ಅವರು ಈ ಭಾಗದಲ್ಲಿ ಆಗಮಿಸಿದರೆ, ಸ್ನೇಹಿತರ ಮನೆಗಳಿಗೆ ಭೇಟಿ ನೀಡಿ, ಸರಳತೆ ಮೆರೆಯುತ್ತಾರೆ.