ವಿಜಯಪುರ: ಸಾತಾಪುರದಲ್ಲಿ ವಾಂತಿ-ಭೇದಿ ಕಾಟ: ಆತಂಕದಲ್ಲಿ ಜನತೆ..!

By Girish Goudar  |  First Published Jul 4, 2022, 12:30 AM IST

*  ಹೊಟ್ಟೆ ನೋವಿನಿಂದ ನರಳಾಡುತ್ತಿರೋ ಮಹಿಳೆಯರು, ಮಕ್ಕಳು
*  ಆಸ್ಪತ್ರೆಗೆ ಇಂಡಿ ಶಾಸಕ ಯಶವಂತರಾಗೌಡ ದೌಡು
*  24×7 ಕುಡಿಯುವ ನೀರೆ ಈ ಘಟನೆಗೆ ಮೂಲ?
 


ವರದಿ: ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ(ಜು.04):  ಜಿಲ್ಲೆಯ ಇಂಡಿ ತಾಲೂಕಿನ ಸಾತಪೂರ ಗ್ರಾಮದಲ್ಲಿ 40ಕ್ಕೂ ಅಧಿಕ ಜನರಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ. ಏಕಾಏಕಿ ಗ್ರಾಮದ ಕೆಲವರಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ನರಳಾಟ ಅನುಭವಿಸಿದ್ದಾರೆ. ಇದರಿಂದಾಗಿ ಇಡಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.  

Latest Videos

undefined

ಗ್ರಾಮಸ್ಥರಲ್ಲಿ ಕಾಣಿಸಿಕೊಂಡ ದಿಢೀರ್‌ ವಾಂತಿ-ಬೇದಿ

ಶುಕ್ರವಾರ ರಾತ್ರಿಯಿಂದಲೇ ಸಾತಾಪುರ ಗ್ರಾಮದಲ್ಲಿ ಕೆಲವರಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಬಳಿಕ ವಾಂತಿ-ಭೇದಿ ಶುರುವಾಗಿದೆ. ಇದು ಗ್ರಾಮದ 50 ಕುಟುಂಬಗಳ 40ಕ್ಕು ಅಧಿಕ ಜನರಲ್ಲಿ ಕಾಣಿಸಿಕೊಂಡಿದೆ. ಮಕ್ಕಳು, ಮಹಿಳೆಯರು, ವಯೋವೃದ್ಧರು, ಯುವಕರಲ್ಲು ಈ ರೀತಿಯ ಸಮಸ್ಯೆ ಕಾಣಿಸಿಕೊಂಡಿದೆ. ಬಹುತೇಕರನ್ನು ಇಂಡಿ ತಾಲೂಕಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಅಡ್ಮಿಟ್‌ ಮಾಡಲಾಗಿದೆ. ಎಲ್ಲರಿಗು ಚಿಕಿತ್ಸೆಯನ್ನ ನೀಡಲಾಗ್ತಿದೆ.

ಜೂನ್‌ ಅಂತ್ಯಕ್ಕೆ ಅರ್ಧದಷ್ಟೂ ಭರ್ತಿಯಾಗದ ALMATTI DAM!

ಸಾತಾಪುರದಲ್ಲಿ ಆತಂಕದ ವಾತಾವರಣ

ದಿಢೀರ್‌ ಎಂದು ಗ್ರಾಮದ ಜನರಲ್ಲಿ ವಾಂತಿ-ಭೇದಿ, ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಸಾತಾಪುರ ಗ್ರಾಮದಲ್ಲಿ ಸಹಜವಾಗಿಯೇ ಆತಂಕ ವಾತಾವರಣ ಮೂಡಿದೆ. ಆರಂಭದಲ್ಲಿ 15-20 ಜನರಲ್ಲಿ ವಾಂತಿ-ಭೇದಿ, ಹೊಟ್ಟೆ ನೋವು ಕಾಣಿಸಿಕೊಂಡು ಬಳಿಕ 40 ಜನರ ವರೆಗು ವ್ಯಾಪಿಸಿಕೊಂಡಿದೆ. ಇದರಿಂದ ಆತಂಕ ಮೂಡಿದೆ.

ವಿಜಯಪುರದಲ್ಲಿ ಮಳೆಗಾಗಿ ಗ್ರಾಮಸ್ಥರಿಂದ ಭಜನೆ: ನಿರಂತರ ಶಿವಧ್ಯಾನ

ಆಸ್ಪತ್ರೆಗೆ ಇಂಡಿ ಶಾಸಕರ ಭೇಟಿ, ಆರೋಗ್ಯ ವಿಚಾರಣೆ

ಘಟನೆ ಬೆಳಕಿಗೆ ಬರ್ತಿದ್ದಂತೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಹೊಟ್ಟೆ ನೋವು, ವಾಂತಿ-ಭೇದಿಗೆ ಚಿಕಿತ್ಸೆ ಪಡೆಯುತ್ತಿದ್ದವರ ಆರೋಗ್ಯ ವಿಚಾರಿಸಿದ್ದಾರೆ. ಇನ್ನು ಆತಂಕದಲ್ಲಿದ್ದ ರೋಗಿಗಳು ಹಾಗೂ ಪೋಷಕರು, ಸಾತಾಪುರ ಗ್ರಾಮಸ್ಥರಲ್ಲಿ ಶಾಸಕರು ಧೈರ್ಯ ಮೂಡಿಸಿದ್ದಾರೆ. ಸರಿಯಾಗಿ ಚಿಕಿತ್ಸೆ ಒದಗಿಸುವಂತೆ ತಾಲೂಕಾಸ್ಪತ್ರೆ ವೈದ್ಯರಿಗೆ ಸೂಚನೆ ನೀಡಿದ್ದಾರೆ. ಘಟನೆಗೆ ಕಾರಣ ಏನು ಎಂಬುದರ ಬಗ್ಗೆ ತನಿಖೆಗೆ ಸೂಚಿಸಿದ್ದಾರೆ.

24×7 ಕುಡಿಯುವ ನೀರೇ ಘಟನೆಗೆ ಮೂಲ?

ಇಂಡಿ ಪಟ್ಟಣದ ಸಮೀಪದಲ್ಲೆ ಈ ಸಾತಾಪುರ ಗ್ರಾಮವಿದೆ. ಪಟ್ಟಣದಿಂದ ಇಲ್ಲಿಗೆ 24×7 ಕುಡಿಯುವ ನೀರು ಸಪ್ಲೈ ಆಗುತ್ತೆ. ಕುಡಿಯುವ ನಳದ ನೀರಿನಲ್ಲಿ ಉಂಟಾದ ವ್ಯತ್ಯಾಸ, ಕಲುಷಿತ ನೀರು ಈ ಘಟನೆಗೆ ಕಾರಣ ಎನ್ನಲಾಗ್ತಿದೆ. ಈಗಾಗಲೇ ನೀರಿನ ಸ್ಯಾಂಪಲ್‌ ಪಡೆದುಕೊಂಡಿರುವ ತಜ್ಞರು ಪರೀಕ್ಷೆಗೆ ಕಳುಹಿಸಿದ್ದಾರೆ. ನಾಳೆ ನೀರಿನ ಪರೀಕ್ಷಾ ವರದಿಯು ಬರಲಿದೆ. ಬಳಿಕ ಘಟನೆಗೆ ಕಾರಣ ಏನು ಎನ್ನುವುದು ಪತ್ತೆಯಾಗಲಿದೆ ಎಂದು ಡಾ ರಾಜಶೇಖರ್‌ ಕೋಳೆಕರ್‌ ಮಾಹಿತಿ ನೀಡಿದ್ದಾರೆ.
 

click me!