ಬಳ್ಳಾರಿ ಹಾಗೂ ವಿಜಯನಗರ ಅವಳಿ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು, ಜನಜೀವನ ಅಸ್ಥವ್ಯಸ್ಥವಾಗಿದೆ. ಅಲ್ಲದೇ ಓರ್ವ ರೈತ ಬಲಿಯಾಗಿದ್ದಾನೆ.
ವರದಿ : ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ, (ಆಗಸ್ಟ್.02): ಕಳೆದೆರಡು ದಿನಗಳಿಂದ ರಾತ್ರಿಯ ವೇಳೆ ಸುರಿದ ಧಾರಕಾರ ಮಳೆ ಪರಿಣಾಮ ಬಳ್ಳಾರಿ ಮತ್ತು ವಿಜಯನಗರ ಎರಡು ಜಿಲ್ಲೆಯ ರೈತರು ಸೇರಿದಂತೆ ಜನಸಾಮಾನ್ಯರು ಕೂಡ ಹೈರಾಣಾಗಿ ಹೋಗಿದ್ದಾರೆ. ಅವಳಿ ಜಿಲ್ಲೆಯಲ್ಲಿ ಸುರಿದ ಧಾರಕಾರ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ರೈತ ಸಾವನ್ನಪ್ಪಿದ್ದಾನೆ.
ಹೌದು.. ಬಳ್ಳಾರಿ ನಗರದಲ್ಲಿನ ಸತ್ಯನಾರಾಯಣ ಪೇಟೆ ಅಂಡರ್ ಪಾಸ್ ನಲ್ಲಿ ನೀರು ತುಂಬಿರೋದು ಒಂದು ಕಡೆಯಾದ್ರೇ, ಹಳ್ಳಕೊಳ್ಳ ಗಳು ತುಂಬಿ ಹರಿದ ಪರಿಣಾಮ ರಸ್ತೆ ದಾಟಲು ಕೂಡ ಪರದಾಡಿದ್ದಾರೆ. ಇನ್ನೂ ಹಗರಿ ನದಿ ತೀರದಲ್ಲಿನ ಹೊಲದಲ್ಲಿ ಹೂವನ್ನು ಬಿಡಿಸಲು ಹೋದ 30ಕ್ಕೂ ಹೆಚ್ಚು ರೈತರು ಸಿಲುಕಿದ್ದು, ಅವರನ್ನು ಕೂಡ ರಕ್ಷಣೆ ಮಾಡಲಾಗಿದೆ. ಅಲ್ಲಲ್ಲಿ ಮನೆಯೊಳಗೆ ನುಗ್ಗಿದ ಪರಿಣಾಮ ರಾತ್ರೀಯೀಡಿ ಜನರು ಜಾಗರಣೆ ಮಾಡಿದ್ದು, ಒಟ್ಟಾರೇ ಎರಡು ದಿನದ ಮಳೆ ಅವಳಿ ಜಿಲ್ಲೆಯ ಜನರ ನಿದ್ದೆಗೇಡಿಸಿದ್ದಂತೂ ಸುಳ್ಳಲ್ಲ.
undefined
Karnataka Rain; ರಾಜ್ಯದಲ್ಲಿ ಇನ್ನೂ 5 ದಿನ ಮುಂದುವರೆಯಲಿದೆ ಮಳೆ!
ತುಂಬಿ ತುಳುಕಿದ ಸತ್ಯನಾರಾಯಣ ಪೇಟೆ ಅಂಡರ್ ಪಾಸ್
ಪ್ರತಿ ಬಾರಿ ಮಳೆ ಬಂದಾಗಲೇಲ್ಲ ತುಂಬಿ ತುಳುಕುವ ಬಳ್ಳಾರಿ ನಗರದ ಹೃದಯಭಾಗದಲ್ಲಿರ ಸತ್ಯನಾರಾನ ಪೇಟೆ ಅಂಡರ್ ಪಾಸ್ ನಲ್ಲಿ ರಾತ್ರೋರಾತ್ರಿ ಸುರಿದ ಮಳೆಗೆ ಬಹುತೇಕ ತುಂಬಿ ತುಳುಕಿತ್ತು. ಇದರಲ್ಲಿಯೇ ಜನರು ಪ್ರಯಾಣ ಮಾಡೋ ಮೂಲಕ ಹರಸಾಹಸ ಪಟ್ಟು ಕೆಲವರು ಹೊರಗೆ ಬಂದ್ರೇ, ಇನ್ನೂ ಕೆಲವರು ವಾಹನ ನೀರಿನಲ್ಲಿ ಕೈಕೊಟ್ಟ ಪರಿಣಾಮ ಪರದಾಡಿದ್ರು. ನೀರು ಬಂದಾಗಲೇಲ್ಲ ಬ್ಯಾರಿಕೇಡ್ ಹಾಕೋ ಮೂಲಕ ರಸ್ತೆ ತಡೆ ಮಾಡುತ್ತಿದ್ದ ಪಾಲಿಕೆ ಈ ಬಾರಿ ಬ್ಯಾರಿಕೇಟ್ ಹಾಕಿರಲಿಲ್ಲ. ಅಲ್ಲದೇ ನೀರನ್ನು ಹೊರಹಾಕೋ ಕಾರ್ಯ ವಿಳಂಬ ಮಾಡಿದ ಹಿನ್ನಲೆ ಜನರು ಪಾಲಿಕೆ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ರು. ಇನ್ನೂ ರಾತ್ರಿಯೀಡಿ ಮಳೆ ಸುರಿದ ಹಿನ್ನೆಲೆ ವಿಜಯನಗರ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಆದೇಶ ನೀಡಿದ್ರು.
ತುಂಬಿದ ಹಳ್ಳ-ಕೊಳ್ಳಗಳು, ಪರದಾಡಿದ ಜನರು
ಬಳ್ಳಾರಿ ಜಿಲ್ಲೆಯಲ್ಲಿ ತಡರಾತ್ರಿ ಭಾರಿ ಮಳೆ ಹಿನ್ನಲೆ ಗ್ರಾಮಾಂತರ ಭಾಗಗಳಲ್ಲಿ ಹಳ್ಳಕೊಳ್ಳಗಳು ಉಕ್ಕಿಹರಿದಿವೆ. ಬಳ್ಳಾರಿ ತಾಲೂಕಿನ ಕೊಳಗಲ್ ಗ್ರಾಮದ ಹಳ್ಳದಲ್ಲಿ ಉಕ್ಕಿ ಹರಿಯುತ್ತಿದ್ರು, ಜನರು ಮಾತ್ರ ದುಸ್ಸಾಹಸ ಮಾಡಿ ಹಳ್ಳ ದಾಟುವ ಕೆಲಸವನ್ನು ಮಾಡುತ್ತಿದ್ರು. ಹಳ್ಳ ತುಂಬಿ ಹರಿದ ಕಾರಣ ಬಳ್ಳಾರಿ, ಕುರಗೋಡು, ಯರಂಗಳ್ಳಿ . ಬಾದನಹಟ್ಟಿ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಆದ್ರೇ, ಉಕ್ಕಿ ಹರಿಯುತ್ತಿರುವ ಹಳ್ಳದ ಪ್ರವಾಹ ಲೆಕ್ಕಸಿದೇ ಬೈಕ್, ಆಟೋ, ಟಂಟಂ, ಟ್ಯಾಕ್ಟರ್. ಕಾರುಗಳ ಮೂಲಕ ಹಳ್ಳ ದಾಟುತ್ತಿದ್ರು.
ಹಳ್ಳದಲ್ಲಿ ಕೊಚ್ಚಿ ಹೋದ ರೈತ ..
ಇನ್ನೂ ಹೊಸಪೇಟೆ ತಾಲೂಕಿನ ಗರಗ- ನಾಗಲಾಪುರದಲ್ಲಿ ರೈತನೊರ್ವ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ರೈತ ಉಂಚೋಟಿ ಬೊಮ್ಮಪ್ಪ( 55) ಎನ್ನುವವರು ಮಳೆ ಹೆಚ್ಚಾದ ಕಾರಣ, ಮಳೆಯಿಂದಾಗಿ ತಮ್ಮ ಹೊಲದಲ್ಲಿ ಹಾನಿಯಾಗಿದೆಯೇ ಎಂದು ನೋಡಲು ಹೋಗಿದ್ದರು. ತುಂಬಿ ಹರಿಯುತ್ತಿರೋ ಹಳ್ಳದಲ್ಲಿ ಈಜಿಕೊಂಡು ಹೋಗುವಾಗ ಸ್ಥಳೀಯರು ಬೇಡ, ಬೇಡ ಅಂದ್ರೂ ಹೋಗಿದ್ದಾರೆಂದು ಹೇಳಲಾಗುತ್ತಿದೆ. ಹಳ್ಳಕ್ಕೆ ಇಳಿದ ರೈತ ಒಂದಷ್ಟು ನೀರಿನಲ್ಲಿ ಮುಂದೆ ಹೋಗಿದ್ದಾರೆ. ಆದ್ರೇ, ನೀರಿನ ರಭಸಕ್ಕೆ ಈಜಲಾಗದೇ ಕೊಚ್ಚಿಹೋಗಿದ್ದಾರೆ.. ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಹೊಸಪೇಟೆಯ ತಹಶಿಲ್ದಾರ್ ವಿಶ್ವಜೀತ್ ಮೆಹತಾ ಪರಿಶೀಲನೆ ನಡೆಸಿದ್ರು. ಎರಡು ಗಂಟೆಗಳ ಕಾಲ ಹಳ್ಳದಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಇನ್ನೂ ಶವ ಪತ್ತೆಯಾದ ಬಳಿಕ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಮುಂದೆ ಶವವಿಟ್ಟು ಪ್ರತಿಭಟನೆ ಮಾಡಿದ್ದಾರೆ. ಇಲ್ಲೊಂದು ಸೇತುವೆ ಇದ್ರೇ, ಹೀಗಾಗುತ್ತಿರಲಿಲ್ಲ. ಹೀಗಾಗಿ ಈ ಸಾವಿಗೆ ನ್ಯಾಯ ಕೊಡಬೇಕೆಂದು ಗ್ರಾಮಸ್ಥರು ಪ್ರತಿಭಟನೆ ಮಾಡಿದ್ರು.
ನದಿಯಲ್ಲಿ ಸಿಲುಕಿಕೊಂಡ ರೈತರ ರಕ್ಷಣೆ
ಇನ್ನೂ ವೇದವತಿ ನದಿಯ ಹಗರಿ ತೀರದಲ್ಲಿ ನಿತ್ಯದಂತೆ ರೈತರು ಹೂವನ್ನು ಬಿಡಿಸುವ ಕಾಯಕಕ್ಕೆ ತೆರಳಿದ್ದಾರೆ. ಆದ್ರೇ, ದಿಡೀರನೇ ಹಗರಿ ನದಿಯು ನೀರು ಉಕ್ಕಿ ಹರಿದ ಪರಿಣಾಮ ನಡುಗಡ್ಡೆಯಲ್ಲಿ 25 ಕೃಷಿ ಕಾರ್ಮಿಕರು ಸಿಲುಕಿಕೊಂಡು ಪರದಾಡಿದ್ರು. ಬಳ್ಳಾರಿ ತಾಲೂಕಿನ ಯಾಲ್ಪಿ, ಕಗ್ಗಲು ರೈತರು ಮಲ್ಲಿಗೆ ಹೂವು ಹರಿಯಲು ಜಮೀನಿಗೆ ತೆರಳಿದ್ದಾಗ ಈ ಘಟನೆ ನಡೆಯಿತು. 2 ಗಂಟೆಗೂ ಹೆಚ್ಚು ಕಾಲ ನಡುಗಡ್ಡೆಯಲ್ಲಿ ಸಿಲುಕಿಕೊಂಡು ಪರದಾಡುತ್ತಿರುವ 25 ರೈತರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್ ಮೂಲಕ ದಡಕ್ಕೆ ಕರೆದುಕೊಂಡು ಬಂದ್ರು.
ಹಳ್ಳದ ಕೆಳ ಸೇತುವೆಯಲ್ಲಿ ಸಿಲುಕಿಕೊಂಡ ಲಾರಿ
ಆಂಧ್ರ ಮತ್ತು ರಾಜ್ಯದ ಗಡಿಯಲ್ಲಿಯೂ ಭಾರಿ ಮಳೆಯಾದ ಹಿನ್ನೆಲೆ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ನಿರ್ಮಾಣ ಹಂತದ ಸೇತುವೆ ಕೆಳಗೆ ಲಾರಿಯೊಂದು ಸಿಲುಕಿಕೊಂಡಿರೋ ಘಟನೆಯೂ ನಡೆದಿದೆ. ಅನಂತಪುರ ಜಿಲ್ಲೆಯ ಡೊನೆಕಲ್ ಗ್ರಾಮದ ಬಳಿ ತಡರಾತ್ರಿ ಲಾರಿಯೊಂದು ತೆರಳುವಾಗ ಏಕಾಎಕಿ ನೀರಿನ ರಭಸ ಹೆಚ್ಚಾಗಿ ಲಾರಿಯೊಂದು ಸಿಲುಕಿಕೊಂಡಿದೆ. ತನ್ನ ಪ್ರಾಣ ಉಳಿಸಿಕೊಳ್ಳಲು ಚಾಲಕ ಲಾರಿಯನ್ನು ನೀರಿನಲ್ಲಿ ಬಿಟ್ಟು ಹೊರಗೆ ಬಂದಿದ್ದಾರೆ. ಕೆಳ ಮಟ್ಟದ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಬಳ್ಳಾರಿ ತಾಲೂಕಿನಿಂದ ಗಡಿ ಭಾಗದ ಹಳ್ಳಿಗಳಿಗೂ ಮತ್ತು ಆಂಧ್ರದ ಗುಂತಕಲ್ ಹೋಗುವ ಮಾರ್ಗ ಸಂಪೂರ್ಣ ಜಲಾವೃತಗಿದ್ದು, ಸಂಚಾರ ಅಸ್ತವ್ಯವಸ್ತವಾಗಿತ್ತು.