ಕಾರಿನ ಟೈರ್ ಒಡೆದು ಗದಗ ಸಮೀಪದ ಕಳಸಾಪುರ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಶೌಚಾಲಯದ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮೃತರಾಗಿದ್ದು, ಇನ್ನೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸವದತ್ತಿ(ನ.18): ಖಾಸಗಿ ಕೆಲಸಕ್ಕೆಂದು ಕಾರಿನಲ್ಲಿ ಬಳ್ಳಾರಿಗೆ ತೆರಳಿದ್ದ ಸವದತ್ತಿಯ ಮೂವರು ಬಳ್ಳಾರಿಯಿಂದ ಮರಳಿ ಸವದತ್ತಿಗೆ ಆಗಮಿಸುವಾಗ ಕಾರಿನ ಟೈರ್ ಒಡೆದು ಗದಗ ಸಮೀಪದ ಕಳಸಾಪುರ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಶೌಚಾಲಯದ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮೃತರಾಗಿದ್ದು, ಇನ್ನೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತರ ಪೈಕಿ ತಂದೆ ಮತ್ತು ಮಗ ಸೇರಿದ್ದಾರೆ. ಸಿದ್ದಯ್ಯ ಪಾಟೀಲ (60) ಮತ್ತು ಬಾಬು ತಾರಿಹಾಳ (61) ಸ್ಥಳದಲ್ಲಿಯೇ ಮೃತರಾಗಿದ್ದು, ಕಾರು ಚಾಲನೆ ಮಾಡುತ್ತಿದ್ದ ಸಿದ್ದಯ್ಯ ಪಾಟೀಲರ ಮಗ ಶಶಿರಕುಮಾರ ಪಾಟೀಲ (36) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಪುರುಷರಿಗಿಂತ ಮಹಿಳೆಯರೇ ಬೆಸ್ಟ್ ಡ್ರೈವರ್ಸ್, ಸರ್ಕಾರದ ವರದಿ!
ಮೃತ ಸಿದ್ದಯ್ಯ ಪಾಟೀಲ ಗುತ್ತಿಗೆದಾರರು ಹಾಗೂ ರಿಯಲ್ ಎಸ್ಟೇಟ್ ಉದ್ದಿಮಿಯಾಗಿದ್ದು, ಇವರಿಗೆ ಪತ್ನಿ, ಓರ್ವ ಪುತ್ರಿ ಸೇರಿದಂತೆ ಅಪಘಾತದಲ್ಲಿ ಮೃತಪಟ್ಟ ಪುತ್ರ ಶಶಿರಕುಮಾರ ಇದ್ದು, ಶಶಿರಕುಮಾರನಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ. ಬಾಬು ತಾರಿಹಾಳರಿಗೆ ಪತ್ನಿ ಹಾಗೂ ಓರ್ವ ಪುತ್ರಿ ಇದ್ದಾರೆ.