ದಕ್ಷಿಣ ಕೊಡಗಿನಲ್ಲಿ ನಿರಂತರವಾಗಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವ ಹುಲಿ ನಲ್ಲೂರು ಗ್ರಾಮದಲ್ಲಿ ಕಾರ್ಮಿಕರಿಗೆ ಕಾಣಿಸಿಕೊಂಡಿದೆ. ಅಲ್ಲಿನ ಪುಚ್ಚಿಮಾಡ ಲಾಲಾ ಎಂಬವರಿಗೆ ಸೇರಿದ ತೋಟದಲ್ಲಿ ಗುರುವಾರ ಬೆಳಗ್ಗೆ ಹುಲಿ ಪ್ರತ್ಯಕ್ಷವಾಗಿದ್ದು, ಕಾರ್ಮಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಗೋಣಿಕೊಪ್ಪ(ಮೇ 15): ದಕ್ಷಿಣ ಕೊಡಗಿನಲ್ಲಿ ನಿರಂತರವಾಗಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವ ಹುಲಿ ನಲ್ಲೂರು ಗ್ರಾಮದಲ್ಲಿ ಕಾರ್ಮಿಕರಿಗೆ ಕಾಣಿಸಿಕೊಂಡಿದೆ. ಅಲ್ಲಿನ ಪುಚ್ಚಿಮಾಡ ಲಾಲಾ ಎಂಬವರಿಗೆ ಸೇರಿದ ತೋಟದಲ್ಲಿ ಗುರುವಾರ ಬೆಳಗ್ಗೆ ಹುಲಿ ಪ್ರತ್ಯಕ್ಷವಾಗಿದ್ದು, ಕಾರ್ಮಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದಷ್ಟೇ ಬಾಳೆಲೆ ವ್ಯಾಪ್ತಿಯಲ್ಲಿ ಹುಲಿಯೊಂದು ರಸ್ತೆಯಲ್ಲೇ ಪತ್ತೆಯಾಗಿತ್ತು, ಅದನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಇದೀಗ ಮತ್ತೆ ಹುಲಿ ಕಾಣಿಸಿಕೊಂಡಿರುವುದರಿಂದ ಈ ಭಾಗದ ಜನತೆ ಭಯಭೀತರಾಗಿದ್ದಾರೆ. ದಕ್ಷಿಣ ಕೊಡಗಿನ ಭಾಗದಲ್ಲಿ ನಿರಂತರ ಹುಲಿ ದಾಳಿಯಿಂದಾಗಿ ರೈತರು ತಮ್ಮ ಅನೇಕ ಜಾನುವಾರುಗಳನ್ನು ಕಳೆದುಕೊಂಡು ಕಂಗೆಟ್ಟಿದ್ದರೆ, ಇದೀಗ ಹಗಲು ಹೊತ್ತಿನಲ್ಲೇ ಹುಲಿ ಪ್ರತ್ಯಕ್ಷವಾಗಿ ಜೀವ ಭಯ ಮೂಡಿಸಿದೆ.
ಭಾರತದ ಜೈಲಲ್ಲಿ ಇಲಿ ಇವೆ, ಗಡೀಪಾರು ಮಾಡಬೇಡಿ: ನೀರವ್ ಮೋದಿ ಮನವಿ
ಅರಣ್ಯ ಇಲಾಖೆಯು ಸಾಕಾನೆಗಳನ್ನು ಬಳಸಿ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸುತ್ತಿದ್ದರೂ ಹುಲಿ ಮಾತ್ರ ಸೆರೆಯಾಗಿಲ್ಲ. ದ. ಕೊಡಗಿನ ವಿವಿಧೆಡೆ ಹೆಚ್ಚುತ್ತಿರುವ ಹುಲಿ ಹಾವಳಿ ಬಗ್ಗೆ ರೈತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದು, ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರ ಗಮನಕ್ಕೂ ರೈತ ಮುಖಂಡರು ತಂದಿದ್ದರು. ಅರಣ್ಯ ಇಲಾಖೆ ಇನ್ನಾದರೂ ಹುಲಿ ಸೆರೆ ಕಾರ್ಯಾಚರಣೆಯನ್ನು ಚುರುಕುಗೊಳಿಸಬೇಕೆಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.
ಅಳ್ಳೂರು: ರಸ್ತೆ ಬದಿಯಲ್ಲೇ ಮಲಗಿದ್ದ ವ್ಯಾಘ್ರ!
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಅಳ್ಳೂರು ಎಂಬಲ್ಲಿ ರಸ್ತೆಯ ಬದಿಯಲ್ಲಿ ಹುಲಿ ಮಲಗಿರುವ ವೀಡಿಯೊ ವೈರಲ್ ಆಗಿದೆ. ಪ್ರಯಾಣಿಕರೊಬ್ಬರು ಹುಲಿಯ ಚಲನವಲನ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನಾಯಿಗಳು ಬೊಗಳುತ್ತಿದ್ದಾಗ ಸಾರ್ವಜನಿಕರು ಹೋಗಿ ನೋಡಿದಾಗ ಹುಲಿ ಕಾಣಿಸಿಕೊಂಡಿದೆ. ಸದ್ಯ ರಸ್ತೆ ಬದಿಯಲ್ಲೇ ಹುಲಿ ಆರಾಮವಾಗಿ ಸಮಯ ಕಳೆದಿರುವ ದೃಶ್ಯ ವೈರಲ್ ಆಗಿದೆ. ವಿಡಿಯೊದಲ್ಲಿ ನಾಯಿಗಳು ಬೊಗಳುವ, ವಾಹನಗಳ ಶಬ್ದ ಹಾಗೂ ಜನರು ಮಾತನಾಡುತ್ತಿರುವುದರ ನಡುವೆ ಯಾವುದೇ ಆತಂಕವಿಲ್ಲದೆ ಹುಲಿ ಮಲಗಿರುವುದು ಕಂಡುಬಂದಿದೆ.