Haveri : ಸಾಹಿತ್ಯ ಸಮ್ಮೇಳನದಲ್ಲಿ ಇಂದು ಸಾಂಸ್ಕೃತಿಕ ಕಾರ್ಯಕ್ರಮ ವೈಭವ

By Kannadaprabha News  |  First Published Jan 6, 2023, 10:14 AM IST

ಹಾವೇರಿ ನಗರದಲ್ಲಿ ಜನವರಿ 6,7 ಮತ್ತು 8ರಂದು ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿದಿನ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಇಂದು ಸಂಜೆ 7 ಗಂಟೆಯಿಂದ 11 ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಶಿರಸಿ ವಿದುಷಿ ಹೆಗಡೆ ತಂಡದಿಂದ ಭರತನಾಟ್ಯ, ಬ್ಯಾಡಗಿ ಪ್ರಕಾಶ ಕೊರಮರ ತಂಡದಿಂದ ಸುಗಮ ಸಂಗೀತ, ಸೇರಿದಂತೆ ಹಲವು ಕಾರ್ಯಕ್ರಮಗಳಿವೆ


ಹಾವೇರಿ (ಜ.6) : ಹಾವೇರಿ ನಗರದಲ್ಲಿ ಜನವರಿ 6,7 ಮತ್ತು 8ರಂದು ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿದಿನ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ‘ಸಾಮರಸ್ಯದ ಭಾವ ಕನ್ನಡದ ಜೀವ’ ಧ್ಯೇಯದೊಂದಿಗೆ ಕನಕ, ಶರೀಫ ಮತ್ತು ಸರ್ವಜ್ಞರ ಆಯ್ದ ರಚನೆಗಳ ಗಾಯನ ಮತ್ತು ನೃತ್ಯ ಕಾರ್ಯಕ್ರಮ, ನಾವಾಡುವ ನುಡಿಯೇ ಕನ್ನಡ ನುಡಿ ಎಂಬ ಧ್ಯೇಯದೊಂದಿಗೆ ಕನ್ನಡ ನಾಡು ನುಡಿ ಸಂಸ್ಕೃತಿಯ ಹಿರಿಮೆಯನ್ನು ಸಾರುವ ಖ್ಯಾತ ಕವಿಗಳ ಆಯ್ದ ಚಲನಚಿತ್ರ ಗೀತೆಗಳ ಗಾಯನ ಮತ್ತು ನೃತ್ಯ ಕಾರ್ಯಕ್ರಮ, ಆಳ್ವಾಸ್‌ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಗಂಗಾವತಿ ಪ್ರಾಣೇಶ ತಂಡದಿಂದ ಹಾಸ್ಯ ಕಾರ್ಯಕ್ರಮ, ಖಾಸಿಮ್‌ ಅಲಿ, ಹನುಮಂತ ಲಮಾಣಿ ಮತ್ತು ರುಬಿನಾ ತಂಡದಿಂದ ಕನ್ನಡ ಗೀತೆಗಳ ಗಾಯನ, ಡಾ. ಜೂನಿಯರ್‌ ರಾಜಕುಮಾರ್‌ ಖ್ಯಾತಿಯ ಅಶೋಕ ಬಸ್ತಿಯವರಿಂದ ರಸಮಂಜರಿ ಕಾರ್ಯಕ್ರಮಗಳು ಜರುಗಲಿವೆ.

ಕನಕ-ಶರೀಫ-ಸರ್ವಜ್ಞ ಪ್ರಧಾನ ವೇದಿಕೆಯಲ್ಲಿ ಜನವರಿ 6ರಂದು ಬಸವರಾಜ ಭಜಂತ್ರಿ ತಂಡದಿಂದ ಶಹನಾಯಿ, ಲತಾ ಪಾಟೀಲ ತಂಡದಿಂದ ಜನಪದ, ಪರಿಮಳಾ ಗೋವಿಂದರಾಜ ರಟ್ಟಿಹಳ್ಳಿ ತಂಡದಿಂದ ಭಾವಗೀತೆ, ಸಂಧ್ಯಾ ಬಾಳಣ್ಣನವರ ತಂಡದಿಂದ ಭರತ ನಾಟ್ಯ, ಮಂಜುನಾಥ ಭಜಂತ್ರಿ ತಂಡದಿಂದ ಶಹನಾಯಿ, ಬಿ.ಎಂ. ಕೆಂದುಳ್ಳಿ ತಂಡದಿಂದ ಲಘು ಸಂಗೀತ, ಶರೀಫ ಮಾಕಪ್ಪನವರ ತಂಡದಿಂದ ಜಾನಪದ ಗೀತೆ, ತಿಪ್ಪೇಸ್ವಾಮಿ ತಂಡದಿಂದ ಭಾವಗೀತೆ, ಹನುಮಂತಪ್ಪ ತಿಮ್ಮಾಪೂರ ತಂಡದಿಂದ ವಾಯಿಲಿನ್‌ ವಿಕ್ರಮ ಮನ್ನಾರಿ ಮತ್ತು ಗಿರೀಶ ಬಡಿಗೇರ ತಂಡದಿಂದ ತಬಲಾ ಜುಗಲಬಂದಿ, ಡಾ.ಕೆ.ಸಿ. ನಾಗರಜ್ಜಿ ತಂಡದಿಂದ ಜಾನಪದ ಗೀತೆ, ಬಸವರಾಜ ಸಾವಕ್ಕನವರ ತಂಡದಿಂದ ಕ್ಲಾರಿಯೋನೇಟ್‌, ಹನುಮಂತಪ್ಪ ಕಲಿವಾಳ ತಂಡದಿಂದ ಲಾವಣಿ ಪದ, ಹುಕ್ಕೇರಿಮಠ ಅಕ್ಕನಬಳಗ ಪ್ರೇಮಾ ವಳಸಂಗಳ ತಂಡದಿಂದ ಸಂಗೀತ ಕಾರ್ಯಕ್ರಮ, ಶೋಭಾ ತಿಮಲಾಪೂರ ತಂಡದಿಂದ ಭಾವಗೀತೆ ಕರ್ಯಕ್ರಮ ನಡೆಯಲಿದೆ.

Tap to resize

Latest Videos

undefined

ಕನ್ನಡ ಸಾಹಿತ್ಯ ಸಮ್ಮೇಳನ: ಸಾಮರಸ್ಯದ ಭಾವ-ಕನ್ನಡದ ಜೀವ ಸೇರಿ ಇಂದು ಹಲವು ಗೋಷ್ಠಿ

ಸಂಜೆ 7 ಗಂಟೆಗೆ ಉದ್ಘಾಟನೆ

ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ಜರುಗಲಿದ್ದು, ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಯಿ(Basavaraj Bommai) ಅವರ ಉಪಸ್ಥಿತಿಯಲ್ಲಿ ಶಾಸಕರಾದ ನೆಹರು ಓಲೇಕಾರ(Neharu Olekar) ಅಧ್ಯಕ್ಷತೆ ವಹಿಸುವರು. ವಿಧಾನಪರಿಷತ್‌ ಸದಸ್ಯರಾದ ಆರ್‌.ಶಂಕರ್‌(R Shankar) ಉದ್ಘಾಟನೆ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಮನೋಹರ ತಹಶೀಲ್ದಾರ(Manohar tahsildar) ಭಾಗವಹಿಸಲಿದ್ದಾರೆ. ಸಮ್ಮೇಳನಾಧ್ಯಕ್ಷರಾದ ಡಾ. ದೊಡ್ಡರಂಗೇಗೌಡ(Dr Doddarangegowda), ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾದ ಡಾ. ಮಹೇಶ ಜೋಶಿ(Dr Mahesh Joshi) ಅವರು ಉಪಸ್ಥಿತರಿರುವರು.

ಸಪ್ತಸ್ವರ ಆಟ್ಸ್‌ ಮತ್ತು ಕ್ರಿಯೇಷನ್ಸ್‌ ತಂಡದಿಂದ ನೃತ್ಯ, ಜೋಶಿ ಡ್ಯಾನ್ಸ್‌ ಅಕಾಡೆಮಿ ತಂಡದಿಂದ ನೃತ್ಯ, ಟಿ. ರಾಜಾರಾಮ ಗಾಯನ, ವೆಂಕಟೇಶ ಆಲ್‌ಕೋಡ್‌ ಗಾಯನ, ಎಚ್‌.ಎಸ್‌. ವೇಣುಗೋಪಾಲ ಗಾಯನ, ವಂದನಾ ಭಾಸ್ಕರ ಗಾಯನ, ಮಾರ್ತಂಡ ನೃತ್ಯ ಮತ್ತು ಸಂಗೀತಾ ಕಲಾ ಸಂಸ್ಥೆ ತಂಡದಿಂದ ನೃತ್ಯ, ಹನುಮಂತಪ್ಪ ಗಾಯನ, ವಿಜಯಕುಮಾರ ಗಾಯನ, ಡಾ. ಶರ್ಮಿಳಾ ಹಿರೇಮಠ ಗಾಯನ, ತುಷಾರ ಮಾಳಗಿ ಗಾಯನ, ಲಕ್ಷ್ಮೇಶ್ವರ ಬಿ.ಡಿ. ತಟ್ಟಿವಸತಿ ಶಾಲೆ ತಂಡದಿಂದ ನೃತ್ಯ, ಬಸವರಾಜ ಶಿಗ್ಗಾಂವಿ ಗಾಯನ, ವಸುದೇಂದ್ರ ವೈದ್ಯ ಗಾಯನ, ಶಿಗ್ಗಾಂವಿ ಬಸವೇಶ್ವರ ಸಾಂಸ್ಕೃತಿಕ ಕ್ರೀಡಾ ಸಂಘದ ತಂಡದಿಂದ ನೃತ್ಯ, ಶಿವಕುಮಾರ ಮಹಾಂತ ಗಾಯನ, ಎ.ಬಿ. ಗುಡ್ಡಳ್ಳಿ ಮತ್ತು ಸಿಂದು ಗಿರೀಶ ನೃತ್ಯ ಮತ್ತು ಗಾಯನ, ಹುಬ್ಬಳ್ಳಿ ಜಯಸಂತೋಷಿನಿ ನೃತ್ಯ ಕಲಾನಿಕೇತನ, ಹಾವೇರಿ ವಿದ್ಯಾ ನರಗುಂದ ಹಾಗೂ ಸಂಗಡಿಗರು ತಂಡದಿಂದ ಭರತನಾಟ್ಯ, ಹಾವೇರಿ ವಿ.ಎಂ. ವೀರಭದ್ರಯ್ಯ ಹಾಗೂ ರೇಖಾ ಕುಲಕರ್ಣಿ ಸುಗಮ ಸಂಗೀತ, ಖಾಸೀಂಅಲಿ, ಹನುಮಂತ ಲಮಾಣಿ ಮತ್ತು ರುಬಿನಾ ತಂಡದಿಂದ ಸಂಗೀತ ವೈವಿದ್ಯ, ಬಳ್ಳಾರಿ ಮಲ್ಲನಗೌಡ ಬಂಡೆ ತಂಡದಿಂದ ತತ್ವಪದ, ಬೆಂಗಳೂರು ನಂದಕಿಶೋರ ತಂಡದಿಂದ ನೃತ್ಯ ರೂಪಕ, ಗಂಗಾವತಿ ಪ್ರಾಣೇಶ ಹಾಗೂ ತಂಡದಿಂದ ಹಾಸ್ಯ ಕಾರ್ಯಕ್ರಮ ಜರುಗಲಿದೆ.

ಪಾಪು-ಚಂಪಾ ವೇದಿಕೆ:

ಸಂಜೆ 7 ಗಂಟೆಯಿಂದ 11 ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಶಿರಸಿ ವಿದುಷಿ ಹೆಗಡೆ ತಂಡದಿಂದ ಭರತನಾಟ್ಯ, ಬ್ಯಾಡಗಿ ಪ್ರಕಾಶ ಕೊರಮರ ತಂಡದಿಂದ ಸುಗಮ ಸಂಗೀತ, ಹಾವೇರಿ ಮಕರಂದ ಕಲಾ ಸಂಸ್ಥೆ ತಂಡದಿಂದ ಸಮೂಹ ನೃತ್ಯ, ಮಾನಸಾ ಹೆಚ್‌.ಎಸ್‌ ತಂಡದಿಂದ ಭರತನಾಟ್ಯ, ಚಿಕ್ಕಮಗಳೂರು ಮಂಜುನಾಥ ಬಕ್ಕಿ ತಂಡದಿಂದ ಜಾನಪದ ಗೀತೆ, ಹಾನಗಲ್‌ ಹೆಗ್ಗಪ್ಪ ದೊಡ್ಡಮನಿ ತಂಡದಿಂದ ಭಜನೆ, ಚಿಕ್ಕೋಡಿ ಎಲ್‌.ಎಸ್‌.ಪಡತಾರೆ ತಂಡದಿಂದ ಸಮೂಹ ನೃತ್ಯ, ಮಡಿಕೇರಿ ಮಂಜು ಬಾರ್ಗವಿ ತಂಡದಿಂದ ಸಮೂಹ ನೃತ್ಯ, ಮೋಟೆಬೆನ್ನೂರ ಅಡಿವೆಪ್ಪ ಕುರಿಯವರ ತಂಡದಿಂದ ತತ್ವಪದ, ಶಿಗ್ಗಾಂವ ನಟರಾಜ ನಾಟ್ಯ ಕಲಾ ತಂಡದಿಂದ ಭರತನಾಟ್ಯ, ಜೋಯಿಸರಹರಹಳ್ಳಿ ಬಸವೇಶ್ವರ ಭಜನಾ ಕಲಾ ತಂಡದಿಂದ ಭಜನೆ, ಹಾನಗಲ್‌ ಬೀರಪ್ಪ ಲೆಕ್ಕಿನಕೊಪ್ಪ ತಂಡದಿಂದ ಡೊಳ್ಳಿನಪದ, ರಾಯಚೂರು ಪ್ರತಿಭಾ ಗೋನಾಳ ತಂಡದಿಂದ ಭಾವಗೀತೆ, ಮಳವಳ್ಳಿ ಕಂತೂರ ಕುಮಾರ ಮತ್ತು ತಂಡದಿಂದ ತಮಟೆವಾದ್ಯ, ಶಿವಮೊಗ್ಗ ಲಲಿತಮ್ಮ ನವುಲೆ ತಂಡದಿಂದ ಗಮಕ, ಮಮತಾ ಸಾವಕ್ಕನವರ ತಂಡದಿಂದ ಸುಗಮ ಸಂಗೀತ, ವಿಜಯಲಕ್ಷ್ಮೀ ಮಲ್ಲಿಕಾರ್ಜುನ ಗಂಡೋಗಿ ತಂಡದಿಂದ ಶಾಸ್ರೀಯ ಸಂಗೀತ, ದಾವಣಗೆರೆ ರವಿ ಹೆಚ್‌.ಎಸ್‌ ತಂಡದಿಂದ ಸಮೂಹ ನೃತ್ಯ, ಚಿಕ್ಕಬಾಸೂರ ಈರಪ್ಪ ಆಜಗೊಂಡ ತಂಡದಿಂದ ಷರೀಫ ಕನಕ, ಕಾರವಾರ ಪುರುಶೋತ್ತಮಗೌಡ ಹಾಲಕ್ಕಿ ಕುಣಿತ, ಹಾಸನ ಬನೂಮಾ ಗುರುದತ್ತ ಸುಗಮ ಸಂಗೀತ, ಬೆಂಗಳೂರ ನಾಟ್ಯಾಂಕುರ ಫರ್‌ಪಾರ್ಮಿಂಗ್‌ ಆಟ್ಸ್‌ ತಂಡದಿಂದ ನೃತ್ಯ ರೂಪಕ ಜರುಗಲಿವೆ.

Kannada Sahitya Sammelana: ಹಾವೇರಿ ಪುಣ್ಯಭೂಮಿ, ತಫೋಭೂಮಿ: ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ

ಶ್ರೀ ಹಾನಗಲ್‌ ಕುಮಾರ ಶಿವಯೋಗಿಗಳ ವೇದಿಕೆಯಲ್ಲಿ ಸಂಜೆ 7ರಿಂದ ಹಾವೇರಿ ಶೃತಿ ಜೋಶಿ ತಂಡದಿಂದ ಭರತನಾಟ್ಯ, ಬೆಂಗಳೂರ ಪಂ.ಅನಂತ ಹೆಗ್ಗಾರ ತಂಡದಿಂದ ಹಿಂದೂಸ್ತಾನಿ ಸಂಗೀತ, ಬಂಕಾಪೂರ ಗುರುಲಿಂಗಪ್ಪ ಚಲವಾದಿ ತಂಡದಿಂದ ಜಾನಪದ ಗೀತೆ, ಕುಳೇನೂರ ಅಂಕುರ ಸಾಂಸ್ಕೃತಿಕ ಕಲಾ ಸಂಸ್ಥೆ ತಂಡದಿಂದ ಸಮೂಹ ನೃತ್ಯ, ವಿಜಯಪುರ ಭಾರತಿ ಕುಂದಣಗಾರ ತಂಡದಿಂದ ವಚನ ಸಂಗೀತ, ಹಾಸನ ಶಿವಮ್ಮ ಹಳೇಬಿಡು ತಂಡದಿಂದ ಸೋಮನ ಕುಣಿತ, ಕೊಪ್ಪಳ ಕೇಶಪ್ಪ ಶಿಳ್ಳಿಕ್ಯಾತರ ತಂಡದಿಂದ ತೊಗಲು ಗೊಂಬೆ ಆಟ, ಬ್ಯಾಡಗಿ ಸುನೀತಾ ಪೂಜಾರ ತಂಡದಿಂದ ಲಂಬಾಣಿ ನೃತ್ಯ, ಕುಣಿಮೆಳ್ಳಿಹಳ್ಳಿ ಪೂಜಾ ದೇಸಾಯಿ ತಂಡದಿಂದ ಭಾವಗೀತೆ, ದಾಂಡೇಲಿ ಕುಮಾರ ಜೈತ್‌ ತಂಡದಿಂದ ಕೊಳಲು ವಾದನ, ಹಾವೇರಿ ಅನುಪಮಾ ಆನವಟ್ಟಿಸುಗಮ ಸಂಗೀತ, ರಾಣಿಬೆನ್ನೂರು ಮೌಲ್ಯಾ ಲಂಕೇಶ ಭರತನಾಟ್ಯ, ಹಾವೇರಿ ಪೂರ್ವಿಕಾ ಲಮಾಣಿ ತಂಡದಿಂದ ಬಂಜಾರ ನೃತ್ಯ, ರಾಣಿಬೆನ್ನೂರ ವೀಣಾ ಬೋಸ್ಲೆ ತಂಡದಿಂದ ದಾಸರ ಪದ, ಲಕ್ಷ್ಮೇಶ್ವರ ಸುಧಾ ಇನಾಮದಾರ ತಂಡದಿಂದ ಭರತನಾಟ್ಯ, ಹಾವೇರಿ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ತಂಡದಿಂದ ಸಂಗೀತ ಕಾರ್ಯಕ್ರಮ, ಹಾವೇರಿ ಮುನಿಸಿಪಲ್‌ ವಿದ್ಯಾರ್ಥಿಗಳ ತಂಡದಿಂದ ಸಮೂಹ ನೃತ್ಯ, ಬ್ಯಾಡಗಿ ವಿಜಯಕುಮಾರ ಹಿರೇಮಠ ತಂಡದಿಂದ ದಾಸರ ಪದ, ಸವಣೂರ ಸೋಮನಗೌಡ ಪಾಟೀಲ ತಂಡದಿಂದ ಭಜನೆ, ಬೆಂಗಳೂರು ಮೃತ್ಯುಂಜಯ ದೊಡ್ಡವಾಡ ತಂಡದಿಂದ ಸುಗಮಸಂಗೀತ, ಹುಬ್ಬಳ್ಳಿ ಮಂದಹಾಸ ಕಲಾ ತಂಡದಿಂದ ಜಾನಪದ ನೃತ್ಯ, ಮೋಟೆಬೆನ್ನೂರ ಜಯವ್ವ ಹೊಂಬರಡಿ ಸೋಬಾನ ಪದ, ಮಣಕವಾಡ ಕಲ್ಮೇಶ್ವರ ಡೊಡ್ಡಾಟ ಮಂಡಳಿ ತಂಡದಿಂದ ಜಾನಪದ ರೂಪಕ, ತುಮಕೂರ ಸಾಗರ ಟಿ.ಎಸ್‌ ತಂಡದಿಂದ ಶರಣ ಸಂಸ್ಕೃತಿ ವೈಭವ ಕಾರ್ಯಕ್ರಮ ನೆರವೇರಲಿದೆ.

click me!