ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಬೆರೆಸಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಬೇಕು. ಇದು ಜನರ ಧಾರ್ಮಿಕ ಭಾವನೆಗೆ ಸಂಬಂಧಿಸಿ ವಿಚಾರ. ಭಕ್ತರ, ಜನರ ಭಾವನೆಗಳ ಜೊತೆ ಆಟ ಆಡುವುದು ಸರಿಯಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ವಿಜಯಪುರ (ಸೆ.22): ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಬೆರೆಸಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಬೇಕು. ಇದು ಜನರ ಧಾರ್ಮಿಕ ಭಾವನೆಗೆ ಸಂಬಂಧಿಸಿ ವಿಚಾರ. ಭಕ್ತರ, ಜನರ ಭಾವನೆಗಳ ಜೊತೆ ಆಟ ಆಡುವುದು ಸರಿಯಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಮಿಶ್ರಣ ಆಗಿರುವ ಕುರಿತು ಪ್ರಯೋಗಾಲಯದ ವರದಿ ಬಂದಿರುವ ಬಗ್ಗೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಅವರು, ಲಡ್ಡುವಿನಲ್ಲಿ ಪಾವಿತ್ರ್ಯತೆ ಇದೆ. ದನದ ಕೊಬ್ಬು ಬೆರೆಸುವುದು ಘೋರ ಅಪರಾಧ. ಆಗಾಗ ಪ್ರಸಾದದ ತಪಾಸಣೆ ಮಾಡಬೇಕಿತ್ತು. ಇದೀಗ ತಪ್ಪು ನಡೆದಿರುವುದರಿಂದ ಈ ಕೃತ್ಯದಲ್ಲಿ ಯಾರು ಭಾಗಿಯಾಗಿದ್ದಾರೋ ಅವರ ಮೇಲೆ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ಶಾಸಕ ಮುನಿರತ್ನ ಪ್ರಕರಣಕ್ಕೆ ಉತ್ತರಿಸಿದ ಅವರು, ಸ್ವಾಭಾವಿಕವಾಗಿ ಯಾರೂ ಊಹಿಸದ ಆಪಾದನೆಗಳು ಅವರ ಮೇಲೆ ಬರುತ್ತಿವೆ. ಎಲ್ಲದರ ಕುರಿತು ತನಿಖೆ ಆಗಲಿ. ನಿಜವಾಗಿ ಆ ರೀತಿ ಘೋರವಾದಂತಹ ಕೃತ್ಯ ಮಾಡಿದ್ದರೆ ನಿರ್ದಾಕ್ಷಿಣ್ಯ ಕ್ರಮ ಆಗಲಿದೆ. ಫಸ್ಟ್ ಟೈಮ್ ಊಹಿಸದ ಆಪಾದನೆ ಕೇಳಿ ನಾನು ಗಾಬರಿಯಾದೆ. ಹನಿಟ್ರ್ಯಾಪ್, ಸಿಡಿ ಮಾಡೋದು, ಹೆಣ್ಣುಮಕ್ಕಳ ಬಳಕೆ ಇವೆಲ್ಲ ಹೇಯ ಕೃತ್ಯಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ವಿಚಾರದಲ್ಲಿ ರಾಜ್ಯಪಾಲರ ಹಸ್ತಕ್ಷೇಪ ಕುರಿತು ಮಾತನಾಡಿ, ಇದು ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ಮಧ್ಯದ ಸಂಘರ್ಷ. ಆಡಳಿತದಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡಬಾರದು.
undefined
Kodagu: ಸ್ಮಶಾನದ ಜಾಗ ಒತ್ತುವರಿ ಮಾಡಿ ಕಾಫಿತೋಟ ಮಾಡಿದ ಭೂಪ: ಅಣಕು ಶವವಿಟ್ಟು ಪ್ರತಿಭಟನೆ
ಪ್ರತಿಯೊಂದಕ್ಕೂ ಎಲ್ಲರೂ ಹೋಗಿ ರಾಜ್ಯಪಾಲರಿಗೆ ದೂರು ಕೊಡುವುದು, ಅವರು ಅದನ್ನು ಪರಿಗಣಿಸುವುದು ಆಗಬಾರದು. ಇದರಿಂದ ಪೊಲೀಸ್ ಸ್ಟೇಷನ್ ಬದಲು ರಾಜ್ಯಪಾಲರಿಗೆ ದೂರು ಕೊಡುವುದೇ ಆಗುತ್ತದೆ. ರಾಜ್ಯಪಾಲರಿಗೆ ದೂರು ಕೊಡುವುದೇ ಒಂದು ಹೊಸ ದಂಧೆ ಶುರು ಆಗುತ್ತದೆ. ಅದಾಗಿಯೂ ರಾಜ್ಯಪಾಲರ ಹಸ್ತಕ್ಷೇಪದ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ. ರಾಜ್ಯಪಾಲರ ಕಚೇರಿ ಬಿಜೆಪಿ ಕಚೇರಿ ಆಗಿದೆ. ಅವರು ಬಿಜೆಪಿ ವಕ್ತಾರರಂತೆ ವರ್ತಿಸುತ್ತಿದ್ದಾರೆ. ಹಿಗಾಗಿ ಹಾದಿಯಲ್ಲಿ ಹೋಗುವವರು ಬಂದು ಸಿಕ್ಕ ಸಿಕ್ಕವರ ಮೇಲೆ ಮೇಲೆ ಅರ್ಜಿ ಹಾಕಿದರೆ ಹೇಗೆ ಎಂದು ಪ್ರಶ್ನಿಸಿದರು.
ನಾಯಕರಿಗೆ ಅವಾಚ್ಯ ಶಬ್ದಗಳಿಂದ ಯತ್ನಾಳ ಮಾತನಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಯತ್ನಾಳ ಬಗ್ಗೆ ನಾನು ಮಾತನಾಡುವುದಿಲ್ಲ. ರಾಹುಲ ಗಾಂಧಿ, ಟಿಪ್ಪುಸುಲ್ತಾನ ಸೇರಿದಂತೆ ಎಲ್ಲರ ತಾಯಿ ಬಗ್ಗೆ ಮಾತನಾಡುತ್ತಾರೆ. ಯತ್ನಾಳ ಅವರಿಗೆ ಬೇರೆಯವರ ತಾಯಿ, ತಂದೆ ಹೆಂಡತಿ, ಮಕ್ಕಳು ಯಾಕೆ ಬೇಕು? ರಾಜಕಾರಣ ಕೇವಲ ರಾಜಕಾರಣ ಎಂಬಂತೆ ಮಾಡಬೇಕು ಅಷ್ಟೆ. ಅವರಂತೆ ನಮಗೂ ಮಾತನಾಡಲು ಬರುತ್ತದೆ. ಯಾರಾದರು ಅವರ ಕುಟುಂಬಸ್ಥರ ಬಗ್ಗೆ ಮಾತನಾಡಿದರೆ ಹೇಗಾಗುತ್ತದೆ?. ನಾವು ಸುಮ್ಮನೆ ಕುರೋದಿಲ್ಲ ಎಂದರು.ನಮ್ಮ ಪಕ್ಷದವರಿಂದಲೇ ಏನು ಮಾಡೋಕಾಗಿಲ್ಲ ಎಂದು ಯತ್ನಾಳ ಹೇಳಿಕೆ ವಿಚಾರಕ್ಕೆ ಕಿಡಿ ಕಾರಿದ ಎಂ.ಬಿ.ಪಾಟೀಲರು, ಬಿಜೆಪಿಯವರು ನರ ಸತ್ತವರು ಇರಬೇಕು ಅದಕ್ಕೆ ಸುಮ್ಮನಿದ್ದಾರೆ ಎಂದು ಟೀಕಿಸಿದರು.
ಕುಟುಂಬ ಸಮೇತರಾಗಿ ಧರ್ಮಸ್ಥಳ ಮಂಜುನಾಥ, ಕುಕ್ಕೆ ಸುಬ್ರಹ್ಮಣ್ಯ ದರ್ಶನ ಪಡೆದ ನಿಖಿಲ್ ಕುಮಾರಸ್ವಾಮಿ
ಈಗ ಬಂದ ಜಿಲ್ಲಾಡಳಿತ ಭವನ: ವಿಜಯಪುರದ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದ್ದು, ಟೆಂಡರ್ ಕರೆದು ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಡಳಿತ ಸಂಕೀರ್ಣ ಬಹಳ ದಿನದಿಂದ ಪೆಂಡಿಂಗ್ ಇತ್ತು. ಏಳೆಂಟು ತಿಂಗಳ ಹಿಂದೆಯೇ ಆಗಬೇಕಿತ್ತು, ನಾನು ಪ್ರತ್ನಿಸಿದ್ದರಿಂದ ಇದೀಗ ಆಗಲಿದೆ. ಭವಿಷ್ಯದ ಅನುಕೂಲಕ್ಕೆ ತಕ್ಕಂತೆ ನೂತನ ಕಟ್ಟಡ ನಿರ್ಮಿಸಲಾಗುವುದು ಎಂದು ತಿಳಿಸಿದರು.