ಮಂಡ್ಯ: ಕಾರು ಪಲ್ಟಿ, ತಂದೆ, ಇಬ್ಬರು ಪುತ್ರರ ಸಜೀವ ದಹನ

Kannadaprabha News   | Asianet News
Published : Jun 05, 2021, 08:29 AM IST
ಮಂಡ್ಯ: ಕಾರು ಪಲ್ಟಿ, ತಂದೆ, ಇಬ್ಬರು ಪುತ್ರರ ಸಜೀವ ದಹನ

ಸಾರಾಂಶ

* ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಬಳಿ ನಡೆದ ಘಟನೆ * ಗಾಯಾಳುಗಳನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು * ಕಾರ್ಯನಿಮಿತ್ತ ಚಾಮರಾಜನಗರ ಜಿಲ್ಲೆ ಹನೂರಿಗೆ ತೆರಳಿದ್ದ ಮೃತರು 

ಹಲಗೂರು(ಜೂ.05): ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹಳ್ಳಕ್ಕೆ ಉರುಳಿಬಿದ್ದು ತಕ್ಷಣವೇ ಬೆಂಕಿ ಹೊತ್ತಿಕೊಂಡ ಪರಿಣಾಮ ಅಪ್ಪ ಇಬ್ಬರು ಮಕ್ಕಳು ಸಜೀವ ದಹನವಾದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ(ಶುಕ್ರವಾರ) ನಡೆದಿದೆ. 

ಕಾರನ್ನು ಚಾಲನೆ ಮಾಡುತ್ತಿದ್ದ ಶೇಕ್‌ ಫೈಜಲ್‌(45), ಅವರ ಮಕ್ಕಳಾದ ಸುಹಾನಾ(12) ಮತ್ತು ಶೇಕ್‌ ಅಹಿಲ್‌ (6) ಸಜೀವ ದಹನವಾದವರು. ಮೃತನ ಪತ್ನಿ ಮೆಹಕ್‌ ಮತ್ತು ಮಗಳು ಮಹೈರಾಗೆ ತೀವ್ರ ಸುಟ್ಟಗಾಯಗಳಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಕೈತಪ್ಪಿದ KSRTC : ಬಾಬಾಸಾಹೇಬ್ ಸಾರಿಗೆ ಎಂದು ಹೆಸರಿಡಲು ಸುಮಲತಾ ಮನವಿ

ಬೆಂಗಳೂರಿನ ನಿವಾಸಿಗಳಾದ ಇವರು ಕಾರ್ಯನಿಮಿತ್ತವಾಗಿ ಚಾಮರಾಜನಗರ ಜಿಲ್ಲೆ ಹನೂರಿಗೆ ತೆರಳಿದ್ದರು. ಶುಕ್ರವಾರ ಮುಂಜಾನೆ ಬೆಂಗಳೂರಿಗೆ ವಾಪಸ್‌ ಆಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.
 

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!