ಕೋಲಾರ ತಾಲೂಕಿನ ಸುಗಟೂರು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಮುನ್ನೆಚ್ಚರಿಕೆ ಕ್ರಮ
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ(ಅ.29): ಕೋಲಾರ ತಾಲೂಕಿನ ತೊಟ್ಲಿ ಗ್ರಾಮದಲ್ಲಿ ಮೆದುಳು ಜ್ವರ ಪತ್ತೆಯಾಗಿದ್ದು, ಸುಗಟೂರು ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಆತಂಕ ಮನೆಮಾಡಿದೆ. ಶಾಲೆಗೆ ತೆರಳುತ್ತಿದ್ದ 14 ವರ್ಷ ಬಾಲಕನಿಗೆ ಮೆದುಳು ಜ್ವರ ಪತ್ತೆಯಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಲಾಗ್ತಿದೆ.
ಆರಂಭದಲ್ಲಿ ಬಾಲಕನಿಗೆ ಮೂರ್ಛೆ ರೋಗ ಕಾಣಿಸಿಕೊಂಡಿದ್ದು ಸಾಕಷ್ಟು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ರು ಪ್ರಯೋಜನವಾಗಿರಲಿಲ್ಲ. ಕಳೆದ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಿದ್ದಾಗ ವೈದ್ಯರ ಪರೀಕ್ಷೆಯಲ್ಲಿ ಮೆದುಳು ಜ್ವರ ಇರೋದು ಪತ್ತೆಯಾಗಿದೆ.ಸಧ್ಯ ಬಾಲಕನಿಗೆ ನಿರಂತರ ಚಿಕಿತ್ಸೆ ನೀಡಲಾಗ್ತಿದ್ದು ಮುಂಜಾಗ್ರತಾ ಕ್ರಮ ಸಹ ತೆಗೆದುಕೊಂಡಿದ್ದೇವೆ. ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಸುಗಟೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಕಾವ್ಯಾ ಅವರು ತಿಳಿಸಿದ್ದಾರೆ.
ಕೋಲಾರದಲ್ಲಿ ಧನ್ವಂತರಿ ಜಯಂತಿ, ಆಯುರ್ವೇದ ಪದ್ದತಿಯ ಅಳವಡಿಕೆಗೆ ಸೂಚನೆ
ಇನ್ನು ಮೆದುಳು ಜ್ವರ ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಒಂದು ವೇಳೆ ಹಂದಿಗಳಲ್ಲಿ ವೈರಾಣು ಇದ್ದರೆ ಅದಕ್ಕೆ ಕಚ್ಚಿದ ಸೊಳ್ಳೆಗಳಿಂದ ರೋಗ ಹರಡುವ ಸಾಧ್ಯತೆ ಹೆಚ್ಚಾಗಿರೋದ್ರಿಂದ ಸುಗಟೂರು ಗ್ರಾಮ ಪಂಚಾಯಿತಿಯಿಂದಲೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಪಂಚಾಯ್ತಿ ವ್ಯಾಪ್ತಿಗೆ ಬರುವ ಸುಮಾರು ನಾಲ್ಕು ಹಂದಿ ಫಾರಂಗಳ ಮಾಲೀಕರಿಗೆ ಗ್ರಾಮ ಪಂಚಾಯಿತಿಯಿಂದ ನೋಟಿಸ್ ಜಾರಿ ಮಾಡಲಾಗಿದೆ.
ಕಲ್ಲೂರು, ಅಂಕಶೆಟ್ಟಿ, ವಿನೋಬನಗರ, ಚಿನ್ನಹಳ್ಳಿ ಸೇರಿದಂತೆ ನಾಲ್ಕು ಕಡೆ ಹಂದಿ ಫಾರಂಗಳಿದ್ದು ನೋಟಿಸ್ ನೀಡಿ ಕಡ್ಡಾಯವಾಗಿ ಸೊಳ್ಳೆ ಪರದೆ ಬಳಸಿ, ಸೋಂಕು ಹರಡದಂತೆ, ನೀರು ನಿಂತು ಸೊಳ್ಳೆಗಳ ಉತ್ಪತಿಗೆ ಅವಕಾಶ ನೀಡದೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಕ್ರಮ ಕೈಗೊಳ್ಳಲಾಗಿದೆ. 1 ರಿಂದ 15 ವರ್ಷದ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಆರೋಗ್ಯ ಇಲಾಖೆಯಿಂದ ಮನವಿ ಮಾಡಿಕೊಳ್ಳಲಾಗುತ್ತಿದೆ.
ಹಿಂದುತ್ವದ ಆಧಾರದ ಮೇಲೆ ಬಿಜೆಪಿ ಅಧಿಕಾರಕ್ಕೆ: ಸಚಿವ ಆರ್. ಅಶೋಕ್
ಇನ್ನು ಮೆದುಳು ಜ್ವರ ಅನ್ನೋದು ಒಂದು ರೀತಿ ಮೆದುಳಿನ ಸೋಂಕು ಅಂತ ಹೇಳಲಾಗುತ್ತೆ. ಒಂದು ವೇಳೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಸೋಂಕಿತನಿಗೆ ಸಾವು ಸಂಭವಿಸಲಿದೆ. ಇದಕ್ಕೆ ಪ್ರತಿ ವರ್ಷ 5 ಲಕ್ಷಕ್ಕೂ ಹೆಚ್ಚು ಮಕ್ಕಳು ಹಾಗೂ ವಯಸ್ಕರು ಬಲಿಯಾಗುತ್ತಿದ್ದಾರೆ. ಇದು ಆರೋಗ್ಯ ಇಲಾಖೆಗೆ ದೊಡ್ಡ ಸವಾಲಾಗಿದ್ದು, ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಸಾವಿನ ಪ್ರಮಾಣ ಕಡಿಮೆ ಮಾಡಬಹುದು.
ಇನ್ನು ಮೆದುಳು ಸೋಂಕು ಪತ್ತೆಯಾದವರಿಗೆ ಪ್ರಮುಖವಾಗಿ ಕಂಡುವರುವ ಲಕ್ಷಣಗಳು. ಜ್ವರ, ಕುತ್ತಿಗೆ ಬಿಗಿಯುವುದು, ಕೋಮ, ಹೊಟ್ಟೆ ಹಸಿವು ಆಗದೆ ಇರೋದು, ಮೂರ್ಛೆ, ಮುಖದಲ್ಲಿ ಗುಳ್ಳೆಗಳು,ತಲೆನೋವು ಸೇರಿದಂತೆ ಇನ್ನಿತರ ರೋಗ ಲಕ್ಷಣಗಳು ಕಂಡುಬರಲಿದೆ.