ದಂಪತಿ ಕೇರಳದಿಂದ ಕರ್ನಾಟಕಕ್ಕೆ ಕಾರಿನಲ್ಲಿ ಬರುವಾಗ ದಾರಿ ಮಧ್ಯೆ ಕಾಣಿಸಿಕೊಂಡ ಹುಲಿರಾಯ
ಚಾಮರಾಜನಗರ(ಅ.29): ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ವಲಯದ ಮೂಳೆಹೊಳೆ ಬಳಿ ಹುಲಿ ಪ್ರತ್ಯಕ್ಷವಾದ ಘಟನೆ ನಿನ್ನೆ(ಶುಕ್ರವಾರ) ನಡೆದಿದೆ. ಕೇರಳದಿಂದ ಕರ್ನಾಟಕಕ್ಕೆ ಕಾರಿನಲ್ಲಿ ಬರುವಾಗ ದಾರಿ ಮಧ್ಯೆ ಹುಲಿರಾಯ ಕಾಣಿಸಿಕೊಂಡಿದ್ದಾನೆ. ಹುಲಿ ರಸ್ತೆ ದಾಟಿ ಕಾಡಿನೊಳಗೆ ಸಾಗುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೇರಳದಿಂದ ಕರ್ನಾಟಕಕ್ಕೆ ಕಾರಿನಲ್ಲಿ ಬರುತ್ತಿದ್ದ ದಂಪತಿಗೆ ಹುಲಿರಾಯ ದರ್ಶನ ನೀಡಿದ್ದಾನೆ.
KRS ಬೃಂದಾವನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ
undefined
ಮಂಡ್ಯ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ KRS ಬೃಂದಾವನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಪದೇ ಪದೇ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಉತ್ತರ ಬೃಂದಾವನದ ಬಳಿ ಚಿರತೆ ಓಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
14 ಜಾನುವಾರು ತಿಂದು ತೇಗಿ ಜನರ ನಿದ್ದೆಗಿಡಿಸಿದ ಹುಲಿ ಸೆರೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು!
ನಿನ್ನೆ ಸಂಜೆ ಚಿರತೆ ಕಾಣಿಸಿಕೊಂಡಿದೆ. ಕಳೆದ ವಾರ ಡ್ಯಾಂ ಮೆಟ್ಟಿಲು ಬಳಿ ಚಿರತೆ ಕಾಣಿಸಿಕೊಂಡಿತ್ತು. ತಕ್ಷಣ ಎಚ್ಚೆತ್ತ ಅರಣ್ಯ ಇಲಾಖೆ ಬೋನ್ ಇರಿಸಿ, ಕೂಂಬಿಂಗ್ ಕಾರ್ಯಾಚರಣೆ ನಡೆಸಿತ್ತು. ಕೂಂಬಿಂಗ್ ಕಾರ್ಯಾಚರಣೆ ವೇಳೆ ಚಿರತೆ ಕಾಣಿಸಿಕೊಂಡಿರಲಿಲ್ಲ.
ನಿನ್ನೆ ಸಂಜೆ ಮತ್ತೆ ಚಿರತೆ ಕಾಣಿಸಿಕೊಳ್ಳುತ್ತಿದ್ದಂತೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಟಿಕೆಟ್ ತೆಗೆದುಕೊಂಡು ಬೃಂದಾವನಕ್ಕೆ ಬಂದಿದ್ದ ಪ್ರವಾಸಿಗರನ್ನು ಹೊರಕ್ಕೆ ಕಳಿಹಿಸಲಾಗಿದೆ. ಈ ಮದ್ಯೆ ಟಿಕೆಟ್ ಹಣ ವಾಪಸ್ ಕೊಡುವಂತೆ ಸಿಬ್ಬಂದಿ ಜೊತೆ ಪ್ರವಾಸಿಗರು ವಾಗ್ವಾದಕ್ಕೆ ಇಳಿದಿದ್ದರು. ಕೊನೆಗೆ ಸಮಾಧಾನಪಡಿಸಿ ಕಳುಹಿಸಿದ್ದಾರೆ ಅಧಿಕಾರಿಗಳು.
ತಾಯಿ ಇದ್ದರೂ ದೂರಾದ ಹುಲಿ ಮರಿಯನ್ನು ಆರೈಕೆ ಮಾಡಿದ್ದೇ ಬನ್ನೇರುಘಟ್ಟ ಜೈವಿಕ ಉದ್ಯಾನವನ ಸಿಬ್ಬಂದಿ!
ಗ್ರಾಮಸ್ಥರ ನಿದ್ದೆಗೆಡಿಸಿದ್ದ ಕರಡಿ ಕೊನೆಗೂ ಸೆರೆ
ತುಮಕೂರು: ಹಲವು ದಿನಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಕರಡಿ ಕೊನೆಗೂ ಸೆರೆಯಾಗಿದೆ. ಕರಡಿ ಸೆರೆಯಿಂದ ಬೋರಸಂದ್ರ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಕೆಲ ದಿನಗಳಿಂದ ಕರಡಿ ಉಪಟಳಕ್ಕೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬೋರಸಂದ್ರ ಗ್ರಾಮದ ಜನರು ಆತಂಕಕ್ಕೊಳಗಾಗಿದ್ದರು.
ಗ್ರಾಮಸ್ಥರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕರಡಿ ಸೆರೆಗೆ ಬೋನ್ ಇಟ್ಟಿತ್ತು. ಇಂದು(ಶನಿವಾರ) ಬೆಳ್ಳಂಬೆಳಗ್ಗೆ ಬೋನ್‌ಗೆ ಕರಡಿ ಬಿದ್ದಿದೆ. ಸೆರೆ ಸಿಕ್ಕ ಕರಡಿಯನ್ನ ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಣೆ ಮಾಡಿ ಕೊಂಡ್ಯೊಯ್ದಿದ್ದಾರೆ.