ಕೆಇಬಿ ಕಚೇರಿಯಲ್ಲಿದ್ದ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ
ಕಚೇರಿಯ ಒಳಗಿದ್ದ ಅಂಬೇಡ್ಕರ್ ಫೋಟೋಗೆ ಚಪ್ಪಲಿಯಿಂದ ಹೊಡೆದಿರುವ ಕಿಡಿಗೇಡಿಗಳು
ಅಂಬೇಡ್ಕರ್ ಭಾವಚಿತ್ರದಲ್ಲಿ ಚಪ್ಪಲಿ ಮಾರ್ಕ್
ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಡಿ.24): ಮೆಸ್ಕಾಂ ಕಚೇರಿ ಒಳಗಡೆ ಇದ್ದ ಅಂಬೇಡ್ಕರ್ ಭಾವಚಿತ್ರಕ್ಕೆ ಕಿಡಿಗೇಡಿಗಳು ಚಪ್ಪಲಿಯಿಂದ ಹೊಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಪಟ್ಟಣದ ಮೆಸ್ಕಾಂ ಕಚೇರಿಯಲ್ಲಿ ನಡೆದಿದೆ. ಸರ್ಕಾರಿ ಕಚೇರಿಯಲ್ಲಿ ರಾಷ್ಟ್ರೀಯ ನಾಯಕರ ಭಾವಚಿತ್ರವನ್ನ ಹಾಕಲಾಗಿದೆ. ಅದರಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ್ದಾರೆ.ಅಂಬೇಡ್ಕರ್ ಭಾವಚಿತ್ರದಲ್ಲಿಚಪ್ಪಲಿ ಗುರುತು ಇದ್ದು ದಲಿತ ಸಂಘಟನೆಗಳು ಆಕ್ರೋಶ ಹೊರಹಾಕಿದ್ದಾರೆ.
undefined
ಫೋಟೋವನ್ನ ಸ್ವಚ್ಛಗೊಳಿಸಿ ಹೂವಿನ ಹಾರ: ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ದಲಿತ ಸಂಘಟನೆಗಳು ಅಂಬೇಡ್ಕರ್ (Dr Babasaheb Ambedkar) ಫೋಟೋವನ್ನ ಸ್ವಚ್ಛಗೊಳಿಸಿ ಹೂವಿನ ಹಾರ ಹಾಕಿದ್ದಾರೆ. ಕಚೇರಿ ಒಳಗೇ ಇದ್ದ ಅಂಬೇಡ್ಕರ್ ಫೋಟೋಗೆ ಅಪಮಾನವಾದರೂ ಅಧಿಕಾರಿಗಳು ದೂರು ನೀಡಲು ಮೀನಾಮೇಷ ಎಣಿಸಿದ್ದರು. ದಲಿತ ಸಂಘಟನೆಗಳು ಸ್ಥಳಕ್ಕೆ ಭೇಟಿ ನೀಡಿ ಆಕ್ರೋಶ ಹೊರಹಾಕಿದ ಬಳಿಕ ಶೃಂಗೇರಿ ಠಾಣೆಯಲ್ಲಿ (Sringeri Police Station) ದೂರು ದಾಖಲಿಸಿರೋ ದಲಿತ ಸಂಘಟನೆಗಳು (Dalith Associations) ಕೂಡಲೇ ಆರೋಪಿಗಳನ್ನ ಬಂಧಿಸುವಂತೆ ಆಗ್ರಹಿಸಿದ್ದಾರೆ. ಆದರೆ, ಕಚೇರಿ ಒಳಗೇ ಇರುವ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ್ದು ಯಾರು ಎಂಬ ಯಕ್ಷ ಪ್ರಶ್ನೆ ಮೂಡಿದೆ. ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಂಬೇಡ್ಕರ್ ಅವಹೇಳನ: ಬೆಳಗಾವಿಗೆ ಬರಬೇಕಿದ್ದ ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ್ ಮುಖಕ್ಕೆ ಮಸಿ
ಕಿಡಿಗೇಡಿಗಳ ಬಂಧನಕ್ಕೆ ಎರಡು ದಿನ ಗಡುವು: ಪೊಲೀಸ್ ಇಲಾಖೆಗೆ ಕಿಡಿಗೇಡಿಗಳ ಬಂಧನಕ್ಕೆ ಸೋಮವಾರದವರೆಗೂ ಗಡುವನ್ನು ನೀಡಿದ್ದು ಆರೋಪಿಯನ್ನು ಬಂಧಿಸದಿದ್ದಲ್ಲಿ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ಸೇರಿದಂತೆ ದಲಿತ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ. ಒಂದು ವೇಳೆ ಪೊಲೀಸರು ಕಿಡಿಗೇಡಿಗಳನ್ನು ಬಂಧಿಸದೇ ಹೋದಲ್ಲಿ ಪೊಲೀಸ್ ಠಾಣೆ ಮತ್ತು ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಹಲವು ಸಂಘಟನೆಗಳು ಒಗ್ಗಟ್ಟಾಗಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಹೇಡಿಗಳು ಮಾಡಿರುವ ನೀಚ ಕೆಲಸ: ಈ ಬಗ್ಗೆ ಮಾತಾಡಿದ ಬಿಎಸ್‌ಪಿ ತಾಲೂಕು ಘಟಕದ ಅಧ್ಯಕ್ಷೆ ಶಿಲ್ಪಾ ಅವರು ತಕ್ಷಣವೇ ಪೊಲೀಸ್ ಇಲಾಖೆ ಕಿಡಿಗೇಡಿಗಳನ್ನು ಬಂಧಿಸಬೇಕು. ತಿಂಗಳ ಹಿಂದೆ ನಮ್ಮ ಪಕ್ಷದ ಬಾವುಟ ತೆಗೆದು ಚರಂಡಿಗೆ ಎಸೆದು ಅವಮಾನ ಮಾಡಿದ ಘಟನೆ ನಡೆದಿತ್ತು. ಅದಕ್ಕೂ ನ್ಯಾಯ ದೊರಕಿರಲಿಲ್ಲ. ಈಗ ಪೂಜನೀಯ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಅವಮಾನ ಮಾಡಲಾಗಿದೆ. ಇದು ಹೇಡಿಗಳು ಮಾಡಿರುವ ನೀಚ ಕೆಲಸವಾಗಿದೆ. ಪೊಲೀಸ್ ಇಲಾಖೆ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ನ್ಯಾಯ ಒದಗಿಸಬೇಕು ಇಲ್ಲವಾದಲ್ಲಿ ತೀವ್ರ ಸ್ವರೂಪದ ಹೋರಾಟ ಮಾಡಲಾಗುವುದು ಎಂದು ಆಗ್ರಹಿಸಿದ್ದಾರೆ.
ನ್ಯಾಯಾಲಯದಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಸುವಂತೆ ಧರಣಿ
ಅವಹೇಳನ ಹೇಳಿಕೆ ನೀಡಿದ್ದ ಸಚಿವರಿಗೆ ಮಸಿ: ಮಹಾತ್ಮಾ ಜ್ಯೋತಿಬಾ ಫುಲೆ (Mahatma Jyotiba Phule), ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಕರ್ಮವೀರ ಭಾವುರಾವ್ ಪಾಟೀಲ್ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎನ್ನಲಾದ ಮಹಾರಾಷ್ಟ್ರದ ಬೆಳಗಾವಿ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ್ (Chandrakant Patil) ಅವರ ಮೇಲೆ ಮಸಿ ದಾಳಿ ನಡೆದ ಘಟನೆ ಪುಣೆ (Pune) ಸಮೀಪದ ಪಿಂಪ್ರಿ ಚಿಂಚವಾಡದಲ್ಲಿ (Pimpri Chinchwad) ನಡೆದಿತ್ತು. ಈ ಹೇಳಿಕೆ ಖಂಡಿಸಿದ ಒಬ್ಬ ವ್ಯಕ್ತಿ ಇಲ್ಲಿ ಸಮಾರಂಭವೊಂದಕ್ಕೆ ಬಂದಿದ್ದ ಪಾಟೀಲರ ಮುಖಕ್ಕೆ ಮಸಿ ಎರಚಿದ. ಕೂಡಲೇ ಆತನನ್ನು ಬಂಧಿಸಲಾಯಿತು.