ಟಿ.ಕೆ.ಹಳ್ಳಿ ಜಲರೇಚಕ ಯಂತ್ರಾಗಾರ ಜಲಾವೃತ; ಬೆಂಗಳೂರು ಕುಡಿಯುವ ನೀರು ಪೂರೈಕೆ ಸ್ಥಗಿತ

By Kannadaprabha News  |  First Published Sep 6, 2022, 9:53 AM IST

ಭಾನುವಾರ ಸುರಿದ ರಣ ಮಳೆಗೆ ಇಲ್ಲಿಗೆ ಸಮೀಪದ ತೊರೆಕಾಡನಹಳ್ಳಿಯಲ್ಲಿರುವ ಬೆಂಗಳೂರು ಜಲಮಂಡಳಿಯ ಜಲರೇಚಕ ಯಂತ್ರಾಗಾರ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ. ಇದರಿಂದ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿದೆ. ಬೆಂಗಳೂರು ಜಲಮಂಡಳಿ ಕಾವೇರಿ ನಾಲ್ಕನೇ ಹಂತ, ಎರಡನೇ ಘಟ್ಟಜಲರೇಚಕ ಯಂತ್ರಾಗಾರಕ್ಕೆ ಭಾನುವಾರ ರಾತ್ರಿ ನೀರು ನುಗ್ಗಿದ್ದು, ಎರಡನೇ ಹಂತ ಹಾಗೂ ಮೂರನೇ ಹಂತ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ.


ಹಲಗೂರು (ಸೆ.6) : ಭಾನುವಾರ ಸುರಿದ ರಣ ಮಳೆಗೆ ಇಲ್ಲಿಗೆ ಸಮೀಪದ ತೊರೆಕಾಡನಹಳ್ಳಿಯಲ್ಲಿರುವ ಬೆಂಗಳೂರು ಜಲಮಂಡಳಿ(Bangalore Water Board)ಯ ಜಲರೇಚಕ(Pumping)ಯಂತ್ರಾಗಾರ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ. ಇದರಿಂದ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿದೆ. ಬೆಂಗಳೂರು ಜಲಮಂಡಳಿ ಕಾವೇರಿ(Kaveri) ನಾಲ್ಕನೇ ಹಂತ, ಎರಡನೇ ಘಟ್ಟಜಲರೇಚಕ ಯಂತ್ರಾಗಾರಕ್ಕೆ ಭಾನುವಾರ ರಾತ್ರಿ ನೀರು ನುಗ್ಗಿದ್ದು, ಎರಡನೇ ಹಂತ ಹಾಗೂ ಮೂರನೇ ಹಂತ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ. ಪಂಪ್‌ಸೆಟ್‌ಗಳು ನೀರಿನೊಳಗೆ ಮುಳುಗಿರುವುದರಿಂದ ಬೆಂಗಳೂರಿಗೆ ನೀರು ಪೂರೈಕೆ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ.

Kaveri Water: ಹಳ್ಳಿಗಳಿಗೆ ಕಾವೇರಿ ನೀರೇ ಬೇಡವಂತೆ..!

Tap to resize

Latest Videos

ಹೊನಗಾನಹಳ್ಳಿ ಕೆರೆ(Honaganahalli lake) ಕೋಡಿ ಹರಿದು, ಭೀಮಾ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರು ಹರಿದಿದ್ದರಿಂದ ಜಲರೇಚಕ ಯಂತ್ರಾಗಾರದೊಳಗೆ ನೀರು ನುಗ್ಗಿದೆ. ಪಂಪ್‌ಸೆಟ್‌ಗಳು ನೀರಿನಲ್ಲಿ ಮುಳುಗಿರುವುದರಿಂದ ಈ ಹಂತದಲ್ಲಿ ಅವುಗಳಿಗೆ ಚಾಲನೆ ನೀಡಲಾಗುತ್ತಿಲ್ಲ. ಯಂತ್ರಾಗಾರದೊಳಗೆ ತುಂಬಿರುವ ನೀರನ್ನು ಸಂಪೂರ್ಣವಾಗಿ ಹೊರಹಾಕಬೇಕು. ಆ ನಂತರ ಮೋಟಾರ್‌ಗಳನ್ನು ಚಾಲನೆ ಮಾಡಿ ಪರೀಕ್ಷಿಸಬೇಕು. ಮೋಟಾರ್‌ಗಳು ಕಾರ್ಯಾಚರಣೆಗೊಂಡರೆ ಯಾವುದೇ ತೊಂದರೆ ಇಲ್ಲ, ಏನಾದರೂ ದೋಷಗಳು ಕಂಡುಬಂದಲ್ಲಿ ಹಾರೋಹಳ್ಳಿಯಿಂದ ಮೋಟಾರ್‌ಗಳನ್ನು ತರಿಸಿ ಚಾಲನೆ ದೊರಕಿಸಬೇಕು. ಈ ಕೆಲಸ ಇಂದು ಸಂಜೆ ಅಥವಾ ನಾಳೆ ವೇಳೆಗೆ ನಡೆಯಲಿದೆ ಎಂದು ಮಂಡಳಿಯ ಮುಖ್ಯ ಅಧೀಕ್ಷಕ ಎಂಜಿನಿಯರ್‌ ನರೇಶ್‌ ತಿಳಿಸಿದ್ದಾರೆ.

10 ಮೋಟಾರ್‌ ಪಂಪ್‌ ಬಳಕೆ: ತೊರೆಕಾಡನಹಳ್ಳಿಯ ಜಲರೇಚಕ ಯಂತ್ರಾಗಾರದಲ್ಲಿ ಸುಮಾರು 20ಕ್ಕೂ ಹೆಚ್ಚು ಅಡಿ ನೀರು ನಿಂತಿದೆ. ಈ ನೀರನ್ನು ಎಂಟು ಅಗ್ನಿಶಾಮಕ ವಾಹನಗಳಿಂದ 10 ಮೋಟಾರ್‌ ಪಂಪ್‌ಗಳನ್ನು ಬಳಸಿ ಸತತವಾಗಿ ನೀರನ್ನು ಹೊರಹಾಕಲು ಶ್ರಮಿಸುತ್ತಿದ್ದಾರೆ ಮತ್ತು ಮೂರನೇ ಹಂತದ ಪಂಪ್‌ ಸಹ ನೀರಿನಲ್ಲಿ ಮುಳುಗಡೆ ಆಗಿದ್ದು, ಅಲ್ಲಿಂದಲೂ ನೀರನ್ನು ಹೊರತೆಗೆಯಲಾಗುತ್ತಿದೆ. ಸಂಜೆಯೊಳಗೆ ನೀರನ್ನು ಸಂಪೂರ್ಣವಾಗಿ ಜಲರೇಚಕ ಯಂತ್ರಾಗಾರದಿಂದ ಹೊರಹಾಕಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. Bengaluru: ಜಲಮಂಡಳಿ ಅಗೆದಿದ್ದ ರಸ್ತೆ ಗುಂಡಿಗೆ ಬಿದ್ದು ಬೈಕ್ ಸವಾರ ಸಾವು

click me!