ಕುರುಗೋಡು: ಟಿಪ್ಪರ್‌-ಟಾಟಾ ಏಸ್‌ ಡಿಕ್ಕಿ, 15 ಜನ​ರಿಗೆ ಗಾಯ

By Kannadaprabha News  |  First Published May 28, 2020, 9:19 AM IST

ಟಿಪ್ಪರ್‌ ಲಾರಿ ಮತ್ತು ಟಾಟಾ ಏಸ್‌ ನಡುವೆ ಡಿಕ್ಕಿ| ಕುರುಗೋಡು ಕಡೆಯಿಂದ ಬರುತ್ತಿದ್ದ ಟಿಪ್ಪರ್‌ ಮತ್ತು ಸೋಮಲಾಪುರ ಗ್ರಾಮದಲ್ಲಿ ಮದುವೆ ಮುಗಿಸಿಕೊಂಡು ಟಾಟಾ ಏಸ್‌ ಹಂದಿಹ್ಯಾಳ್‌ ಸ್ವಗ್ರಾಮಕ್ಕೆ ಮರಳಿ ಹೋಗುವಾಗ ನಡೆದ ದುರ್ಘಟನೆ| ಗಾಯಾಳುಗಳನ್ನ ಬಳ್ಳಾರಿ ವಿಮ್ಸ್‌ ಆಸ್ಪತ್ರೆಗೆ ದಾಖಲು|
 


ಕುರುಗೋಡು(ಮೇ.28): ಟಿಪ್ಪರ್‌ ಲಾರಿ ಮತ್ತು ಟಾಟಾ ಏಸ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸುಮಾರು 15 ಜನ ಗಾಯಗೊಂಡ ಘಟನೆ ಬುಧವಾರ ಲಕ್ಷ್ಮೀಪುರ ಹತ್ತಿರ ಸಂಭವಿಸಿದೆ. 

ಕುರುಗೋಡು ಕಡೆಯಿಂದ ಬರುತ್ತಿದ್ದ ಟಿಪ್ಪರ್‌ ಮತ್ತು ಸೋಮಲಾಪುರ ಗ್ರಾಮದಲ್ಲಿ ಮದುವೆ ಮುಗಿಸಿಕೊಂಡು ಟಾಟಾ ಏಸ್‌ ಹಂದಿಹ್ಯಾಳ್‌ ಸ್ವಗ್ರಾಮಕ್ಕೆ ಮರಳಿ ಹೋಗುವಾಗ ಈ ಘಟನೆ ಸಂಭವಿಸಿದೆ. ಇದೇ ವೇಳೆ ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್‌. ಗಣೇಶ್‌ ಅವರು ಕಂಪ್ಲಿ ಮಾರ್ಗವಾಗಿ ಕುರುಗೋಡು ತಾಲೂಕಿನ ಕಗ್ಗಲ್‌ ಗ್ರಾಮದ ಕಾಂಗ್ರೆಸ್‌ ಕಾರ್ಯಕರ್ತರ ಮದುವೆಗೆ ತೆರಳುತ್ತಿದ್ದರು. ಸುದ್ದಿ ತಿಳಿ​ದು ಸ್ಥಳಕ್ಕೆ ಧಾವಿಸಿ ಗಾಯಗೊಂಡವರನ್ನು ಶಾಸಕರು ತಮ್ಮ ಕಾರಿನಲ್ಲಿ ಚಿಕಿತ್ಸೆಗಾಗಿ ಕುರುಗೋಡು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ನೆರವಿಗೆ ಧಾವಿಸಿದ್ದಾರೆ.

Tap to resize

Latest Videos

undefined

 60 ದಿನಗಳ ನಂತರ ಭಕ್ತರ ಪ್ರವೇಶಕ್ಕೆ ಅವಕಾಶ: ಕೊಟ್ಟೂರೇಶ್ವರ ದೇಗುಲ ತೆರೆಯಲು ಸಿದ್ಧತೆ

ಗಾಯಾಳುಗಳಲ್ಲಿ 4 ಜನರು ತುಂಬಾ ಗಂಭೀರ ಪರಿಸ್ಥಿತಿಯಲ್ಲಿರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್‌ ಆಸ್ಪತ್ರೆಗೆ ಕಳುಹಿಸಿ ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಿ ಮಾನವಿಯತೆ ಮೆರೆದಿದ್ದಾರೆ. ಗಾಯಗೊಂಡವರು ಕಗ್ಗಲ್‌ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
 

click me!