ಗುಡುಗು-ಮಿಂಚಿನ ಸಮ್ಮಿಲನ: ಶೃಂಗೇರಿ ಶಾರದಾಂಬೆ ದೇಗುಲದ ನಯನ ಮನೋಹರ ದೃಶ್ಯ ಸೆರೆ

By Govindaraj S  |  First Published Apr 15, 2022, 1:27 PM IST

ಮಲೆನಾಡಿನಲ್ಲಿ ಸುರಿಯುವ ಮಳೆಯೇ ಒಂದು ವೈಭವ. ಅದರಲ್ಲೂ ಬೇಸಿಗೆ ಕಾಲದಲ್ಲಿ ಗುಡುಗು ಸಿಡಿಲಿನೊಂದಿಗೆ ಅಬ್ಬರಿಸುವ ಮಳೆ ಹಲವು ಅನಾಹುತಗಳನ್ನು ಸೃಷ್ಠಿ ಮಾಡಿದರೆ ಮತ್ತೊಂದೆಡೆ ಹಲವು ವಿಸ್ಮಯಗಳಿಗೂ ಸಾಕ್ಷಿ ಆಗುತ್ತೆ


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಏ.15): ಮಲೆನಾಡಿನಲ್ಲಿ ಸುರಿಯುವ ಮಳೆಯೇ ಒಂದು ವೈಭವ. ಅದರಲ್ಲೂ ಬೇಸಿಗೆ ಕಾಲದಲ್ಲಿ ಗುಡುಗು ಸಿಡಿಲಿನೊಂದಿಗೆ ಅಬ್ಬರಿಸುವ ಮಳೆ ಹಲವು ಅನಾಹುತಗಳನ್ನು ಸೃಷ್ಠಿ ಮಾಡಿದರೆ ಮತ್ತೊಂದೆಡೆ ಹಲವು ವಿಸ್ಮಯಗಳಿಗೂ ಸಾಕ್ಷಿ ಆಗುತ್ತೆ. 

Latest Videos

undefined

ಶಾರದಾಂಬೆ ಟೆಂಪಲ್‌ನಲ್ಲಿ ಮಳೆ ಸೌಂದರ್ಯ: ಗುಡುಗು-ಮಿಂಚಿನ ಸಮ್ಮಿಲನದಿಂದ ಇತಿಹಾಸದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಶೃಂಗೇರಿ ಶಾರದಾಂಬೆ ದೇಗುಲದ (Sringeri Sharadamba Temple) ಸುಂದರ ನೋಟ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಈ ಅತ್ಯದ್ಭುತ ಚಿತ್ರವನ್ನ (Photo) ಸೆರೆ ಹಿಡಿಯಲು ಪ್ರಕೃತಿಯೇ ಸಾಕ್ಷಿಯಾಗಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಸುರಿಯುತ್ತಿದೆ. 

ಮಳೆ ಜೊತೆ ಗುಡುಗು-ಸಿಡಿಲಿನ ಅಬ್ಬರ ಕೂಡ ಜೋರಿದೆ. ಶೃಂಗೇರಿಯಲ್ಲೂ ಮಳೆ ಅಬ್ಬರ ಜೋರಾಗಿದೆ. ನಿನ್ನೆ ಮಳೆ ಆರಂಭಕ್ಕೂ ಮುನ್ನ ಆರಂಭವಾದ ಗುಡುಗು-ಸಿಡಿಲಿನ ಮಧ್ಯೆ ಶೃಂಗೇರಿ ಶಾರದಾಂಬೆ ದೇಗುಲದ ದೃಶ್ಯಕಾವ್ಯ ನೊಡುಗರ ಮನಸೊರೆಗೊಂಡಿದೆ. ನಿನ್ನೆ ಸಂಜೆ ವೇಳೆಗೆ ಶೃಂಗೇರಿ ದೇಗುಲದಲ್ಲಿ ಶಾರದಾಂಬೆ ದರ್ಶನಕ್ಕೆ ಬಂದಿದ್ದ ಭಕ್ತರೊಬ್ಬರು (Devotee) ಈ ಅಪರೂಪದ ಅತ್ಯದ್ಭುತ ಚಿತ್ರವನ್ನ ಸೆರೆ ಹಿಡಿದಿದ್ದಾರೆ.

Chikkamagaluru: ಆಧುನಿಕ ಭರಾಟೆ ಮಧ್ಯೆಯೂ ನೋಡುಗರ ಮನಸೆಳೆದ ಎತ್ತಿನಗಾಡಿ ಸ್ಪರ್ಧೆ

ದೇವಸ್ಥಾನದ ಮೇಲ್ಭಾಗದಿಂದ ಮಿಂಚಿನ ಕೃತಕ ಅಲಂಕಾರ: ಶೃಂಗೇರಿ ಶಾರದಾಂಬೆ ದೇಗುಲದ ಆಕಾಶದ ಮೇಲ್ಭಾಗದಲ್ಲಿ ದೇಗುಲವನ್ನ ಮಿಂಚಿನಿಂದ ಕೃತಕವಾಗಿ ಅಲಂಕರಿಸಿದಂತಿದೆ. ಪ್ರಕೃತಿಯೇ ಮಿಂಚಿನಿಂದ ಶಾರದಾಂಬೆ ದೇಗುಲಕ್ಕೆ ಲೈಟಿಂಗ್ ಸೌಲಭ್ಯ ಕಲ್ಪಿಸಿದಂತೆ ಭಾಸವಾಗಿದೆ. ದೇಗುಲದ ಮೇಲ್ಭಾಗದಲ್ಲೇ ಮಿಂಚು ಸಂಭವಿಸಿದ್ದರಿಂದ ಕಲ್ಲುಗಳಿಂದಲೇ ನಿರ್ಮಾಣಗೊಂಡಿರೋ ಪುರಾತನ ಶಾರದಾಂಬೆ ದೇಗುಲದ ಸೌಂದರ್ಯ ಕೂಡ ಮತ್ತಷ್ಟು ಇಮ್ಮಡಿಗೊಂಡಿದೆ. ಈ ಸುಂದರ ಕ್ಷಣವನ್ನ ಕಣ್ತುಂಬಿಕೊಂಡ ಭಕ್ತರು ತಮ್ಮ ಮೊಬೈಲ್‌ನಲ್ಲಿ ಈ ಅಪರೂಪದ ಘಳಿಗೆಯನ್ನ ಸೆರೆ ಹಿಡಿದಿದ್ದಾರೆ. ಆದರೆ, ಎಲ್ಲರ ಮೊಬೈಲ್‌ನಲ್ಲೂ ಈ ಅಪರೂಪದ ಘಳಿಗೆ ಸೆರೆಯಾಗಿಲ್ಲ.

ಶಕ್ತಿ ಪೀಠದಲ್ಲಿ ದೇವಿ ಅರ್ಚನೆಯಿಂದ ಅಗಣಿತ ಲಾಭ: ಶ್ರೀ ಆದಿ ಶಂಕರಾಚಾರ್ಯರು ಸ್ಥಾಪಿಸಿದ ಹದಿನೆಂಟು ಶಕ್ತಿ ಪೀಠಗಳಲ್ಲಿ ಒಂದಾದ ಶೃಂಗೇರಿ (Sringeri temple) ಶಾರದಾಂಬೆಯ ಸನ್ನಿಧಿ ಸಹ್ಯಾದ್ರಿ ಪರ್ವತಗಳ ತಪ್ಪಲಿನಲ್ಲಿ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿದೆ. ತುಂಗಾ ನದಿ ತೀರದಲ್ಲಿ ವಾಸವಿರುವ ತಾಯಿ ಎಲ್ಲರ ಕಷ್ಟ ಪರಿಹರಿಸುತ್ತಿದ್ದಾಳೆ. ಮಕ್ಕಳ ವಿದ್ಯಾಭ್ಯಾಸದ ಆರಂಭಕ್ಕೂ ಮುನ್ನ ಪೋಷಕರು ತಾಯಿಯ ಆಶೀರ್ವಾದ ಪಡೆದು ಹೋಗುತ್ತಾರೆ. ಮಗುವಿಗೆ ಸರಿಯಾಗಿ ಮಾತನಾಡಲು ಬರದಿದ್ದರೆ, ಅಥವಾ ಮಾತು ಬರುವುದು ತಡವಾದರೆ ತಾಯಿಯ ದರ್ಶನ ಮಾಡಿಸಿದರೆ ಸಾಕು, ಮಗು ಸುಲಲಿತವಾಗಿ ಮಾತನಾಡಲು ಶುರು ಮಾಡುತ್ತದೆ. 

ಮಠದ ಹಿನ್ನೆಲೆ: ಶಂಕರಾಚಾರ್ಯರು 8ನೇ ಶತಮಾನದಲ್ಲಿ ಶಕ್ತಿಪೀಠಗಳಲ್ಲೆಲ್ಲ ಈ ಮಠವನ್ನೇ ಮೊದಲು ಸ್ಥಾಪಿಸಿದರು. ಆದಿ ಶಂಕರರು ಮೊದಲ ಮಠವನ್ನು ಸ್ಥಾಪಿಸಬೇಕೆಂದು ಜಾಗವನ್ನು ಹುಡುಕುತ್ತ ಸಂಚರಿಸುತ್ತಿದ್ದಾಗ ಇಲ್ಲಿಗೆ ಬಂದರು. ತುಂಗಾ ತೀರ ದಲ್ಲಿ ವಿರಮಿಸುತ್ತಿದ್ದಾಗ, ಉರಿ ಬಿಸಿಲಿನಲ್ಲಿ ಗರ್ಭಿಣಿ ಕಪ್ಪೆಯೊಂದು ಬಳಲುತ್ತಿದ್ದಾಗ, ಅದಕ್ಕೆ ಸಹಾಯವಾಗಿ ಹಾವೊಂದು ಹೆಡೆ ಎತ್ತಿ ನೆರಳು ನೀಡಿತ್ತು. ಇದನ್ನು ಕಂಡ ಶಂಕರಾಚಾರ್ಯರು, ನೈಸರ್ಗಿಕ ಶತ್ರುಗಳ ನಡುವೆ ಪ್ರೀತಿ ಬೆಳೆಸಿದ ಈ ಜಾಗದಲ್ಲಿ ಪಾವಿತ್ರ್ಯ ಹಾಗೂ ಮಾತೃತ್ವದ ಮಹಾಶಕ್ತಿಯೇ ಇರಬೇಕು ಎಂದು ತರ್ಕಿಸಿದರು. ಶಕ್ತಿ ಪೀಠ ಸ್ಥಾಪಿಸುವುದಕ್ಕೆ ಇದು ಪ್ರಾಶಸ್ತ್ಯವಾದ ಸ್ಥಳವೆಂದು ತಿಳಿದರು. 

ಕಾಳುಮೆಣಸಿಗೆ ಫುಲ್ ಡಿಮ್ಯಾಂಡ್ , ಕಳ್ಳರ ಕಾಟ ವಿಪರೀತ!

ಕಾಶ್ಮೀರದಿಂದ ಶಾರದೆಯ ಮೂರ್ತಿಯನ್ನ ತಂದು ಇಲ್ಲಿ ಪ್ರತಿಷ್ಠಾಪಿಸಲಾಯಿತು. ಇದಕ್ಕೂ ಮುನ್ನ, ತ್ರೇತಾಯುಗದಲ್ಲಿ ಋಷ್ಯಶೃಂಗ ಎಂಬ ಮುನಿಯೊಬ್ಬರು ಇಲ್ಲಿ ತಪಸ್ಸು ಮಾಡುತ್ತಿದ್ದರು ಎಂಬ ಉಲ್ಲೇಖವಿದೆ. ಅವರು ಕಾಲಿಟ್ಟಲ್ಲಿ ಬರ ನಿವಾರಣೆಯಾಗಿ ಮಳೆ ಆಗಮಿಸುತ್ತಿತ್ತು. ಅವರ ಮಹಾತ್ಮೆಯಿಂದಲೇ ಇಂದಿಗೂ ಇಲ್ಲಿ ಸದಾ ಭರ್ಜರಿ ಮಳೆಯಾಗಿ ಹಚ್ಚಹಸಿರು ಕಂಗೊಳಿಸುತ್ತಿರುತ್ತದೆ. ಇಲ್ಲಿ ಆದಿ ಶಂಕರರು ಗಂಧದ ಮೂರ್ತಿಯನ್ನು ಸ್ಥಾಪಿಸಿದ್ದರು. ಅದನ್ನು 14ನೇ ಶತಮಾನದಲ್ಲಿ ವಿದ್ಯಾರಣ್ಯರು ಚಿನ್ನದಿಂದ ಮಾಡಲ್ಪಟ್ಟ ಶಾರದಾ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಕಾಲಕಾಲಕ್ಕೆ ಈ ದೇವಸ್ಥಾನವನ್ನು ಪುನರ್ನವೀಕರಣಗೊಳಿಸಲಾಗಿದೆ.

click me!