ಹೆತ್ತ ತಂದೆ, ತಾಯಿ, ಅಕ್ಕನನ್ನ ಬರ್ಬರವಾಗಿ ಹತ್ಯೆಗೈದ ಕಿರಾತಕ

Suvarna News   | Asianet News
Published : Mar 11, 2020, 03:03 PM IST
ಹೆತ್ತ ತಂದೆ, ತಾಯಿ, ಅಕ್ಕನನ್ನ ಬರ್ಬರವಾಗಿ ಹತ್ಯೆಗೈದ ಕಿರಾತಕ

ಸಾರಾಂಶ

ಒಂದೇ ಕುಟುಂಬದ ಮೂವರ ಹತ್ಯೆ| ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಉಮದಿ ಬಳಿ ನಡೆದ ಘಟನೆ| ಹೆತ್ತವರನ್ನೇ ಕೊಂದ ಪಾಪಿ ಪುತ್ರ|  ಹೆತ್ತ ತಂದೆ-ತಾಯಿ ಹಾಗೂ ಒಡಹುಟ್ಟಿದ ಅಕ್ಕನನ್ನು ಕೊಂದ ವ್ಯಕ್ತಿ|  ಆಸ್ತಿ ವಿವಾದಕ್ಕೆ ಮೂವರನ್ನು ಬಲಿ ತೆಗೆದುಕೊಂಡ ಕಿರಾತಕ|

ವಿಜಯಪುರ(ಮಾ.11): ವ್ಯಕ್ತಿಯೋರ್ವ ತಂದೆ, ತಾಯಿ ಹಾಗೂ ಅಕ್ಕನನ್ನ  ಹತ್ಯೆಗೈದ ಘಟನೆ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಉಮದಿ ಬಳಿ ಇಂದು(ಬುಧವಾರ) ನಡೆದಿದೆ. ತಂದೆ ಗುರುಲಿಂಗಪ್ಪ ಅರಕೇರಿ(82), ತಾಯಿ ನಾಗವ್ವ ಅರಕೇರಿ(75) ಹಾಗೂ ಅಕ್ಕ ಸಮುದ್ರಾಬಾಯಿ(60) ಕೊಲೆಯಾದ ದುರ್ದೈವಿಗಳಾಗಿದ್ದಾರೆ.

ಸಿದ್ದಪ್ಪ ಅರಕೇರಿ ಕೊಲೆ ಎಂಬಾತನೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಆಸ್ತಿ ವಿವಾದ ಹಿನ್ನೆಲೆಯಲ್ಲಿ ಮೂವರನ್ನ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೊಲೆ ಮಾಡಿದ ಬಳಿಕ ಸಿದ್ದಪ್ಪ ಅರಕೇರಿ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾನೆ. ಈ ಸಂಬಂಧ ಉಮದಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ. 
 

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ