ಟಿಪ್ಪು ಜಯಂತಿ ರದ್ದು ಮಾಡಿದ್ದು ಬೇಸರವಿಲ್ಲ : ತನ್ವೀರ್ ಸೇಠ್

By Web DeskFirst Published Aug 2, 2019, 3:34 PM IST
Highlights

ಟಿಪ್ಪು ಜಯಂತಿ ಆಚರಣೆ ರದ್ದು ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಮೈಸೂರಿನಲ್ಲಿ ಟಿಪ್ಪು ಸುಲ್ತಾನ್ ಉರುಸ್ ಆಚರಣೆ ಮಾಡಲಾಗಿದೆ.

ಮೈಸೂರು [ಆ.02]:  ರಾಜ್ಯ ಸರ್ಕಾರ ಟಿಪ್ಪು ಸುಲ್ತಾನ್ ಜಯಂತಿ ರದ್ದು ಮಾಡಿದ ಬೆನ್ನಲ್ಲೇ  ಮೈಸೂರಿನಲ್ಲಿ ಟಿಪ್ಪು ಸುಲ್ತಾನ್ 227ನೇ ಗಂಧ ಉರುಸ್ ಷರೀಫ್ ಆಚರಣೆ ಮಾಡಲಾಗಿದೆ. 

ಈ ವೇಳೆ ಮಾತನಾಡಿದ ಮಾಜಿ ಸಚಿವ ತನ್ವೀರ್ ಸೇಠ್ ಬಿಜೆಪಿಯವರು ಟಿಪ್ಪು ಜಯಂತಿ ಮಾಡುವುದು ಬೇಕಾಗಿಲ್ಲ. ಈಗ ಟಿಪ್ಪು ಜಯಂತಿ ರದ್ದು ಮಾಡಿರುವುದು ನಮಗೇನು ಬೇಸರವಿಲ್ಲ. ಬಿಜೆಪಿ ಸರ್ಕಾರ ಟಿಪ್ಪು ಜಯಂತಿ ರದ್ದು ಮಾಡುತ್ತದೆ ಎನ್ನುವ ನಿರೀಕ್ಷೆ ಮೊದಲೇ ಇತ್ತು ಎಂದರು. 

ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ರಾಜ್ಯ ಸರಕಾರ ಎಳ್ಳು ನೀರು

ಕಳೆದ ಮೈತ್ರಿ ಸರ್ಕಾರ ಕೂಡ ಟಿಪ್ಪು ಜಯಂತಿಯನ್ನು 144 ಸೆಕ್ಷನ್ ಜಾರಿ ಮಾಡಿ ನಾಲ್ಕು ಗೋಡೆ ಮಧ್ಯ ಮಾಡಿತ್ತು. ನಾವು ಯಾವುದೇ ಸರ್ಕಾರವನ್ನು ಟಿಪ್ಪು ಜಯಂತಿ ಮಾಡಿ ಎಂದು ಕೇಳಿಲ್ಲ. ಎಲ್ಲರೂ ಟಿಪ್ಪು ಜಯಂತಿಯನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಟಿಪ್ಪು ಎಂತಹ ವ್ಯಕ್ತಿ  ಎನ್ನುವುದನ್ನು ಇತಿಹಾಸ ನೋಡಿ ತಿಳಿದುಕೊಳ್ಳಲಿ. ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಯಾವುದೇ ಸರ್ಕಾರ ಗಳಿಂದ ಟಿಪ್ಪು ಜಯಂತಿ ಮಾಡಬೇಕಾಗಿಲ್ಲ. ನಾವು ಕಳೆದ 29 ವರ್ಷಗಳಿಂದ ಟಿಪ್ಪು ಜಯಂತಿಯನ್ನ ಆಚರಿಸುತ್ತಾ ಬಂದಿದ್ದೇವೆ. ಇನ್ನು ಅದ್ದೂರಿಯಾಗಿ ಟಿಪ್ಪು ಜಯಂತಿ ಆಚರಣೆ ಮಾಡುತ್ತೇವೆ. ಇವತ್ತು ಟಿಪ್ಪು ಸುಲ್ತಾನ್ 227ನೇ ಗಂಧ ಉರುಸ್ ಷರೀಫ್ ಆಚರಿಸುತ್ತಿದ್ದೇವೆ ಎಂದು ಸೇಠ್ ಹೇಳಿದರು.

click me!