ಏಪ್ರಿಲ್ ತಿಂಗಳಲ್ಲಿ ಜಗತ್ತಿನಲ್ಲಿ ಭಾರೀ ವಿಕೋಪ : ಭಯಾನಕ ಭವಿಷ್ಯ ನುಡಿದ ಜ್ಯೋತಿಷಿ

Kannadaprabha News   | Asianet News
Published : Mar 11, 2020, 02:58 PM IST
ಏಪ್ರಿಲ್ ತಿಂಗಳಲ್ಲಿ ಜಗತ್ತಿನಲ್ಲಿ ಭಾರೀ ವಿಕೋಪ : ಭಯಾನಕ ಭವಿಷ್ಯ ನುಡಿದ ಜ್ಯೋತಿಷಿ

ಸಾರಾಂಶ

ಈಗಾಗಲೇ ವಿಶ್ವದಲ್ಲಿ ಕೊರೋನಾ ಎಂಬ ಮಹಾಮಾರಿ ಸದ್ದು ಮಾಡುತ್ತಿದ್ದು, ಇದರ ಬೆನ್ನಲ್ಲೇ ಜ್ಯೋತಿಷಿಗಳೊಬ್ಬರು ಭಯಂಕರ ಭವಿಷ್ಯ ನುಡಿದಿದ್ದಾರೆ. ಏನದು..? 

ಬೆಂಗಳೂರು [ಮಾ.11]: ಈಗಾಗಲೇ ವಿಶ್ವದಲ್ಲಿ ಕೊರೋನಾ ಎಂಬ ಮಹಾಮಾರಿ ಮರಣ ಮೃದಂಗ ಬಾರಿಸುತ್ತಿದ್ದು, ಸಾವಿರಾರು ಜನರನ್ನು ಬಲಿ ಪಡೆದಿದೆ. ಇದರ ಬೆನ್ನಲ್ಲೇ ಮತ್ತೊಂದು ಆತಂಕದ ಸಂಗತಿ ಬೆಳಕಿಗೆ ಬಂದಿದೆ. 

2020 ಏಪ್ರಿಲ್ ತಿಂಗಳಲ್ಲಿ ಭಾರೀ ಪ್ರಕೃತಿ ವಿಕೋಪ ಸಂಭವಿಸಿ ಜಗತ್ತಿನ ಮೂರನೇ ಒಂದು ಭಾಗ ಜೀವ ಸಂತತಿ ಸಂಪೂರ್ಣ ನಾಶವಾಗಲಿದೆ ಎಂದು ಜ್ಯೋತಿಷಿಯೋರ್ವರು ಭವಿಷ್ಯ ನುಡಿದಿದ್ದಾರೆ. 

ಬೆಂಗಳೂರಿನ ದಿವ್ಯಶ್ರೀ ಕಾಲೇಜ್ ಆಫ್ ಆಸ್ಟ್ರೋಲಜಿಯ ಖಜಾಂಚಿ ಶಿವಣ್ಣ ಎನ್ನುವವರು ಭವಿಷ್ಯ ನುಡಿದಿದ್ದು, ಶನಿ, ಗುರು, ಕುಜ ಗ್ರಹಗಳ ಮಕರ ರಾಶಿ ಪ್ರವೇಶಿಲಿದ್ದು, ಭಾರೀ ವಿಕೋಪವಾಗಲಿದೆ ಎಂದರು. 

ಭಾರತದಲ್ಲಿ ಕೊರೋನಾಗೆ ಮೊದಲ ಬಲಿ? ಕರ್ನಾಟಕದ ವ್ಯಕ್ತಿ ಸಾವು!...

ಮೂರನೇ ಒಂದು ಭಾಗ ಜೀವ ಸಂತತಿ ನಾಶವಾಗಲಿದ್ದು, ಭೂಕಂಪ ಸುನಾಮಿ ಜ್ವಾಲಾಮುಖಿ ಆಗಲಿದ್ದು, ಇದರ ಮುನ್ಸೂಚನೆಯಾಗಿ ರೋಗ ರುಜಿನಗಳು ಹರಡುತ್ತಿವೆ ಎಂದಿದ್ದಾರೆ. 

ಭಯಾನಕ ಕೊರೋನಾ ವೈರಸ್ ಹರಡುತ್ತಿದ್ದು, ಇದು ಹೆಚ್ಚು ಜೀವರಾಶಿ ಬಲಿ ಪಡೆಯುತ್ತಿದೆ. ಕಳೆದ ಕೆಲ ತಿಂಗಳ ಹಿಂದೆ ಸಂಭವಿಸಿದ್ದ ಆಸ್ಟ್ರೇಲಿಯಾ ಕಾಡ್ಗಿಚ್ಚು ಕೂಡ ಒಂದು ಮುನ್ಸೂಚನೆ ಎಂದಿದ್ದಾರೆ.  

PREV
click me!

Recommended Stories

ಪದೇಪದೆ 'ನಮ್ಮಪ್ಪನೇ ಸಿಎಂ..' ಯತೀಂದ್ರ ಹೇಳಿಕೆಯಿಂದ ಸರ್ಕಾರಕ್ಕೆ ಮುಜುಗರ? ಸತೀಶ್ ಜಾರಕಿಹೊಳಿ ಹೇಳಿದ್ದೇನು?
16 ಬಾರಿ ಬಜೆಟ್ ಮಂಡಿಸಿದ ವಿಶ್ವದ ಕುಖ್ಯಾತ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ, ಸತ್ತ ಸರ್ಕಾರದ ಮುಖ್ಯಮಂತ್ರಿ: ಪ್ರತಾಪ್ ಸಿಂಹ ವಾಗ್ದಾಳಿ