ಜೆಡಿಎಸ್‌ನಲ್ಲಿ ಜೋರಾದ ಟಿಕೆಟ್ ಲಾಬಿ : ಸ್ವ ಪಕ್ಷೀಯರಲ್ಲೇ ಅಸಮಾಧಾನ

By Kannadaprabha NewsFirst Published Aug 4, 2021, 10:58 AM IST
Highlights
  • ದಕ್ಷಿಣ ಪದವೀದರ ಕ್ಷೇತ್ರದ ಚುನಾವಣೆ ಟಿಕೆಟ್ ಲಾಬಿ ಬಿರುಸು ಪಡೆದುಕೊಂಡಿದೆ
  • ಜೆಡಿಎಸ್ ಎಂಎಲ್‌ಸಿ ಶ್ರೀಕಂಠೇಗೌಡರ ವಿರುದ್ಧ ಸ್ವಪಕ್ಷೀಯರೇ ಆಗಿರುವ ಮತ್ತೋರ್ವ ಎಂಎಲ್‌ಸಿ ಮರಿತಿಬ್ಬೆಗೌಡ ಆಕ್ರೋಶ

 ಮಂಡ್ಯ (ಆ.04): ದಕ್ಷಿಣ ಪದವೀದರ ಕ್ಷೇತ್ರದ ಚುನಾವಣೆ ಟಿಕೆಟ್ ಲಾಬಿ ಬಿರುಸು ಪಡೆದುಕೊಂಡಿದೆ. ಈ ಬಾರಿ ಕಣದಿಂದ ಹಿಂದೆ ಸರಿದು ಬೇರೋಬ್ಬರಿಗೆ ಟಿಕೆಟ್ ಕೊಡಿಸಲು ಮುಂದಾಗಿರುವ ಜೆಡಿಎಸ್ ಎಂಎಲ್‌ಸಿ ಶ್ರೀಕಂಠೇಗೌಡರ ವಿರುದ್ಧ ಸ್ವಪಕ್ಷೀಯರೇ ಆಗಿರುವ ಮತ್ತೋರ್ವ ಎಂಎಲ್‌ಸಿ ಮರಿತಿಬ್ಬೆಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನಗರದ ಶ್ರೀ ಮಂಜುನಾಥ ಕನ್ವೆನ್‌ಷನ್ ಹಾಲ್‌ನಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ ದಕ್ಷಿಣ ಪದವೀಧರ ಕ್ಷೆತ್ರವನ್ನು ಪ್ರತಿನಿಧಿಸುತ್ತಿರುವ ಕೆ.ಟಿ ಶ್ರೀಕಂಠೇಗೌಡರು ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ವರಿಷ್ಠರ ಬಳಿ ಹೇಳಿಲ್ಲ. ಈ ವಿಷಯವನ್ನು ಸ್ನೇಹಿತರ ಬಳಿ ಹೇಳಿಕೊಂಡು ತಿರುಗುತ್ತಿರುವ ಅವರು  ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್‌.ಕೆ ರಾಮು ಅವರಿಗೆ ಟಿಕೆಟ್ ಕೊಡಸಲು ಮುಂದಾಗಿರುವುದು ಸರಿಯಲ್ಲ ಶ್ರೀಕಂಠೇಗೌಡರೇ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಕೀಲಾರ ಜಯರಾಮು ಸೇರಿದಂತೆ ನಾನು ಅವರಿಗೆ ಬೆಂಬಲ ನೀಡುತ್ತೆವೆ. ಆದರೆ ಹಣ ಆಸೆಗಾಗಿ ಎಚ್‌.ಕೆ ರಾಮು ಪರ ಟಿಕೆಟ್ ಲಾಬಿ ಮಾಡಿದರೆ ಸಹಿಸಲಾಗದು ಎಂದು ಆಕ್ರೋಶ ವ್ಯಕ್ತಪಡಿಸಿದರು. 

'ಪೂರ್ಣ ನೋಂದಣಿಯಾದರೆ ಕ್ಷೇತ್ರ ಜೆಡಿಎಸ್ ತೆಕ್ಕೆಗೆ ಖಚಿತ'

ಇಲ್ಲಸಲ್ಲದ ಆರೋಪದಿಂದ ಪಕ್ಷದಲ್ಲಿ ಗೊಂದಲ : ಶ್ರೀಕಂಠೇಗೌಡರು ಚೇಷ್ಟೆ ಬಿಡಬೇಕು. ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಪಕ್ಷದಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ. ನನ್ನ ವ್ಯಕ್ತಿತ್ವ ಏನೆಂಬುದು  ಪಕ್ಷದ ನಾಯಕರಿಗೆ ಗೊತ್ತು ಎಂದರು. 

ಜಯರಾಮ್‌ಗೆ ಅವಕಾಶದ ಭರವಸೆ : ಕೀಲಾರ ಜಯರಾಮ್‌ ಅವರು ಜನಾನುರಾಗಿಯಾಗಿದ್ದು ನನಗಿಂತ ಹಿರಿಯರು ದೇವೇಗೌಡರು ಅವರಿಗೆ ಪಕ್ಷದಲ್ಲಿ ಅವಕಾಶ ನೀಡುವುದಾಗಿ ಭರಸವೆ ನೀಡಿದ್ದಾರೆ ಎಂದರು. 

click me!