ಬೆಂಗ್ಳೂರಿಗೆ ಇಂದು ಅಮಿತ್‌ ಶಾ ಭೇಟಿ: ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ

Published : Apr 01, 2022, 08:00 AM IST
ಬೆಂಗ್ಳೂರಿಗೆ ಇಂದು ಅಮಿತ್‌ ಶಾ ಭೇಟಿ: ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ

ಸಾರಾಂಶ

*  ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ತಾತ್ಕಾಲಿಕ ನಿಷೇಧ *  ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಆದೇಶ *   ಗಣ್ಯ ವ್ಯಕ್ತಿಗಳು ಬಂದು ಹೋಗುವವರೆಗೂ ವಾಹನ ಸಂಚಾರ ನಿಷೇಧ

ಬೆಂಗಳೂರು(ಏ.01):  ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amit Shah) ಸೇರಿದಂತೆ ಹಲವು ಗಣ್ಯರು ಶುಕ್ರವಾರ ಮಲ್ಲೇಶ್ವರದ ಬಿಜೆಪಿ(BJP) ಕಚೇರಿಗೆ ಭೇಟಿ ನೀಡುತ್ತಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಮಲ್ಲೇಶ್ವರದ ಕೆಲ ರಸ್ತೆಗಳಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌(Kamal Pant) ಆದೇಶಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಬಿಜೆಪಿ ಕಚೇರಿಗೆ ಬರುವಾಗ, ಸಚಿವರು, ಗಣ್ಯರು, ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆಯಿದೆ. ಅಮಿತ್‌ ಶಾ ಅವರು ಮಲ್ಲೇಶ್ವರದ ಸಂಪಿಗೆ ರಸ್ತೆ, ಮಾರ್ಗೋಸಾ ರಸ್ತೆ, 18ನೇ ಅಡ್ಡ ರಸ್ತೆ, 15ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ, 2ನೇ ಟೆಂಪಲ್‌ ಸ್ಟ್ರೀಟ್‌ ರಸ್ತೆಗಳಲ್ಲಿ ಸಂಚರಿಸಲಿದ್ದಾರೆ. 

ಪ್ರಧಾನಿ ಮೋದಿ ಭಾರತದ ಅತಿ ಪ್ರಭಾವಿ ವ್ಯಕ್ತಿ: ಪ್ರಭಾವಿ ಕನ್ನಡಿಗ: ಬಿ ಎಲ್‌ ಸಂತೋಷ್‌ ನಂ.1!

ಈ ರಸ್ತೆಗಳಲ್ಲಿ ಹೆಚ್ಚಿನ ಅಂಗಡಿಗಳು, ಶಾಲಾ-ಕಾಲೇಜುಗಳು ಹಾಗೂ ಇತರೆ ವ್ಯಾಪಾರಿ ಮಳಿಗೆಗಳು ಇರುವುದರಿಂದ ಇಲ್ಲಿಗೆ ಬರುವವರು ರಸ್ತೆಗಳಲ್ಲಿ ವಾಹನ ನಿಲುಗಡೆ ಮಾಡುತ್ತಾರೆ. ಇದರಿಂದ ಗಣ್ಯ ವ್ಯಕ್ತಿಗಳ ಸಂಚಾರಕ್ಕೆ ಅಡಚಣೆ ಆಗುವುದರಿಂದ ಗಣ್ಯ ವ್ಯಕ್ತಿಗಳು ಬಂದು ಹೋಗುವವರೆಗೂ (ಬೆಳಗ್ಗೆ 6ರಿಂದ) ಈ ರಸ್ತೆಗಳ ಎರಡೂ ಬದಿಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ(Vehicles Prohibited).

ವಾಹನ ಸಂಚಾರ ನಿಷೇಧಗೊಂಡ ರಸ್ತೆಗಳಿವು

-ಮಲ್ಲೇಶ್ವರ 18ನೇ ಅಡ್ಡರಸ್ತೆಯಲ್ಲಿ ಸಂಪಿಗೆ ರಸ್ತೆಯಿಂದ 4ನೇ ಮುಖ್ಯರಸ್ತೆ 18ನೇ ಅಡ್ಡರಸ್ತೆ ಜಂಕ್ಷನ್‌
-ಮಾರ್ಗೋಸಾ ರಸ್ತೆಯಲ್ಲಿ 18ನೇ ಅಡ್ಡ ರಸ್ತೆ ಜಂಕ್ಷನ್‌ನಿಂದ 15ನೇ ಅಡ್ಡರಸ್ತೆ ಜಂಕ್ಷನ್‌
-ಮಲ್ಲೇಶ್ವರ 15ನೇ ಅಡ್ಡರಸ್ತೆಯಲ್ಲಿ 4ನೇ ಮುಖ್ಯರಸ್ತೆ 15ನೇ ಅಡ್ಡರಸ್ತೆ ಜಂಕ್ಷನ್‌ನಿಂದ 15ನೇ ಕ್ರಾಸ್‌ 2ನೇ ಟೆಂಪಲ್‌ ಸ್ಟ್ರೀಟ್‌ ಜಂಕ್ಷನ್‌
-ಮಲ್ಲೇಶ್ವರ 4ನೇ ಮುಖ್ಯರಸ್ತೆಯಲ್ಲಿ 4ನೇ ಮುಖ್ಯರಸ್ತೆ 15ನೇ ಅಡ್ಡರಸ್ತೆ ಜಂಕ್ಷನ್‌ನಿಂದ 4ನೇ ಮುಖ್ಯರಸ್ತೆ 18ನೇ ಅಡ್ಡರಸ್ತೆ ಜಂಕ್ಷನ್‌
-2ನೇ ಟೆಂಪಲ್‌ ಸ್ಟ್ರೀಟ್‌ ರಸ್ತೆಯಲ್ಲಿ 15ನೇ ಕ್ರಾಸ್‌ 2ನೇ ಟೆಂಪಲ್‌ ಸ್ಟ್ರೀಟ್‌ ಜಂಕ್ಷನ್‌ನಿಂದ 2ನೇ ಟೆಂಪಲ್‌ ಸ್ಟ್ರೀಟ್‌ ಜಂಕ್ಷನ್‌ 11ನೇ ಅಡ್ಡರಸ್ತೆ ಜಂಕ್ಷನ್‌ ವರೆಗೆ

ಅರಮನೆ ಮೈದಾನದಲ್ಲಿ ಸಹಕಾರ ಕಾರ್ಯಕ್ರಮ: ವಾಹನ ಸಂಚಾರಕ್ಕೆ ಪರಾರ‍ಯಯ ಮಾರ್ಗ ವ್ಯವಸ್ಥೆ

ಸಹಕಾರ ಇಲಾಖೆಯಿಂದ ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ(Palace Ground) ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿರುವುದರಿಂದ ಭಾರೀ ಸಂಖ್ಯೆಯಲ್ಲಿ ಗಣ್ಯರು, ಆಹ್ವಾನಿತರು, ಸಾರ್ವಜನಿಕರು ಆಗಮಿಸುವ ನಿರೀಕ್ಷೆಯಿದೆ. ಹೀಗಾಗಿ ರಾಜ್ಯದ ವಿವಿಧೆಡೆಯಿಂದ ಕಾರ್ಯಕ್ರಮಕ್ಕೆ ಬರುವವರ ವಾಹನಗಳ ಸಂಚಾರ ಹಾಗೂ ವಾಹನಗಳ ನಿಲುಗಡೆಗೆ ನಗರ ಸಂಚಾರ ಪೊಲೀಸರು(Police) ವ್ಯವಸ್ಥೆ ಕಲ್ಪಿಸಿದ್ದಾರೆ.

ಬಸ್‌, ಟೆಂಪೋ ಟಾವೆಲರ್‌ಗಳಲ್ಲಿ ಕಾರ್ಯಕ್ರಮಕ್ಕೆ ಬರುವವರು ಸರ್ಕಸ್‌ ಮೈದಾನದಲ್ಲಿ ವಾಹನಗಳನ್ನು ನಿಲುಗಡೆ ಮಾಡಬೇಕು. ದ್ವಿಚಕ್ರ ವಾಹನ ಹಾಗೂ ಕಾರುಗಳಲ್ಲಿ ಬರುವವರು ಮಾವಿನಕಾಯಿ ಮಂಡಿಯಲ್ಲಿ ನಿಲುಗಡೆ ಮಾಡಲು ಸೂಚಿಸಲಾಗಿದೆ.

*ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳು- ನಾಯಂಡಹಳ್ಳಿ ಎಡ ತಿರುವುದು ಪಡೆದು ಸುಮ್ಮನಹಳ್ಳಿ-ಡಾ.ರಾಜ್‌ಕುಮಾರ್‌ ಸಮಾಧಿ-ತುಮಕೂರು ರಸ್ತೆ*ಗೊರಗುಂಟೆಪಾಳ್ಯ ಜಂಕ್ಷನ್‌- ಬಿಇಎಲ್‌- ಹೆಬ್ಬಾಳ ಮೇಲ್ಸೇತುವೆ-ಮೇಖ್ರಿ ವೃತ್ತ ಸರ್ವಿಸ್‌ ರಸ್ತೆ-ಜಯಮಹಲ್‌ ರಸ್ತೆ- ಸರ್ಕಸ್‌ ಮೈದಾನ
*ತುಮಕೂರು ರಸ್ತೆ ಕಡೆಯಿಂದ ಬರುವ ವಾಹನಗಳು- ಗೊರಗುಂಟೆಪಾಳ್ಯ- ಬಿಇಎಲ್‌-ಹೆಬ್ಬಾಳ ಮೇಲ್ಸೇತುವೆ- ಮೇಖ್ರಿ ವೃತ್ತ ಸರ್ವಿಸ್‌ ರಸ್ತೆ- ಜಯಮಹಲ್‌ ರಸ್ತೆ- ಸರ್ಕಸ್‌ ಮೈದಾನ
*ಕನಕಪುರ ರಸ್ತೆಯಿಂದ ಬರುವ ವಾಹನಗಳು-ಬನಶಂಕರಿ ದೇವಸ್ಥಾನ ಬಸ್‌ ನಿಲ್ದಾಣದ ಬಳಿ ಬಲ ತಿರುವುದು ಪಡೆದು-ರಾಜಲಕ್ಷ್ಮೇ ಜಂಕ್ಷನ್‌-ಜಯನಗರ 4ನೇ ಮೈನ್‌-ಸೌತ್‌ ಎಂಡ್‌ ವೃತ್ತ- ಲಾಲ್‌ಬಾಗ್‌ ಪಶ್ಚಿಮ ಗೇಟ್‌- ಟೌನ್‌ ಹಾಲ್‌- ಮೈಸೂರು ಬ್ಯಾಂಕ್‌ ವೃತ್ತ- ಅರಮನೆ ರಸ್ತೆ- ಮೌರ್ಯ ವೃತ್ತ- ಸ್ವಸ್ತಿಕ್‌ ವೃತ್ತ- ಬಿಡಿಎ ಮೇಲ್ಸೇತುವೆ- ಕಾವೇರಿ ಜಂಕ್ಷನ್‌- ಜಯಮಹಲ ರಸ್ತೆ- ಸರ್ಕಸ್‌ ಮೈದಾನ
*ಬನ್ನೇರುಘಟ್ಟರಸ್ತೆ ಕಡೆಯಿಂದ ಬರುವ ವಾಹನಗಳು- ಡೈರಿ ವೃತ್ತ- ಡಾ.ಮರೀಗೌಡ ರಸ್ತೆ- ಮಿನರ್ವ ವೃತ್ತ- ಕೆ.ಜಿ.ರಸ್ತೆ- ಅರಮನೆ ರಸ್ತೆ- ಮೌರ್ಯ ವೃತ್ತ- ಸ್ವಸ್ತಿಕ್‌ ವೃತ್ತ- ಜಯಮಹಲ್‌ ರಸ್ತೆ- ಸರ್ಕಸ್‌ ಮೈದಾನ
*ಹೊಸೂರು ಕಡೆಯಿಂದ ಬರುವ ವಾಹನಗಳು- ಮಡಿವಾಳ ಚೆಕ್‌ಪೋಸ್ಟ್‌- ಡೈರಿ ವೃತ್ತ- ಲಾಲ್‌ಬಾಗ್‌ ಮುಖ್ಯದ್ವಾರ- ಜೆ.ಸಿ.ರಸ್ತೆ- ಟೌನ್‌ಹಾಲ್‌- ಕೆ.ಜಿ.ರಸ್ತೆ- ಅರಮನೆ ರಸ್ತೆ- ಮೌರ್ಯ ವೃತ್ತ- ಸ್ವಸ್ತಿಕ್‌ ವೃತ್ತ- ಜಯಮಹಲ್‌ ರಸ್ತೆ-ಸರ್ಕಸ್‌ ಮೈದಾನ
*ಹಳೇ ಮದ್ರಾಸ್‌ ರಸ್ತೆ ಕಡೆಯಿಂದ ಬರುವ ವಾಹನಗಳು- ಕೆ.ಆರ್‌.ಪುರ ತೂಗು ಸೇತುವೆ- ಹೆಣ್ಣೂರು ಜಂಕ್ಷನ್‌- ನಾಗವಾರ- ಹೆಬ್ಬಾಳ ಮೇಲ್ಸೇತುವೆ- ಸರ್ಕಸ್‌ ಮೈದಾನ
* ಬಳ್ಳಾರಿ ರಸ್ತೆ ಕಡೆಯಿಂದ ಬರುವ ವಾಹನಗಳು- ದೇವನಹಳ್ಳಿ- ಚಿಕ್ಕಜಾಲ, ಕೋಗಿಲು ಜಂಕ್ಷನ್‌- ಹೆಬ್ಬಾಳ ಮೇಲ್ಸೇತುವೆ- ಸರ್ಕಸ್‌ ಮೈದಾನ
* ದೊಡ್ಡಬಳ್ಳಾಪುರ ಕಡೆಯಿಂದ ಬರುವ ವಾಹನಗಳು- ಮೇಜರ್‌ ಉನ್ನಿಕೃಷ್ಣ ರಸ್ತೆ ಜಂಕ್ಷನ್‌- ಯಲಹಂಕ ಪೊಲೀಸ್‌ ಠಾಣೆ ಜಂಕ್ಷನ್‌- ಬಳ್ಳಾರಿ ರಸ್ತೆ- ಹೆಬ್ಬಾಳ ಮೇಲ್ಸೇತುವೆ- ಸರ್ಕಸ್‌ ಮೈದಾನ
* ಗಣ್ಯ ಮತ್ತು ಅತಿಗಣ್ಯ ವ್ಯಕ್ತಿಗಳ ವಾಹನಗಳಿಗೆ ಅರಮನೆ ಮೈದಾನದ ಶಾರೂಖ್‌ ಖಾನ್‌ ಮೈದಾನದಲ್ಲಿ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ

ರಾಜ್ಯದಲ್ಲಿ ಇಂದು ಅಮಿತ್‌ ಶಾ ಹವಾ: ಸಂಪುಟ, ನಿಗಮ-ಮಂಡಳಿ ಬಗ್ಗೆ ಚರ್ಚೆ?

ಯಾವ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ?

ರಮಣ ಮಹರ್ಷಿ ರಸ್ತೆ, ಸರ್‌ ಸಿ.ವಿ.ರಾಮನ್‌ ರಸ್ತೆ, ಬಳ್ಳಾರಿ ರಸ್ತೆ, ಹೆಬ್ಬಾಳ ಮೇಲ್ಸೇತುವೆ, ಮೇಖ್ರಿ ವೃತ್ತ, ಜಯಮಹಲ್‌ ರಸ್ತೆ, ತರಳಬಾಳು ರಸ್ತೆ, ಎಂ.ವಿ.ಜಯರಾಮನ್‌ ರಸ್ತೆ, ಪ್ಯಾಲೇಜ್‌ ರಸ್ತೆ, ಪ್ಯಾಲೇಸ್‌ ಕ್ರಾಸ್‌ ರಸ್ತೆ, ಪಿಆರ್‌ಟಿಸಿ ಜಂಕ್ಷನ್‌ನಿಂದ ವಾಟರ್‌ ಟ್ಯಾಂಕ್‌ ಜಂಕ್ಷನ್‌, ಟಿ.ಚೌಡಯ್ಯ ರಸ್ತೆ, ರೇಸ್‌ಕೋರ್ಸ್‌ ರಸ್ತೆ, ಟೆಂಪಲ್‌ ಸ್ಟ್ರೀಟ್‌ ರಸ್ತೆ.

ಪರ್ಯಾಯ ಮಾರ್ಗ

*ನಗರದ ದಕ್ಷಿಣ ಮತ್ತು ಪಶ್ಚಿಮ ಭಾಗದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೋಗುವ ವಾಹನಗಳು- ಬಸವೇಶ್ವರ ವೃತ್ತ- ಹಳೇ ಹೈಗ್ರೌಂಡ್ಸ್‌ ಪಿ.ಎಸ್‌ ಜಂಕ್ಷನ್‌- ಟಿ.ಚೌಡಯ್ಯ ರಸ್ತೆ- ವಿಂಡ್ಸರ್‌ ಮ್ಯಾನರ್‌ ಜಂಕ್ಷನ್‌- ಬಾಷ್ಯಂ ವೃತ್ತ- ಸದಾಶಿವನಗರ ಪಿ.ಎಸ್‌.ಜಂಕ್ಷನ್‌- ದೇವಸಂದ್ರ, ಹೆಬ್ಬಾಳ ಮೇಲ್ಸೇತುವೆ
*ನಗರದ ಪೂರ್ವ ಭಾಗದಿಂದ ವಿಮಾನ ನಿಲ್ದಾಣದ ಕಡೆಗೆ ಹೋಗುವವರು- ಎಂ.ಜಿ.ರಸ್ತೆ-ಕಾಮರಾಜ ರಸ್ತೆ- ಐಟಿಸಿ ಮೇಲ್ಸೇತುವೆ- ಬಾಣಸವಾಡಿ ಮುಖ್ಯರಸ್ತೆ- ಥಣಿಸಂದ್ರ ಮುಖ್ಯರಸ್ತೆ- ಬಾಗಲೂರು ಕ್ರಾಸ್‌
*ವಿಮಾನ ನಿಲ್ದಾಣದಿಂದ ನಗರದ ಪೂರ್ವ ಭಾಗದ ಕಡೆಗೆ ಬರುವವರು- ಹೆಬ್ಬಾಳ ಮೇಲ್ಸೇತುವೆ- ಹೊರವರ್ತುಲ ರಸ್ತೆ-ನಾಗವಾರ ಜಂಕ್ಷನ್‌- ಟ್ಯಾನರಿ ರಸ್ತೆ- ಹೆಣ್ಣೂರು ರಿಂಗ್‌ ರಸ್ತೆ
*ವಿಮಾನ ನಿಲ್ದಾಣದಿಂದ ನಗರದ ದಕ್ಷಿಣ, ಪಶ್ಚಿಮ ಮತ್ತು ಉತ್ತರ ಭಾಗದ ಕಡೆಗೆ- ಹೆಬ್ಬಾಳ ಮೇಲ್ಸೇತುವೆ-ಕುವೆಂಪು ವೃತ್ತ- ನ್ಯೂ ಬಿಇಎಲ್‌ ರಸ್ತೆ- ಸದಾಶಿವನಗರ ಪೊಲೀಸ್‌ ಠಾಣೆ ಜಂಕ್ಷನ್‌- ಮಾರಮ್ಮ ವೃತ್ತ- ಮಾರ್ಗೋಸಾ ರಸ್ತೆ- ಕೆ.ಸಿ.ಜನರಲ್‌.
 

PREV
Read more Articles on
click me!

Recommended Stories

ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ: ಈ ಬಾರಿ 'ತೇಜಸ್ವಿ' ಲೋಕದ ಅನಾವರಣ, ವಿವಿಧ ಸ್ಪರ್ಧೆಗಳಿಗೆ ಅರ್ಜಿ ಆಹ್ವಾನ
ಹೊಸ ವರ್ಷದ ದುರಂತ: ಕಲಕೇರಿ ವೀವ್ ಪಾಯಿಂಟ್‌ನಲ್ಲಿ ಫೋಟೋ ಶೂಟ್‌ಗೆ ಹೋದ ಯುವಕ ಜಾರಿಬಿದ್ದು ದುರ್ಮರಣ!