ಪಾವಗಡ (ನ.17) : ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತ ಪ್ರಜೆಗಳಾಗಿದ್ದು, ಈ ಪರಿಕಲ್ಪನೆ ಹಿನ್ನಲೆಯಲ್ಲಿ ಅಂಗನವಾಡಿ ಕೇಂದ್ರ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕೊಠಡಿ ಮತ್ತು ಮೂಲಭೂತ ಸಮಸ್ಯೆ ನಿವಾರಣೆಗೆ ವಿವಿಧ ಯೋಜನೆ ಅಡಿಯಲ್ಲಿ ಕೋಟ್ಯಂತರ ರು.ಗಳ ಅನುದಾನ ಬಿಡುಗಡೆಗೊಳಿಸಿರುವುದಾಗಿ ಶಾಸಕ ವೆಂಕಟರಮಣಪ್ಪ ಹೇಳಿದರು.
ಶಾಸಕರ ವಿಶೇಷ ನಿಧಿ ಅನುದಾನದಲ್ಲಿ ತಾಲೂಕಿನ ಕೊಡಮಡಗು ಗ್ರಾಮದಲ್ಲಿ ನಿರ್ಮಿಸಿದ್ದ 10 ಲಕ್ಷ ರು.ವೆಚ್ಚದ ನೂತನ ಅಂಗನವಾಡಿ ಕೇಂದ್ರ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಪ್ರತಿ ಪಂಚಾಯ್ತಿಯಲ್ಲಿ ಅಮೃತ ಸರೋವರ ನಿರ್ಮಿಸಿ: ಎ.ನಾರಾಯಣಸ್ವಾಮಿ
ಮಕ್ಕಳ ಶೈಕ್ಷಣಿಕ ಪ್ರಗತಿ ಹಿನ್ನೆಲೆಯಲ್ಲಿ ಸೋಲಾರ್ ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ವಿಶೇಷ ಅನುದಾನದಲ್ಲಿ ಪೊನ್ನಸಮುದ್ರ, ಜಂಗಮರಹಳ್ಳಿ, ಜಾಜೂರಾಯನಹಳ್ಳಿ, ಶ್ರೀರಂಗಪುರ ಇತರೆ ತಾಲೂಕಿನ ಹಲವಾರು ಗ್ರಾಮಗಳಲ್ಲಿ ನೂತನ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಕಲ್ಪಿಸಿದ್ದು ಪ್ರಗತಿ ಹಂತದಲ್ಲಿವೆ. ಸುಮಾರು 3 ಕೋಟಿ ವೆಚ್ಚದಲ್ಲಿ ಕಡಮಲಕುಂಟೆ, ಅರಳೀಕುಂಟೆ, ಬಿ.ಕೆ.ಹಳ್ಳಿ ಇತರೆ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕೊಠಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ. ಗ್ರಾಮೀಣ ಸಂಪರ್ಕಕ್ಕೆ ರಸ್ತೆ ಪ್ರಗತಿ ಹಾಗೂ ಕೆರೆಗಳ ದುರಸ್ತಿಗೆ ಅನುದಾನ ನೀಡಿದ್ದು, ಕಡಮಲಕುಂಟೆ ಮತ್ತು ಅರಳೀಕುಂಟೆಯ ರಸ್ತೆ ಪ್ರಗತಿಗೆ ತಲಾ 25 ಲಕ್ಷ ಅನುದಾನ ಬಿಡುಗಡೆಗೊಳಿಸಿದ್ದು ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ. ತಾಲೂಕಿನ ಲಿಂಗದಹಳ್ಳಿ, ಸಾಸಲಕುಂಟೆ 3.50ಕೋಟಿ, ಟಿ.ಎನ್.ಕೋಟೆಯಿಂದ ಹರಿಹರಪುರ 2.50 ಕೋಟಿ, ಗುಂಡಾರ್ಲಹಳ್ಳಿ ವೀರ್ಲಗೊಂದಿ 1.50 ಕೋಟಿ ಕೆ.ಟಿ.ಹಳ್ಳಿ ಜಂಗಮರಹಳ್ಳಿಗೆ 2 ಕೋಟಿ ಹೀಗೆ ಗಡಿ ಭಾಗದ ರಸ್ತೆ ಪ್ರಗತಿಗೆ ಹಣ ಬಿಡುಗಡೆ ಮಾಡಿದ್ದು ಸುಮಾರು 70 ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಅತಿ ಶೀಘ್ರದಲ್ಲಿ ಗುದ್ದಲಿಪೂಜೆ ನೆರವೇರಿಸುವುದಾಗಿ ಹೇಳಿದರು.
ಮುಖಂಡ ಅರಳೀಕುಂಟೆ ರಾಮಾಂಜಿನಪ್ಪ ಈ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಶು ಆಸ್ಪತ್ರೆ ನಿರ್ಮಿಸಿಕೊಡುವಂತೆ ಶಾಸಕರಿಗೆ ಮನವಿ ಮಾಡಿದರು. ಸಿಡಿಪಿಒ ನಾರಾಯಣ್ ಮಾತನಾಡಿ ಅಂಗನವಾಡಿ ಕೇಂದ್ರಗಳ ಪ್ರಗತಿ ಮತ್ತು ಕೊಠಡಿಗಳ ನಿರ್ಮಾಣಕ್ಕೆ ಶಾಸಕರ ಸಹಕಾರ ಮತ್ತು ಮಾರ್ಗದರ್ಶನ ಕೊಡುಗೆ ಕುರಿತು ಸಮಗ್ರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಗ್ರಾಪಂ ಅಧ್ಯಕ್ಷರಾದ ಮೀನಾಕುಮಾರಿ, ಮುಖಂಡರಾದ ಶೇಷಗಿರಿಯಪ್ಪ, ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ, ತಿಮ್ಮಾರೆಡ್ಡಿ, ನಾಗರೆಡ್ಡಿ, ಕೊಡಮಡಗು ಪ್ರಸನ್ನಕುಮಾರ್, ನಾರಾಯಣರೆಡ್ಡಿ ಶಿವಪ್ಪ, ಜಾಜೂರಾಯನಹಳ್ಳಿ ಉಮಾಶಂಕರ್, ರೈತ ಮುಖಂಡ ಕಡಮಕುಂಟೆ ಬಡಪ್ಪ, ತಮಟೆ ಸುಬ್ಬರಾಯಪ್ಪ ಚನ್ನಯ್ಯ, ರಮೇಶ್, ಗ್ರಾಪಂ ಸದಸ್ಯರಾದ ಅಡವಕ್ಕ, ಜಿಪಂ ಎಇಇ ಸುರೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೂಪರ್ ವೈಜರ್ ಸುಧಾ, ಗ್ರಾಪಂ ಪಿಡಿಒ ವಿಜಯಕುಮಾರ್, ಅಂಗನವಾಡಿ ಕಾರ್ಯಕರ್ತೆ ಸುಶೀಲಮ್ಮ, ಸ್ಥಳೀಯ ಮುಖಂಡರು ಮತ್ತು ಗ್ರಾಮಸ್ಥರಿದ್ದರು.
ಕರ್ನಾಟಕದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ 24*7 ಹೆಲ್ಪ್‌ಲೈನ್: ಸುಧಾಕರ್
ರೈತರ ಜಮೀನುಗಳ ಪ್ರಗತಿಗೆ ಭದ್ರಾ ಮೇಲ್ದಂಡೆ 16 ಕೋಟಿ ಹಾಗೂ ಸಣ್ಣ ನೀರಾವರಿ ಇಲಾಖೆಯ 10 ಕೋಟಿ ರು. ವೆಚ್ಚದಲ್ಲಿ ಚೆಕ್ ಡ್ಯಾಂಗಳ ನಿರ್ಮಾಣ ಕೈಗೊಳ್ಳಲಾಗಿದೆ. ತಾಲೂಕು ಪ್ರಗತಿ ವಿಚಾರದಲ್ಲಿ ದ್ವೇಷದ ರಾಜಕಾರಣ ಮಾಡುವುದು ನನಗೆ ಬರುವುದಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಕೆಲ ರಾಜಕಾರಣಿಗಳು ವಿನಾಕಾರಣ ತಕರಾರು ಮಾಡುತ್ತಿದ್ದು ಪಟ್ಟಣದ ತುಮಕೂರು ರಸ್ತೆ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ 22 ಕೋಟಿ ರು.ವೆಚ್ಚದ ವಸತಿ ನಿಲಯ ಸುಸಜ್ಜಿತವಾಗಿ ನಿರ್ಮಾಣವಾಗಲಿದೆ.
ವೆಂಕಟರಮಣಪ್ಪ ಶಾಸಕ