* ಬಾಳೆ ತೋಟದಲ್ಲಿ ಅಡಗಿದ್ದ ಹುಲಿ ಸೆರೆ
* ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯುನಿಂದ ಮತ್ತೊಂದು ಯಶಸ್ವಿ ಕಾರ್ಯಾಚರಣೆ
* ಎರಡು ಹಸು ಕೊಂದು, ಇಬ್ಬರನ್ನು ಗಾಯಗೊಳಿಸಿದ್ದ ಹುಲಿ
ವರದಿ: ಪುಟ್ಟರಾಜು. ಆರ್.ಸಿ. ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ(ಜು.04): ಎರಡು ಹಸು ಕೊಂದು, ಇಬ್ಬರನ್ನು ಗಾಯಗೊಳಿಸಿ ತೀವ್ರ ಆತಂಕ ಸೃಷ್ಟಿಸಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಹುಲಿ ಸೆರೆಗೆ ಕೂಂಬಿಂಗ್ ಸ್ಪೆಷಲಿಸ್ಟ್ ದಸರಾ ಆನೆ ಅಭಿಮನ್ಯು ಎಂಟ್ರಿ ಕೊಟ್ಟು ಹುಲಿ ಸೆರೆಯಲ್ಲಿ ಮಹತ್ವದ ಪಾತ್ರ ವಹಿಸಿದೆ.
undefined
ಹೌದು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಸಮೀಪದ ಜಮೀನಿನಲ್ಲಿ ಎರಡು ಹಸುವನ್ನು ಕೊಂದು,ಇಬ್ಬರು ವ್ಯಕ್ತಿಯನ್ನು ಗಾಯಗೊಳಿಸಿದ್ದ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಶುಕ್ರವಾರ ಮಧ್ಯಾಹ್ನದ ವೇಳೆಗೆ ಬಾಳೆ ತೋಟದಲ್ಲಿ ಕೆಲಸ ಮಾಡ್ತಿದ್ದ ಗವಿಯಪ್ಪ ಎಂಬುವವರನ್ನು ಹುಲಿ ಕಚ್ಚಿ ಗಾಯಗೊಳಿಸಿತ್ತು. ನಂತರ ಹುಲಿ ನೋಡಲೂ ಹೋಗಿದ್ದ ರಾಜಶೇಖರ ಎಂಬ ವ್ಯಕ್ತಿಯನ್ನು ಕಚ್ಚಿ ಗಾಯ ಮಾಡಿತ್ತು. ನಂತರ ಆ್ಯಕ್ಟೀವ್ ಆದ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಸೆರೆಗೆ ಕಾರ್ಯತಂತ್ರ ರೂಪಿಸಿದರು.
CHAMARAJANAGARA NEWS: ಗರ್ಭಿಣಿಯನ್ನು 8 ಕೀ. ಮಿ. ದೂರ ಹೊತ್ತು ಆಸ್ಪತ್ರೆಗೆ ಕರೆ ತಂದ ಗ್ರಾಮಸ್ಥರು!
ರಾತ್ರಿಯಿಡೀ ಹುಲಿ ಬಾಳೆ ತೋಟದಿಂದ ಹೊರ ಹೋಗಲೂ ಸಾಧ್ಯವಾಗದಂತೆ ಕಾವಲಿದ್ದರು. ಅಲ್ಲದೇ ಕೂಂಬಿಂಗ್ ಸ್ಪೆಷಲಿಸ್ಟ್ ದಸರಾ ಅಂಬಾರಿ ಹೊರುವ ಅಭಿಮನ್ಯುವನ್ನು ಕರೆದಿಕೊಳ್ಳುವ ಮೂಲಕ ಬೆಳ್ಳಂಬೆಳಗ್ಗೆ ಆಪರೇಷನ್‌ಗೆ ಮುಂದಾದರು. ಳೆ ತೋಟದಲ್ಲಿ ಗಾಯಗೊಂಡಿದ್ದ ಹುಲಿಗೆ ಮೂರು ಬಾರಿ ಅರವಳಿಕೆ ಚುಚ್ಚು ಮದ್ದು ನೀಡಿ ಹುಲಿ ಸೆರೆ ಹಿಡಿಯಲಾಗಿದೆ.ಹುಲಿ ಸೆರೆ ವೇಳೆ ಮಳೆಯಿದ್ದಿದ್ದರಿಂದ ಕಾರ್ಯಾಚರಣೆ ನಡೆಸಲು ಸ್ವಲ್ಪ ತೊಂದರೆಯಾಯಿತು.ಆದ್ರೆ ಅರಣ್ಯ ಇಲಾಖೆ ಸಿಬ್ಬಂದಿ ಇದನ್ನೆಲ್ಲಾ ಲೆಕ್ಕಿಸದೆ ಹುಲಿ ಸೆರೆ ಹಿಡಿದಿದ್ದು, ಚಿಕಿತ್ಸೆಗಾಗಿ ಸದ್ಯ ಹುಲಿಯನ್ನು ಮೈಸೂರಿಗೆ ರವಾನಿಸಲಾಗಿದೆ. ನಂತರ ಹುಲಿಯನ್ನು ಎಲ್ಲಿಗೆ ಬಿಡಬೇಕು ಎಂಬ ತೀರ್ಮಾನ ಮಾಡುವ ಮಾತನಾಡ್ತಾರೆ ಅಧಿಕಾರಿಗಳು.
ಇನ್ನೂ ಹುಲಿ ಇಬ್ಬರನ್ನೂ ಕಚ್ಚಿ ಗಾಯಗೊಳಿಸಿದ್ದರಿಂದ ಗೋಪಾಲಪುರ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು. ಸದ್ಯ ಹುಲಿ ಸೆರೆಯಿಂದ ನಿರಾಳವಾಗಿದ್ದಾರೆ.
ಚಾಮರಾಜನಗರ: ರಾ.ಹೆ ಅಗಲೀಕರಣ, ರಸ್ತೆ ವಿಭಜಕ ಅಳವಡಿಸಲು ಮೋದಿಗೆ ಪತ್ರ ಬರೆದ ಶಾಸಕ
ಆದ್ರೆ ವನ್ಯ ಪ್ರಿಯರು ಈ ಟೈಗರ್ ಆಪರೇಷನ್ ವೇಳೆ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ನಿನ್ನೆಯೇ ಹುಲಿ ಎಲ್ಲರಿಗೂ ಕಾಣ್ತಿತ್ತು ಸೆರೆ ಹಿಡಿದು ಪುನರ್ವಸತಿ ಕೇಂದ್ರಕ್ಕೆ ಬಿಡಬಹುದಿತ್ತು.ಆದ್ರೆ ಜನರ ಗುಂಪು ಹೆಚ್ಚು ಮಾಡಿಕೊಂಡಿದ್ದರು. ಮತ್ತೆ ಹುಲಿ ಜನರ ಮೇಲೆ ದಾಳಿ ಮಾಡಿದ್ರೆ ಹೊಣೆ ಯಾರು?.ಹುಲಿಯ ದಾಳಿ ಕಂಡು ಬಂದ ತಕ್ಷಣ ಅದನ್ನು ಸೆರೆ ಹಿಡಿಯುವ ಕೆಲಸ ಆಗಲಿ ಅಂತಾರೆ. ಬಂಡೀಪುರದ ಅರಣ್ಯಾಧಿಕಾರಿ ಕಾರ್ಯಕ್ಕೆ ಅಸಮಾಧಾನ ವ್ಯಕ್ತಪಡಿಸ್ತಾರೆ.
ಒಟ್ನಲ್ಲಿ ಬಂಡೀಪುರದಲ್ಲಿ ಆತಂಕ ಸೃಷ್ಟಿಸಿದ್ದ ಹುಲಿ ಸೆರೆಯಾಗಿದೆ. ಎರಡು ವರ್ಷದ ಹಿಂದೆ ಚೌಡಹಳ್ಳಿ ಸಮೀಪ ಕೂಡ ರೈತರನ್ನು ಕೊಂದಿದ್ದ ಹುಲಿ ಸೆರೆ ಹಿಡಿಯಲಾಗಿತ್ತು.ಇದೀಗ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿಯಿಡೀ ಎಚ್ಚರಿಕೆ ವಹಿಸಿ ಮುಂಜಾನೆಯೇ ಹುಲಿ ಸೆರೆ ಹಿಡಿದಿದ್ದಾರೆ.ಇದರಿಂದ ರೈತರು ಕೂಡ ನೆಮ್ಮದಿ ಪಡುವ ಹಾಗಾಗಿದೆ.