ಬೆಂಗಳೂರು (ಸೆ.01): ರಾಜಧಾನಿ ಬೆಂಗಳೂರು ನಗರದವನ್ನು ಸಂಪರ್ಕಿಸುವ ತುಮಕೂರು ರಸ್ತೆಯ ನವಯುಗ ಟೋಲ್ ಮತ್ತು ಹಳೆ ಮದ್ರಾಸು ರಸ್ತೆಯ ಲ್ಯಾಂಕೋ ಹೊಸಕೋಟೆ ಟೋಲ್‌ಗಳ ಶುಲ್ಕ ಹೆಚ್ಚಳ ಮಾಡಿ ಭಾರತೀಯ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ ಆದೇಶಿಸಿದ್ದು ಇಂದಿನಿಂದಲೇ ಜಾರಿಗೆ ಬರಲಿದೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಶುಲ್ಕ ಪರಿಷ್ಕರಣೆ ಮಾಡಲಾಗಿತ್ತು.
ಒಂದು ವರ್ಷದ ಬಳಿಕ ಇದೀಗ ಮತ್ತೆ ಶುಲ್ಕ ಹೆಚ್ಚಿಸಲಾಗಿದೆ.
ವಾಣಿಜ್ಯ ಇಲಾಖೆ ಅಧಿಕಾರಿಗಳ ಭ್ರಷ್ಟಾಚಾರ ಬಯಲು ಮಾಡಿದ ಕವರ್ ಸ್ಟೋರಿ!
ಬೆಂಗಳೂರು - ತುಮಕೂರು ಮಾರ್ಗದ ನೆಲಮಂಗಲ ಟೋಲ್‌ನಲ್ಲಿ ಕಾರುಗಳ ದ್ವಿಮುಖ ಸಂಚಾರಕ್ಕೆ 70 ರು. ಪಾವತಿಸಬೇಕು. ಏಕ ಮುಖ ಸಂಚಾರಕ್ಕೆ ಹಳೆಯ ದರ 45 ರು. ಮುಂದುವರೆಯಲಿದೆ. ಮಾಸಿಕ ಪಾಸುಗಳ ಶುಲ್ಕವನ್ನು 40 ರು.ಗಳಷ್ಟು ಹೆಚ್ಚಳ ಮಾಡಲಾಗಿದೆ. ಏಕಮುಖ ಸಂಚಾರಕ್ಕೆ ಬಸ್ 5 ರು. ಟ್ರಕ್‌ಗಳು 10 ರು. ಹೆಚ್ಚುವರಿಯಾಗಿ ಪಾವತಿಸಬೇಕು. ಅವುಗಳ ಮಾಸಿಕ ಪಾಸುಗಳ ದರವನ್ನು 140 ರು. ಏರಿಕೆ ಮಾಡಲಾಗಿದೆ. ಲಘು ವಾಣಿಜ್ಯ ವಾಹನಗಳ ಪಾಸುಗಳ ದರವನ್ನು 75 ರು. ಹೆಚ್ಚಿಸಲಾಗಿದೆ.
ಹೊಸಕೋಟೆ ಟೋಲ್ ಪ್ಲಾಜಾದಲ್ಲಿ ಕಾರು ಮತ್ತು ಬಸ್‌ಗಳಿಗೆ ಏಕಮುಖ ಸಂಚಾರಕ್ಕೆ ದರಗಳನ್ನು ಏರಿಕೆ ಮಾಡಿಲ್ಲ. ಆದರೆ ದ್ವಿಮುಖ ಸಂಚಾರ ನಡೆಸುವಾಗ 5 ರು. ಪಾವತಿಸಬೇಕು. ಮಾಸಿಕ ಪಾಸು ದರ 560 ರು. ಆಗಲಿದೆ. ಲಘು ವಾಹನಗಳು ಮಿನಿ ಬಸ್‌ಗಳ ಏಕಮುಕ ಸಂಚಾರ ಶುಲ್ಕ5 ರು. ಹೆಚ್ಚಾಗಲಿದೆ.