ಬೆಂಗಳೂರಲ್ಲಿ ಭೀಕರ ಅಪಘಾತ: ತಾಯಿ, 2 ಮಕ್ಕಳು ಸಜೀವ ದಹನ

Published : Oct 04, 2023, 11:00 PM IST
ಬೆಂಗಳೂರಲ್ಲಿ ಭೀಕರ ಅಪಘಾತ: ತಾಯಿ, 2 ಮಕ್ಕಳು ಸಜೀವ ದಹನ

ಸಾರಾಂಶ

ಟಾಟಾ ನೆಕ್ಸಾನ್‌ ಕಾರಿನಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಮಂಗಳವಾರ ಬೆಳಗಿನ ಜಾವ 2.50ರ ಸುಮಾರಿಗೆ ನೈಸ್‌ ರಸ್ತೆಯಲ್ಲಿ ಬರುತ್ತಿದ್ದರು. ನಿಯಂತ್ರಣ ತಪ್ಪಿದ ಕಾರು, ರಸ್ತೆ ವಿಭಜಕ ಹತ್ತಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ. 

ಬೆಂಗಳೂರು(ಅ.04):  ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕ ಎಗರಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಉರುಳಿ ಬಿದ್ದು ಬೆಂಕಿ ಹೊತ್ತಿಕೊಂಡು ಉರಿದು ಮಹಿಳೆ ಹಾಗೂ ಇಬ್ಬರು ಮಕ್ಕಳು ಸಜೀವ ದಹನವಾಗಿರುವ ದಾರುಣ ಘಟನೆ ಮಂಗಳವಾರ ಮುಂಜಾನೆ ಬೆಂಗಳೂರಿನ ನೈಸ್‌ ರಸ್ತೆಯಲ್ಲಿ ನಡೆದಿದೆ.

ರಾಮಮೂರ್ತಿನಗರದ ವಿಜಿನಾಪುರ ನಿವಾಸಿಗಳಾದ ಸಿಂಧೂ(31) ಹಾಗೂ ಆಕೆಯ ಇಬ್ಬರು ಮಕ್ಕಳಾದ ಕುಶವಿ(2) ಮತ್ತು ಪ್ರಣವಿ(6) ಮೃತರು. ಕಾರು ಚಾಲನೆ ಮಾಡುತ್ತಿದ್ದ ಪತಿ ಮಹೇಂದ್ರನ್‌(35) ಗಂಭೀರವಾಗಿ ಗಾಯಗೊಂಡಿದ್ದಾರೆ.
ತಮಿಳುನಾಡಿನ ಸೇಲಂ ಮೂಲದ ಮಹೇಂದ್ರನ್‌ ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದಾರೆ. ವಿಜಿನಾಪುರದಲ್ಲಿ ನೆಲೆಸಿದ್ದರು. ಟಾಟಾ ನೆಕ್ಸಾನ್‌ ಕಾರಿನಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಮಂಗಳವಾರ ಬೆಳಗಿನ ಜಾವ 2.50ರ ಸುಮಾರಿಗೆ ನೈಸ್‌ ರಸ್ತೆಯಲ್ಲಿ ಬರುತ್ತಿದ್ದರು. ನಿಯಂತ್ರಣ ತಪ್ಪಿದ ಕಾರು, ರಸ್ತೆ ವಿಭಜಕ ಹತ್ತಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ. 

Watch video: ಚೆನ್ನೈನಲ್ಲಿ ಭಯಂಕರ ಆಕ್ಸಿಡೆಂಟ್; ವಿಡಿಯೋ ನೋಡಿದ್ರೇನೆ ಮೈ ನಡುಗುತ್ತೆ!

ಲಾರಿ ಉರುಳಿ ಬಿದ್ದರೆ, ಕಾರು ಬೆಂಕಿ ಹೊತ್ತಿಕೊಂಡು ಉರಿಯಲು ಆರಂಭಿಸಿದೆ. ಈ ವೇಳೆ ಪತ್ನಿ ಸಿಂಧೂ ಮತ್ತು ಪುತ್ರಿ ಕುಶವಿ ಸಜೀವ ದಹನವಾಗಿದ್ದಾರೆ. ಪ್ರಣವಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

PREV
Read more Articles on
click me!

Recommended Stories

ಸಿದ್ದರಾಮಯ್ಯ ಹೆಲಿಕಾಪ್ಟರ್‌ ಪ್ರಯಾಣಕ್ಕೆ ರಾಜ್ಯದ ಬೊಕ್ಕಸದಿಂದ ಕೋಟ್ಯಂತರ ಖರ್ಚು!
ಬಸವತತ್ವ ಪ್ರಚಾರಕ, ವಚನ ಶಿಲಾ ಮಂಟಪದ ರೂವಾರಿ ಚನ್ನಬಸವ ಶ್ರೀಗಳು ಲಿಂಗೈಕ್ಯ