ಹಾವೇರಿ: ಹಬ್ಬದ ಸಂಭ್ರಮದಲ್ಲಿ ಜವರಾಯನ ಅಟ್ಟಹಾಸ, ಶೌಚಾಲಯದ ಗುಂಡಿಯಲ್ಲಿ ಬಿದ್ದು ಬಾಲಕ ಸಾವು

By Girish Goudar  |  First Published Aug 2, 2022, 9:42 PM IST

ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಕ್ಕಮರಳಿಹಳ್ಳಿ ಗ್ರಾಮದಲ್ಲಿ ನಡೆದ ಘಟನೆ 


ಹಾವೇರಿ(ಆ.02):  ಆಟವಾಡಲು ತೆರಳಿದ್ದ 3 ವರ್ಷದ ಬಾಲಕ ನಿರ್ಮಾಣ ಹಂತದಲ್ಲಿರುವ ನೀರು ತುಂಬಿದ ಶೌಚಾಲಯದ ಗುಂಡಿಯಲ್ಲಿ ಆಕಸ್ಮಿಕವಾಗಿ ಬಿದ್ದು ಸಾವನಪ್ಪಿದ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಕ್ಕಮರಳಿಹಳ್ಳಿ ಗ್ರಾಮದಲ್ಲಿ ಇಂದು(ಮಂಗಳವಾರ) ನಡೆದಿದೆ. ಸುದರ್ಶನ್ ನೀಲಪ್ಪ ಓಲೇಕಾರ ಎನ್ನುವ ಬಾಲಕ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.

ಮೃತ ಬಾಲಕ ತಂದೆಯೊಂದಿಗೆ ಹೋಗಿದ್ದಾನೆಂದು ತಿಳಿದು ತಾಯಿ ಪಂಚಮಿ ಹಬ್ಬದ ತಯಾರಿಯಲ್ಲಿ ಮುಳುಗಿದ್ದಳು. ಬಳಿಕ ಬಾಲಕನ ತಂದೆ ನೀಲಪ್ಪ ಮನೆಗೆ ಆಗಮಿಸಿದ ವೇಳೆ ಬಾಲಕನ ತಾಯಿ ವಿಚಾರಿಸಿದಾಗ,  ಸುದರ್ಶನ್ ತನ್ನೊಂದಿಗೆ ಬಂದಿಲ್ಲ ಮನೆ ಹೊರಗೆ ಆಟವಾಡುತ್ತಿದ್ದ ಎಂದು  ಪತ್ನಿಗೆ ತಿಳಿಸಿದ ವೇಳೆ ಆತಂಕಕ್ಕೆ ಒಳಗಾದ ಸುದರ್ಶನ್ ತಂದೆ-ತಾಯಿ ಶೋಧ ನಡೆಸಿದ್ದಾರೆ. 

Tap to resize

Latest Videos

undefined

ಸ್ವಂತ ಚಿಕ್ಕಮ್ಮನ ಮಗನ ಜೀವ ತೆಗೆದು ಅಮಾಯಕನಂತಿದ್ದ ಐನಾತಿ ಡಾಕ್ಟರ್ ಅಂದರ್

ಕೆಲ ಸಮಯದ ನಂತರ ಗುಂಡಿಯಲ್ಲಿ ಬಿದ್ದಿದ್ದ ಬಾಲಕನ ದೇಹ ಪತ್ತೆಯಾಗಿದೆ. ಬಾಲಕನನ್ನು ಹೊಸರಿತ್ತಿಯ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ದ ವೇಳೆ ಬಾಲಕ ಮೃತಪಟ್ಟಿದ್ದಾನೆಂದು ತಿಳಿಸಿದ್ದಾರೆ. ಸವಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
 

click me!