
ಬಂಟ್ವಾಳ(ಫೆ. 09) ಟಿಕ್ ಟಾಕ್ , ರೀಲ್ಸ್ ಹಾಸ್ಯ ವಿಡಿಯೋಗಳಲ್ಲಿ ಕಾಣಿಸಿಕೊಂಡು ಅಪಾರ ಅಭಿಮಾನಿ ವರ್ಗವನ್ನು ಪಡೆದಿದ್ದ, ಅನಂತಾಡಿ ಗ್ರಾಮದ ಮಾಮೇಶ್ವರ ಸಂಕೇಶ ನಿವಾಸಿ ಟಿಕ್ ಟಾಕ್ ಕಮಲಜ್ಜಿಇನ್ನಿಲ್ಲ. ಕಮಲ (86) ಬುಧವಾರ ಸಂಜೆ ನಿಧನರಾದರು.
ಕಳೆದ ಒಂದು ವಾರದಿಂದ ಅನಾರೋಗ್ಯ ಕಾಣಿಸಿಕೊಂಡಿದ್ದ ಹಿನ್ನೆೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆೆಗೆ ಸ್ಪಂದಿಸದೆ ಇಂದು ಸಂಜೆ ನಿಧನರಾಗಿದ್ದಾರೆ. ಅವರು ಆರು ಗಂಡು, ಮೂವರು ಹೆಣ್ಣು ಮಕ್ಕಳು, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಹೂಸುವ ಉದ್ಯೋಗ: ಮತ್ತೆ ಮತ್ತೆ ಹೂಸಲು ಯತ್ನಿಸಿ ಆಸ್ಪತ್ರೆ ಸೇರಿದ ಅಮೆರಿಕನ್ ನಟಿ
ಟಿಕ್ ಟಾಕ್ ಸ್ಟಾಾರ್ ಧನರಾಜ್ ಜೊತೆ ಕಮಲಜ್ಜಿ 50 ಕ್ಕೂ ಅಧಿಕ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದು, ಇವರ ಕುಟುಂಬವೇ ಟಿಕ್ ಟಾಕ್ ಫ್ಯಾಮಿಲಿ ಎಂದು ಹೆಸರು ಪಡೆದಿತ್ತು. ತಮ್ಮ ಇಳಿವಯಸ್ಸಿನಲ್ಲೂ ಇವರು ಟಿಕ್ ಟಾಕ್ ವಿಡಿಯೋಗಳಲ್ಲಿ ತೋರುತ್ತಿದ್ದ ಅಭಿನಯ, ಮಾತಿನ ವೇಗ, ಮನೆಮಂದಿಯ ಜೊತೆ ಬೆರೆಯುತ್ತಿಿದ್ದ ದೃಶ್ಯಾವಳಿಗಳಿಂದಾಗಿ ತಮ್ಮದೇ ಆದ ಅಭಿಮಾನಿ ವರ್ಗವನ್ನು ಅವರು ಪಡೆದಿದ್ದರು. ಪ್ರಸೂತಿ ತಜ್ಞೆಯಾಗಿದ್ದರು.
ಅಂಡರ್ ವರ್ಲ್ಡ್ ಡಾನ್ ರೀತಿ, ಬಡವ ರಾಸ್ಕಲ್ ಸಿನಿಮಾ ಪ್ರಚಾರ ಈ ರೀತಿ ಹಲವು ಪಾತ್ರಗಳ್ಲಿ ಅಜ್ಜಿ ಮಿಂಚಿದ್ದರು. ಧನರಾಜ್ ಆಚಾರ್ ಟವರ ವಿಡಿಯೋದಲ್ಲಿ ಅಜ್ಜಿಗೆ ಪ್ರಮುಖ ಸ್ಥಾನ ಇತ್ತು.
ಮತ್ತೆ ಟಿಕ್ ಟಾಕ್ ಗೆ ಜೀವ: ಪಬ್‌ಜಿ ಗೇಮ್ ಮತ್ತೆ ಭಾರತದಲ್ಲಿ ಕಾರ್ಯಾಚರಣೆ ನಡೆಸುವ ಪ್ರಯತ್ನದ ಸುದ್ದಿ ಹೊರ ಬಿದ್ದ ನಂತ ಚೀನಾ ಮೂಲದ ಟಿಕ್‌ಟಾಕ್ ಕೂಡ ಅಂಥದ್ದೇ ಪ್ರಯತ್ನಕ್ಕೆ ಮುಂದಾಗಿದೆ ಎನ್ನುವ ಸುದ್ದಿ ಬಂದಿತ್ತು.
ಭಾರತೀಯ ಗ್ರಾಹಕರ ಡೇಟಾ ಸುರಕ್ಷತೆಯ ದೃಷ್ಟಿಯಿಂದಾಗಿ ಭಾರತ ಸರಕಾರ ಪಬ್‌ಜೀ ಮತ್ತು ಟಿಕ್‌ಟಾಕ್ ಆಪ್‌ಗಳ ಮೇಲೆ ನಿಷೇಧ ಹೇರಿತ್ತು. ಆದರೆ, ಇದೀಗ ಪಬ್‌ಜೀ ಹೊಸ ವರ್ಷನ್‌ನೊಂದಿಗೆ ಭಾರತೀಯ ಬಳಕೆದಾರರಿಗೆ ತನ್ನ ಸೇವೆ ನೀಡುವುದಾಗಿ ಹೇಳಿಕೊಂಡಿತ್ತು. ಹಾಗೆಯೇ, ಟಿಕ್‌ಟಾಕ್ ಕೂಡ ಭಾರತದಲ್ಲಿ ತನ್ನ ಕಾರ್ಯಾಚರಣೆ ನಡೆಸುವ ಬಗ್ಗೆ ಆಶಾಭಾವನೆಯನ್ನು ಇಟ್ಟುಕೊಂಡಿದೆ. ಭಾರತದಲ್ಲಿರುವ ಎಲ್ಲ ಉದ್ಯೋಗಿಗಳನ್ನು ಉಳಿಸಿಕೊಂಡಿರುವ ಟಿಕ್ ಟಾಕ್ ಸತತವಾಗಿ ಭಾರತ ಸರ್ಕಾರದ ಜೊತೆಗೆ ಮಾತುಕತೆ ನಡೆಸಿದೆ. ಕೇಂದ್ರ ಸರ್ಕಾರ ಚೀನಾ ಆಪ್ ಗಳ ಮೇಲೆ ನಿಷೇಧ ಹೇರಿತ್ತು.
PUBG is back: ಹೊಸ ಅವತಾರದ ಗೇಮ್‌ಗೆ ಒಪ್ಪಿಗೆ ಸಿಗುತ್ತಾ?
ಟಿಕ್‌ಟಾಕ್ ಇಂಡಿಯಾ ಮುಖ್ಯಸ್ಥ ನಿಖಿಲ್ ಗಾಂಧಿ ಅವರು, ತಮ್ಮ ಉದ್ಯೋಗಿಗಳಿಗೆ ಕಳುಹಿಸಿರುವ ಇ ಮೇಲ್‌ನಲ್ಲಿ ಭಾರತದಲ್ಲಿ ಮತ್ತೆ ಕಾರ್ಯಾಚರಣೆ ನಡೆಸಲು ಕಂಪನಿ ಎಲ್ಲ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದ್ದರು. ಟಿಕ್‌ಟಾಕ್‌ನ ಮೂಲ ಕಂಪನಿ ಬೈಟ್‌ಡ್ಯಾನ್ಸ್ ಭಾರತದಲ್ಲಿ ಟಿಕ್‌ಟಾಕ್ ಮತ್ತು ಹೆಲೋ ಆಪ್ ನಿರ್ವಹಣೆಗೆ 2000 ಉದ್ಯೋಗಿಗಳನ್ನು ಹೊಂದಿದೆ. ಈ ಉದ್ಯೋಗಿಗಳಿಗೆ ಸ್ಯಾಲರಿ ಬೋನಸ್ ಕೂಡ ನೀಡಲಾಗಿತ್ತು. ಆದರೆ ನಂತರ ಎರಡೂ ಅಪ್ಪಿಕೇಶನ್ ಬ್ಯಾನ್ ಆಗಿದ್ದವು.