ಚಿತ್ರದುರ್ಗ: ದೀಪಾವಳಿ ಹಬ್ಬದಂದೇ ಜವರಾಯನ ಅಟ್ಟಹಾಸ, ಡಿವೈಡರ್‌ಗೆ ಕಾರು ಡಿಕ್ಕಿ, ಸ್ಥಳದಲ್ಲೇ ಮೂವರ ಸಾವು

By Girish Goudar  |  First Published Oct 25, 2022, 11:13 AM IST

ಚಿತ್ರದುರ್ಗ ನಗರದ ಪ್ರವಾಸಿ ಮಂದಿರದ ಡಿವೈಡರ್‌ಗೆ ಕಾರು ಡಿಕ್ಕಿ ಮೂವರ ಸಾವು, ಚಾಲಕನ ಅಜಾಗರೂಕತೆ, ಹಾಗೂ ಮದ್ಯಸೇವನೆಯಿಂದ ಅಫಘಾತ ನಡೆದಿರುವ ಶಂಕೆ 


ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಅ.25):  ಎಲ್ಲರೂ ನಿನ್ನೆ(ಸೋಮವಾರ) ರಾತ್ರಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಾಚರಣೆಯಲ್ಲಿ ಇದ್ದರು. ಆದ್ರೆ ತಡರಾತ್ರಿ ಆ ಚಾಲಕನು ಮಾಡಿದ ದೊಡ್ಡ ತಪ್ಪಿನಿಂದಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ಅಪಘಾತ ಚಿತ್ರದುರ್ಗ ನಗರದ ಹೃದಯಭಾಗದಲ್ಲಿ ನಡೆದಿದೆ. ಅಷ್ಟಕ್ಕೂ ಆ ಯುವಕರು ಎಲ್ಲಿಯವರು? ಅಪಘಾತ ಆಗಲು ಕಾರಣವಾದ್ರು ಏನು ಅನ್ನೋದ್ರ ಕಂಪ್ಲೀಟ್ ವರದಿ ಇಲ್ಲಿದೆ ನೋಡಿ.....

Latest Videos

undefined

ಹೀಗೆ ಒಂದ್ಕಡೆ ತಮ್ಮ ಮಕ್ಕಳನ್ನು ಕಳೆದುಕೊಂಡ ಸಂಕಷ್ಟದಲ್ಲಿ ಕಣ್ಣೀರು ಹಾಕ್ತಾ ಮುಗಿಲು ಮುಟ್ಟಿದ ಪೋಷಕರ ಆಕ್ರಂದನ. ಮತ್ತೊಂದೆಡೆ ಭೀಕರ ಅಪಘಾತದಲ್ಲಿ ನುಜ್ಜು ಗುಜ್ಜಾಗಿರುವ ಕಾರು. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ನಗರದಲ್ಲಿ. ತಡರಾತ್ರಿ ಎಲ್ಲರ ಮನೆಯಲ್ಲಿಯೂ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮನೆ ಮಾಡಿತ್ತು. ಆದ್ರೆ ಜವರಾಯನ ಅಟ್ಟಹಾಸದಿಂದ  ಚಿತ್ರದುರ್ಗ ನಗರದ ಪ್ರವಾಸಿ ಮಂದಿರದ ಮುಂಭಾಗ ಇರುವ ಡಿವೈಡರ್‌ಗೆ ಕಾರು ಚಾಲಕನ ಅಜಾಗರೂಕತೆಯಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ದುರ್ಮರಣ ಆಗಿರುವ ಭೀಕರ ಅಪಘಾತ ನಡೆದಿದೆ. 

Bengaluru: ಡಿವೈಡರ್ ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಬೈಕ್ ಸವಾರ ಭೀಕರ ಅಂತ್ಯ

ಮೂವರಲ್ಲಿ ಚಾಲಕ ಮನು ಚಳ್ಳಕೆರೆ ತಾಲ್ಲೂಕಿನ ಕಾಮಸಮುದ್ರದ ಮೂಲದವನು. ಅದೇ ರೀತಿ ಚಿತ್ರದುರ್ಗದ ಕೂದಲೆಳೆ ಅಂತರದಲ್ಲಿ ಇರುವ ಮೆದೇಹಳ್ಳಿ ಗ್ರಾಮದ ಹರೀಶ್, ಸಚಿನ್ ಜೀವನದಲ್ಲಿ ಈ ದೀಪಾವಳಿ ಹಬ್ಬ ಕತ್ತಲು ತಂದಿದ್ದು ವಿಷಾದನೀಯ. ಬೆಂಗಳೂರಿನಿಂದ ಚಾಲಕ ಮನು ನನಗೆ ಬರಲು ಹೇಳಿದನು. ಹಾಗಾಗಿ ನಾನು ಬಂದೆ, ಚಾಲಕನ ಅತಿ ವೇಗದಿಂದ ಈ ಅಪಘಾತ ಸಂಭವಿಸಿತು ಎಂದು ಕಾರಿನಲ್ಲಿದ್ದ ಮತ್ತೋರ್ವ ಯುವಕ ತಿಳಿಸಿದನು.

ಇನ್ನೂ ತಮ್ಮ ಮಕ್ಕಳ ಸಾವಿನ ಸುದ್ದಿ ತಿಳಿದ ಕುಟುಂಬಸ್ಥರು ಓಡೋಡಿ ಬಂದು, ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಇರುವ ಶವಗಾರದ ಬಳಿಯ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಹಬ್ಬದ ದಿನ ಮನೆಯಲ್ಲಿ ಸಂಭ್ರಮದಿಂದ ಇರಬೇಕಿದ್ದ ಮಕ್ಕಳು ಇಂದು ಹೆಣರಾಗಿ ಬಿದ್ದಿದ್ದಾರಲ್ಲ‌ ಎಂತ ದುರ್ವಿದಿ ಎಂದು ಕಣ್ಣೀರು ಹಾಕಿದ್ದು ತುಂಬಾ ನೋವುಂಟು ಮಾಡಿತು. ತಡರಾತ್ರಿ ನಗರದಲ್ಲಿ ನಡೆದಿರುವ ಆಕ್ಸಿಡೆಂಟ್ ತುಂಬಾ ಭೀಕರವಾದದು. ಚಿತ್ರದುರ್ಗ ನಗರದಲ್ಲಿ ಮಾಡಿರುವ ರಸ್ತೆ ಹಾಗೂ ಡಿವೈಡರ್ ಗಳು ತುಂಬಾ ಅವೈಜ್ಞಾನಿಕವಗಿ ನಿರ್ಮಾಣ‌ ಮಾಡಲಾಗಿದೆ. ಆದ್ದರಿಂದಲೇ ನಮ್ಮ ಸಂಬಂಧಿಕರು ಇಂದು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇಡೀ ಕುಟುಂಬಕ್ಕೆ ಅವರು ಅಧಾರ ಸ್ತಂಭವಾಗಿದ್ದರು ಇಂದು ಅವರ ಸಾವು ಪೋಷಕರಿಗೆ ಗರ ಬಡಿದಂತಾಗಿದೆ. ಇನ್ನಾದ್ರೂ ಅಧಿಕಾರಿಗಳು ಎಚ್ಚೆತ್ತು ರಸ್ತೆಗಳ ಅವೈಜ್ಞಾನಿಕ ಕೆಲಸಗಳನ್ನು ಸರಿಪಡಿಸಲಿ ಎಂಬುದು ಮೃತ ಸಂಬಂಧಿಕರ ಆಗ್ರಹವಾಗಿದೆ. 

ಒಟ್ಟಾರೆಯಾಗಿ ತಡರಾತ್ರಿ ಸಂಭವಿಸಿದ ಅಪಘಾತ ಇಡೀ ಚಿತ್ರದುರ್ಗ ಜನತೆಗೆ ಶಾಕ್‌ ನೀಡಿದೆ ಅಂತಾನೆ ಹೇಳಬಹುದು. ಆದ್ದರಿಂದ ಇನ್ನಾದ್ರೂ ವಾಹನ ಸವಾರರು ಅತಿಯಾದ ಸ್ಪೀಡ್‌ನಲ್ಲಿ ಚಾಲನೆ ಮಾಡದೇ ಹಾಗೂ ಅಧಿಕಾರಿಗಳು ಅವೈಜ್ಞಾನಿಕ ವಾಗಿ ಕಾಮಗಾರಿ ಮಾಡದೇ ಎಚ್ಚೆತ್ತುಕೊಳ್ಳಲಿ ಎಂಬುದು ಎಲ್ಲರ ಬಯಕೆ. 
 

click me!