ಪ್ರಶಂಸೆ ಪಡೆಯಲು ನಾನೇ ಕೆಲಸ ಮಾಡಿದ್ದೇನೆಂದು ಹೋದರೆ ಜನರಿಗೆ ಗೊತ್ತಾಗುತ್ತದೆ: ಕವಟಗಿಮಠ
ಚಿಕ್ಕೋಡಿ(ಡಿ.24): ಮಹಾಲಕ್ಷ್ಮೀ ಯೋಜನೆ ಜಾರಿಗೆ, ನೀರು ಹಂಚಿಕೆಯಿಂದ ಹಿಡಿದು ಆಡಳಿತಾತ್ಮಕ ಮಂಜೂರಾತಿ ಸೇರಿದಂತೆ ಈ ಯೋಜನೆ ಜಾರಿಗೆ ತಂದಿರುವುದು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದಲೇ. ಶೀಘ್ರದಲ್ಲಿಯೇ ಅಡಿಗಲ್ಲು ನೆರವೇರಿಸಲಾಗುವುದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಎಂ.ಕವಟಗಿಮಠ ಹೇಳಿದರು.
ಶ್ರೀ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಗೆ ಮಂಜೂರಾತಿ ದೊರೆತ ಹಿನ್ನೆಲೆಯಲ್ಲಿ ಶುಕ್ರವಾರ ಚಿಕ್ಕೋಡಿ ತಾಲೂಕಿನ ಪಟ್ಟಣಕುಡಿ ಮಹಾಲಕ್ಷ್ಮೇ ದೇವಿಗೆ ಉಡಿ ತುಂಬಿ ದೇವಿಯ ಆಶೀರ್ವಾದ ಪಡೆದ ಬಳಿಕ ಬಳಿಕ ಆ ಭಾಗದ ರೈತರು ಆಯೋಜಿಸಿದ್ದ ಸನ್ಮಾನ, ಸ್ವೀಕರಿಸಿ ಮಾತನಾಡಿದ ಅವರು, ಯಾವುದೇ ಒಂದು ಯೋಜನೆ ಜಾರಿಯಾಗಬೇಕಾದರೆ ಅದರ ಹಿಂದಿನ ರೂವಾರಿ, ಅದಕ್ಕೆ ಕಾಲಕಾಲಕ್ಕೆ ಸರ್ಕಾರಕ್ಕೆ ಮಾಹಿತಿ ನೀಡಿದವರಾರಯರು ಎಂದು ತಿಳಿದುಕೊಂಡು ಆತ್ಮಸಾಕ್ಷಿಯಾಗಿ ಕೆಲಸ ಮಾಡಬೇಕೇ ವಿನಃ ಕೇವಲ ರಾಜಕಾರಣಕ್ಕಾಗಿ ಜನರಿಂದ ಪ್ರಶಂಸೆ ಪಡೆಯಲು ನಾನೇ ಈ ಕೆಲಸ ಮಾಡಿದ್ದೇನೆ ಎಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿ ಜನರ ಮನವೊಲಿಸಲು ಹೋದರೇ ಅದರು ಜನರಿಗೆ ಗೊತ್ತಾಗುತ್ತದೆ. ಅದಕ್ಕೆ ಕಾಲವೇ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು. ಸಣ್ಣ, ಬಡ, ಸಾಮಾನ್ಯ ಹಾಗೂ ಸಣ್ಣ ಹಿಡುವಳಿ ರೈತರ ಕೃಷಿಗೆ 4 ಗ್ರಾಮಗಳಿಗೆ ಸೀಮಿತವಾಗಿದ್ದ ಯೋಜನೆಯನ್ನು 25 ಗ್ರಾಮಗಳಿಗೆ ನೀರು ಒದಗಿಸುವ ಮಟ್ಟಿಗೆ ನಮ್ಮ ಹೋರಾಟ ಯಶಸ್ವಿಯಾಗಿದೆ ಎಂದರು.
ಬೆಳಗಾವಿ: ಚರ್ಮಗಂಟಿನ ರೋಗಕ್ಕೆ 176 ಜಾನುವಾರು ಬಲಿ
ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಮಂಜೂರು ಮಾಡುವುದಾಗಿ ಕಾಂಗ್ರೆಸ್ ಪಕ್ಷದ ಈ ಭಾಗದ ಶಾಸಕರನ್ನು ಆರಿಸಿಕೊಡಿ ಎಂದು ಉಪಚುನಾವಣೆಯಲ್ಲಿ ನೀರಾವರಿ ಸಚಿವ ಎಂ.ಬಿ.ಪಾಟೀಲ ಅವರು ಈ ಕಡೆಗೆ ತಿರುಗಿ ಸಹ ನೋಡಲಿಲ್ಲದೇ ಇರುವುದು ವಿಪರ್ಯಾಸ. ಅವರಿಗೆ ಒಂದೆರಡು ಸಲ ಕೇಳಿಕೊಂಡರು ಅವರು ಅದಕ್ಕೆ ಕಿವಿಗೊಡಲಿಲ್ಲ ಎಂದು ದೂರಿದರು.
ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಯಡಿಯಲ್ಲಿ ಶಿರಗಾಂವ, ಶಿರಗಾಂವವಾಡಿ ಗಿರಗಾಂವ 1000 ಎಕರೆ ಬಿಟ್ಟು ಹೋಗಿತ್ತು, ಅದನ್ನು ಸಹ ಸೇರ್ಪಡೆಗೊಳಿಸಲಾಗಿದೆ. ಚಿಕ್ಕೋಡಿ ತಾಲೂಕಿನ ರಾಮಪುರ, ವಾಳಕಿ, ಪಟ್ಟಣಕುಡಿ, ಪೀರವಾಡಿ, ಯಾದ್ಯಾನವಾಡಿ, ನಾಗ್ಯಾನವಾಡಿ, ನಾಯಿಂಗ್ಲಜ, ಧುಳಗುನವಾಡಿ, ನವಲಿಹಾಳ, ಕುಠಾಳಿ, ಕೋಥಳಿ, ಕೋಥಳಿವಾಡಿ, ಕುಪ್ಪನವಾಡಿ, ಹಂದ್ಯಾನವಾಡಿ, ಚಿಂಚಣಿ ಮತ್ತು ಗಿರಗಾಂವ ಗ್ರಾಮಗಳು ಮತ್ತು ನಿಪ್ಪಾಣಿ ತಾಲೂಕಿನ ಗವಾನಿ, ಅಮಲಝರಿ ಹಾಗೂ ಶಿರಗಾಂವ, ಶಿರಗಾಂವವಾಡಿ, ಖಡಕಲಾಟ, ಚಿಖಲವಾಳ, ರಾಮಪುರ, ತಪಕಾರವಾಡಿ ಗ್ರಾಮಗಳ ಚಿಕ್ಕೋಡಿ ಉಪ ಕಾಲುವೆ ವ್ಯಾಪ್ತಿಗೆ ಒಳಪಡದೆ ಇರುವ ಜಮೀನುಗಳು ಸೇರಿ ಸುಮಾರು 7800 ಹೆಕ್ಟೇರ್ ಮೇಲ್ಪಟ್ಟು ಒಣ ಬಂಜರು ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಶ್ರೀ ಮಹಾಲಕ್ಷ್ಮೇ ಏತ ನೀರಾವರಿ ಯೋಜನೆಯ .382.30 ಪೈಕಿ ಸದರಿ ಯೋಜನೆಯ ಮೊದಲನೇ ಹಂತದಲ್ಲಿ .203.00 ಕೋಟಿಗಳ ಅನುದಾನ ಬಿಡುಗಡೆಯಾಗಿದೆ ಎಂದರು.
ಟಿಎಪಿಸಿಎಂಎಸ್ ಉಪಾಧ್ಯಕ್ಷ ಕಿರಣ ಪಾಟೀಲ, ಚಿಕ್ಕೂಡಿ ಸದಲಗಾ ಮತಕ್ಷೇತ್ರದ ಬಿಜೆಪಿ ಮಂಡಳ ಅಧ್ಯಕ್ಷ ಸಂಜಯ ಪಾಟೀಲ, ಕಾರ್ಯಕರ್ತರಾದ ಸಂಜಯ ಶ್ರೀಂತ್ರೆ, ಅಪ್ಪಾಸಾಬ ಚೌಗಲಾ, ಸೋಮು ಸರವಡೆ, ಬಾಪು ಪಾಟೀಲ, ವಿಜಯ ದಾಯಿಂಗಡೆ, ಮಹಾಂತೇಶ ಚೌಗಲಾ, ಯಲ್ಲಪ್ಪಾ ಅ. ನಾಯಿಕ, ಬಸವರಾಜ ಮಠಪತಿ, ವಿರುಪಾಕ್ಷಿ ಸಂಕಾಜೆ, ರಾಮಗೌಡ ಪಾಟೀಲ, ಅಣ್ಞಾಸಾಬ ಮಗದುಮ್ಮ, ದನಂಜಯ ಪಾಟೀಲ, ವೃಷಭ ಕಣಗಲೆ, ರಾಜು ಮಸ್ತೆ ಸುತ್ತಮುತ್ತಲಿನ ಗ್ರಾಮದ ರೈತರಯ ಹಾಜರಿದ್ದರು.
ಚಿಕ್ಕೋಡಿ: ಗಡಿಭಾಗದ ಸಮಸ್ಯೆ ಅರಿತು ಕೆಲಸ ಮಾಡಿ, ಡಾ.ಪ್ರಭಾಕರ ಕೋರೆ
ಕಳೆದ 12 ವರ್ಷದ ಹಿಂದೆ ಚಿಂಚಣಿಯಿಂದ ಗವಾನದವರೆಗಿನ ಅತೀ ಸಣ್ಣ ಹಿಡುವಳಿದಾರರು, ಬಡ ಸಾಮಾನ್ಯ ರೈತರ ಕೃಷಿಗೆ ಏತ ನೀರಾವರಿ ಯೋಜನೆ ಜಾರಿಗೆ ತಂದು ಅವರ ಬಾಳಿನ ಕಣ್ಣಿರು ಒರೆಸಬೇಕೆಂಬ ಮಹದಾಸೆಯಿಂದ ಪಟ್ಟಣಕುಡಿ ಗ್ರಾಮದ ಮಹಾಲಕ್ಷ್ಮೀ ದೇವಿಯ ಆರ್ಶೀವಾದ ಪಡೆದು ನಿರಂತರ ಹೋರಾಟ ಮಾಡಿದ ಪ್ರತಿಫಲವಾಗಿ ಗುರುವಾರ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಆಡಳಿತಾತ್ಮಕ ಮಂಜೂರಾತಿ ನೀಡಿ ಹಸಿರು ನಿಶಾನೆ ತೋರಿಸಿದ್ದಾರೆ ಅಂತ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ತಿಳಿಸಿದ್ದಾರೆ.
ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಮಂಜೂರಾತಿಗೆ ಸಂಪೂರ್ಣ ಶ್ರೇಯ ವಿಧಾನ ಪರಿಷತ್ ಸರ್ಕಾರದ ಮಾಜಿ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಅವರಿಗೆ ಸಲ್ಲುತ್ತದೆ. ಅವರ ಬಹಳ ದಿನಗಳ ಕನಸು ರೈತರ ಕಣ್ಣಿರು ಒರೆಸಲು ನಾನು ಕಟ್ಟಿಬದ್ಧನಾಗಿದ್ದೇನೆ ಎಂದು ನಿರಂತರವಾಗಿ ಹೋರಾಟ ಮಾಡಿ ಈ ಯೋಜನೆ ಜಾರಿಗೆ ತಂದಿದ್ದಾರೆ. ಯೋಜನೆ ಜಾರಿಗೆ ತಂದಿರುವ ವ್ಯಕ್ತಿಯ ಬಗ್ಗೆ ಪೂರ್ವಾಪರ ತಿಳಿಯದೇ ರಾಜಕಾರಣ ಮಾಡುವುದನ್ನು ಬಿಟ್ಟು ನಾವು ಮಾಡಿದ್ದೇವೆ ಎಂಬ ಶ್ರೇಯ ಪಡೆಯಬಾರದು. ಇದರಿಂದ ಮಹಾಲಕ್ಷ್ಮೀ ನಿಮಗೆ ಮೆಚ್ಚುವುದಿಲ್ಲ ಅಂತ ಟಿಎಪಿಸಿಎಂಎಸ್ ಉಪಾಧ್ಯಕ್ಷ ಕಿರಣ ಪಾಟೀಲ ತಿಳಿಸಿದ್ದಾರೆ.