'ಬಿಜೆಪಿ ಸರ್ಕಾರ ದಲಿ​ತರ ಮೇಲೆ ಹಿಡಿತ ಸಾಧಿ​ಸಲು ಯತ್ನಿ​ಸು​ತ್ತಿ​ದೆ'

By Kannadaprabha News  |  First Published Oct 18, 2020, 2:26 PM IST

ನಗರ ಮತ್ತು ಗ್ರಾಮೀಣ ಮಟ್ಟದಲ್ಲಿ ದಲಿತ ಸಂಘರ್ಷ ಸಮಿತಿಗಳು ಬಲಗೊಳ್ಳಬೇಕಿದೆ| ಪ್ರತಿ ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ಹುಟ್ಟು ಹಾಕಿ ಸಂಘಟನೆ ಬಲಗೊಳಿಸಲಾಗುತ್ತಿದೆ| ಯುವ ಪೀಳಿಗೆಯ ಸಹಕಾರ ಅಗತ್ಯ|


ಕುಕನೂರು(ಅ.18):ಬಿಜೆಪಿ ಸರ್ಕಾರ ದಲಿತರ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ. ಅಂತಹ ಸರ್ಕಾರವನ್ನು ಕಿತ್ತು ಎಸೆಯಲು ಸಂಘಟನೆ ಅತ್ಯವಶ್ಯಕವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದದ ರಾಜ್ಯ ಸಂಚಾಲಕ ತಿಪ್ಪಣ್ಣ ಹರ್ತಿ ಹೇಳಿದ್ದಾರೆ. 

ಪಟ್ಟಣದ ಗಾಂಧಿನಗರದಲ್ಲಿ ಹಮ್ಮಿಕೊಂಡ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೂತನ ಕುಕನೂರು ತಾಲೂಕಿನ ಪದಾಧಿಕಾರಿಗಳ ಆಯ್ಕೆ ಮತ್ತು ಪದಗ್ರಹಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಇಂದಿನ ರಾಜ್ಯ ಮತ್ತು ಕೇಂದ್ರಗಳ ಬಿಜೆಪಿ ಸರ್ಕಾರ ದಲಿತರ ಮೇಲೆ ಹಿಡಿತ ಸಾಧಿ​ಸ​ಲು ದಾಪುಗಾಲು ಹಾಕುತ್ತಿದೆ. ಅಂತಹವುಗಳಿಗೆ ಯಾವುದೇ ರೀತಿಯಾಗಿ ಆಸ್ಪದವನ್ನು ನೀಡಬಾರದು. ದಲಿತ ಯುವ ಪೀಳಿಗೆ ಬದಲಾಗಿ ಅನ್ಯಾಯದ ವಿರುದ್ಧ ಸದಾ ಹೋರಾಡುವ ಚಿಲುಮೆಯಾಗಿ ಹೊರಹೊಮ್ಮಬೇಕು ಮತ್ತು ಇಂದಿನ ಸರ್ಕಾರಗಳು ದಲಿತರಿಗೆ ಸಂಪೂರ್ಣವಾದ ಅನ್ಯಾಯವನ್ನು ಮಾಡುತ್ತಿದೆ. ದಲಿತ ಹೆಣ್ಣು ಮಕ್ಕಳಿಗೆ ಅನ್ಯಾಯವಾದರೆ ಇಂದಿನ ಸರ್ಕಾರ ಶಿಕ್ಷೆ ಕೊಡಲು ಯೋಚಿಸುತ್ತೆ.

Tap to resize

Latest Videos

ಅದೇ ಸವರ್ಣೀಯರ ಹೆಣ್ಣು ಮಕ್ಕಳಿಗೆ ತೊಂದರೆಯಾದರೆ ಕೂಡಲೇ ಶಿಕ್ಷೆ ನೀಡುತ್ತೆ. ಇಂತಹ ಸರ್ಕಾರಗಳು ಇದ್ದರೆ ಎಷ್ಟು, ಬಿಟ್ಟರೇ ಎಷ್ಟು, ಹೆಣ್ಣು ಎಂದರೆ ಎಲ್ಲಾ ಹೆಣ್ಣು ಮಕ್ಕಳು ಅಷ್ಟೇ, ಇಂತಹ ಭೇ​ದ ಭಾವ ಹುಡುಕುವ ಸರ್ಕಾರ ನಮಗೆ ಬೇಡ ಅದಕ್ಕಾಗಿ ಇಂದಿನ ಬಿಜೆಪಿ ಸರ್ಕಾರವನ್ನು ಕಿತ್ತು ಎಸೆಯಲು ಮತ್ತು ಮುಂದೆ ಈ ರೀತಿಯಾದ ಭೇದ ಭಾವ ಹುಡುಕುವ ಸರ್ಕಾರಗಳಿಗೆ ನಾವು ಬುದ್ಧಿ ಕಲಿಸಬೇಕಿದೆ. ಅದಕ್ಕಾಗಿ ನಗರ ಮತ್ತು ಗ್ರಾಮೀಣ ಮಟ್ಟದಲ್ಲಿ ದಲಿತ ಸಂಘರ್ಷ ಸಮಿತಿಗಳು ಬಲಗೊಳ್ಳಬೇಕಿದೆ. ಅದಕ್ಕಾಗಿ ಪ್ರತಿ ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ಹುಟ್ಟು ಹಾಕಿ ಸಂಘಟನೆಯನ್ನು ಬಲಗೊಳಿಸಲಾಗುತ್ತಿದೆ. ಯುವ ಪೀಳಿಗೆಯ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

ಬಿಜೆಪಿ ಮೌನ, ಕಾಂಗ್ರೆಸ್‌ ಚೆಲ್ಲಾಟ: ಅಧಿಕಾರದಲ್ಲಿದ್ದರೂ ಕಮಲ ನಾಯಕರ ನಡೆ ಮಾತ್ರ ನಿಗೂಢ..!

ನಂತರ ದಲಿತ ಸಂಘರ್ಷ ಸಮಿತಿಯ ತಾಲೂಕು ಗೌರವ ಅಧ್ಯಕ್ಷರನ್ನಾಗಿ ನಾಗಪ್ಪ ಕಲ್ಮನಿ, ತಾಲೂಕು ಸಂಚಾಲಕರನ್ನಾಗಿ ಗವಿಸಿದ್ದಪ್ಪ ಶಲೂಡಿ, ಹುಲಗಪ್ಪ ಬಂಕದಮನಿ, ಫಕಿರಪ್ಪ ಕಾಳಿ, ರಾಘವೇಂದ್ರ ಕಾತರಕಿ, ರುದ್ರೇಶ ಆರ್‌. ಬೆರಳಿನ್‌ ಹಾಗೂ ಇತರರನ್ನು ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಿ ಪದಗ್ರಹಣ ಮಾಡಲಾಯಿತು. ನಂತರ ನಗರ ಘಟಕದ ಸಂಚಾಲಕರನ್ನಾಗಿ ವೆಂಕಟೇಶ್ವರ ಛಲವಾದಿ, ವೀರೇಶ ಬಂಕದ್ಮನಿ, ಹನಮಂತ ಸಾಲ್ಮನಿ, ಸಂತೋಷ ಬಂಕದ್ಮನಿ, ಮಾಂತೇಶ ಆಚೆಕೇರಿ, ಸುರೇಶ ಕೊಪ್ಪಳ ಹಾಗೂ ಇತರರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಪರಶುರಾಮ ನೀಲನಾಯಕ್‌, ಜಿಲ್ಲಾ ಸಂಚಾಲಕ ತಿಮ್ಮಣ್ಣ ಎಂ., ಜಿಲ್ಲಾ ಸಂಘಟನಾ ಸಂಚಾಲಕ ಮರಿಸ್ವಾಮಿ ಬರಗೂರು, ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಸಂಘಟನಾ ಸಂಚಾಲಕ ಶೇಕ್‌ ನಬಿಯುಸೂಫ್‌, ನಾಗರಾಜ ವಾಲೀಕಾರ, ಉಲ್ಲೇಶ ತೊಡಿಹಾಳ, ಗೋಪಿನಾಥ ಜಂತಕಲ್‌, ತಾಲೂಕು ಗೌರವಧ್ಯಕ್ಷ ಅಂಜನೇಪ್ಪ ಕಾರಟಗಿ, ರಮೇಶ, ಶಿವು, ಶರಣಪ್ಪ ಇಟಗಿ, ನಾಗಪ್ಪ ಕಲ್ಮನಿ ಇದ್ದರು.
 

click me!