ಸಿಕ್ಕ ಸಿಕ್ಕವರಿಗೆ ಬ್ಯಾಂಕ್ ಡೀಟೇಲ್ಸ್ ಕೊಟ್ರೆ ಖಾತೆ ಖಾಲಿ ಆಗುತ್ತೆ ಹುಷಾರ್..!

By Kannadaprabha NewsFirst Published Aug 2, 2019, 3:20 PM IST
Highlights

ಬ್ಯಾಂಕ್ ಸಿಬ್ಬಂದಿ ಎಂದಿಗೂ ಕರೆ ಮಾಡಿ ನಿಮ್ಮ ಎಟಿಎಂ ಕಾರ್ಡ್, ಎಕೌಂಟ್ ಡೀಟೇಲ್ಸ್‌ ಕೇಳುವುದಿಲ್ಲಎಂದು ಬ್ಯಾಂಕ್‌ಗಳು ಎಷ್ಟು ಹೇಳಿದರೂ ಗ್ರಾಹಕರು ಮಾತ್ರ ಮೋಸ ಹೋಗುತ್ತಲೇ ಇರುತ್ತಾರೆ. ಬ್ಯಾಂಕ್ ಕೊಡೋ ಎಚ್ಚರಿಕೆ ನಿರ್ಲಕ್ಷಿಸಿ ನಿಮ್ಮ ಖಾತೆ ಡೀಟೇಲ್ಸ್ ಹಂಚಿಕೊಂಡ್ರೆ ಅಪಾಯ ತಪ್ಪಿದ್ದಲ್ಲ.

ಶಿವಮೊಗ್ಗ(ಆ.02): ಬ್ಯಾಂಕ್ ಸಿಬ್ಬಂದಿ ಎಂದಿಗೂ ಕರೆ ಮಾಡಿ ನಿಮ್ಮ ಎಟಿಎಂ ಕಾರ್ಡ್, ಎಕೌಂಟ್ ಡೀಟೇಲ್ಸ್‌ ಕೇಳುವುದಿಲ್ಲಎಂದು ಬ್ಯಾಂಕ್‌ಗಳು ಎಷ್ಟು ಹೇಳಿದರೂ ಗ್ರಾಹಕರು ಮಾತ್ರ ಮೋಸ ಹೋಗುತ್ತಲೇ ಇರುತ್ತಾರೆ. ಬ್ಯಾಂಕ್ ಕೊಡೋ ಎಚ್ಚರಿಕೆ ನಿರ್ಲಕ್ಷಿಸಿ ನಿಮ್ಮ ಖಾತೆ ಡೀಟೇಲ್ಸ್ ಹಂಚಿಕೊಂಡ್ರೆ ಅಪಾಯ ತಪ್ಪಿದ್ದಲ್ಲ.

ಮೊಬೈಲ್‌ ಕರೆ ಮಾಡಿ ಬ್ಯಾಂಕ್‌ ಅಧಿಕಾರಿಯೆಂದು ಹೇಳಿ, ಎಟಿಎಂ ಕಾರ್ಡ್‌ ಸಂಖ್ಯೆ ಮತ್ತು ಪಾಸ್‌ವರ್ಡ್‌ ತಿಳಿದುಕೊಂಡು ವಂಚನೆ ಎಸಗುವ ಪ್ರಸಂಗ ಮೇಲಿಂದ ಮೇಲೆ ನಡೆಯುತ್ತಿದ್ದರೂ, ಜನ ಮಾತ್ರ ಈ ನಿಟ್ಟಿನಲ್ಲಿ ಎಚ್ಚರಗೊಂಡಂತೆ ಕಾಣುತ್ತಿಲ್ಲ. ಶಿವಮೊಗ್ಗ ನಗರದಲ್ಲಿ ಈ ರೀತಿ ವಂಚನೆಗೊಳಗಾಗಿ ವ್ಯಕ್ತಿಯೊಬ್ಬರು ಹಣ ಕಳೆದುಕೊಂಡ ಮತ್ತೊಂದು ಘಟನೆ ನಡೆದಿದೆ.

ಸಿಂಡಿಕೇಟ್ ಅಧಿಕಾರಿ ಹೆಸರಲ್ಲಿ ವಂಚನೆ:

ನಗರದ ಹೊಸಮನೆ ಬಡಾವಣೆಯ ಸುಮಾ ಎಂಬುವವರಿಗೆ ಅಪರಿಚಿತ ವ್ಯಕ್ತಿಯೋರ್ವ ದೂರವಾಣಿ ಕರೆ ಮಾಡಿ ತಾನು ಸಿಂಡಿಕೇಟ್‌ ಬ್ಯಾಂಕ್‌ನ ಅಧಿಕಾರಿಯೆಂದೂ, ತಮ್ಮ ಎಟಿಎಂ ಕಾರ್ಡ್‌ ಸ್ಥಗಿತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅದರ ಸಂಖ್ಯೆ ಮತ್ತು ತಮ್ಮ ಮೊಬೈಲ್‌ಗೆ ಬರುವ ಒಟಿಪಿ ತಿಳಿಸುವಂತೆ ಕೋರಿದ್ದಾನೆ.

ಹೆಣ್ಣಿನ ಮಧುರ ಧ್ವನಿಗೆ ಮರುಳಾದ್ರೆ ನಿಮಗೂ ಇದೇ ಗತಿ..!

ಕಾರ್ಡ್‌ ನಂಬರ್ ಒಟಿಪಿ ಕೊಟ್ಟ ಕೆಲವೇ ಖಾಲಿಯಾಯ್ತು ಖಾತೆ:

ಇದನ್ನು ನಂಬಿದ ಸುಮಾ ಅವರು ಎಲ್ಲ ವಿವರ ತಿಳಿಸಿದ್ದಾರೆ. ಕೆಲವೇ ಹೊತ್ತಿನಲ್ಲಿ ಇವರ ದುರ್ಗಿಗುಡಿ ಸಿಂಡಿಕೇಟ್‌ ಬ್ಯಾಂಕ್‌ನ ಉಳಿತಾಯ ಖಾತೆಯಿಂದ 19,998 ರು. ಡ್ರಾ ಆಗಿದೆ. ತಾವು ಮೋಸ ಹೋಗಿರುವುದು ಗೊತ್ತಾದ ಬಳಿಕ ಸುಮಾ ಅವರು ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!