ವಿಜಯನಗರ: ಕೂಡ್ಲಿಗಿ ಬಳಿ ಭೀಕರ ಅಪಘಾತ, ಮೂವರು ಹುಲಿಗೆಮ್ಮ ಭಕ್ತರ ದುರ್ಮರಣ

By Girish Goudar  |  First Published Sep 1, 2023, 12:00 PM IST

ಕೊಟ್ಟೂರು ತಾಲೂಕಿನ ಬತ್ತನಹಳ್ಳಿಯ ತಿಪ್ಪಣ್ಣ ಹಾಗೂ ಅವರ ಸಂಬಂಧಿಕರು ಹುಲಿಗಿ ದೇವಾಲಯಕ್ಕೆ ಹೊರಟಿದ್ದರು. ಮಿನಿ ಲಾರಿ ಹತ್ತಿದ 10 ಜನರು, ಸಾಸಲವಾಡ ಕ್ರಾಸ್ ಬಳಿ, ತಮ್ಮ ಸಂಬಂಧಿಕರಿಗಾಗಿ ಕಾಯ್ತಾ ಇದ್ರು. ನಿಂತಿದ್ದ ಮಿನಿ ಲಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. 

ವಿಜಯನಗರ(ಸೆ.01): ಲಾರಿ- ಮಿನಿಲಾರಿ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ- ಕೊಟ್ಟೂರು ಮಾರ್ಗ ಮಧ್ಯೆಯ ಸಾಸಲವಾಡ ಕ್ರಾಸ್ ಬಳಿ ಇಂದು(ಶುಕ್ರವಾರ) ನಡೆದಿದೆ.  

ನಿಂತಿದ್ದ ಮಿನಿ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಪ್ರಾಣಬಿಟ್ಟಿದ್ದಾರೆ. ಮೃತರನ್ನ ಗಜಾಪುರದ ಮಿನಿಲಾರಿ ಚಾಲಕ ಗುರುವಣ್ಣ(40) ಬತ್ತನಹಳ್ಳಿಯ ತಿಪ್ಪಣ್ಣ(55) ಬಸವರಾಜ್ (25) ಮೃತಪಟ್ಟ ಎಂದು ಗುರುತಿಸಲಾಗಿದೆ. 

Tap to resize

Latest Videos

undefined

ಅಣ್ಣನಿಗೆ ರಾಖಿ ಕಟ್ಟಲು ಹೋಗ್ತಿದ್ದ ತಂಗಿ ಬಲಿ: ಬಸ್‌ ಕಿಟಕೀಲಿ ಬಗ್ಗಿ ವಾಂತಿ ಮಾಡ್ತಿದ್ದೋಳ ತಲೆ ಪೀಸ್‌ಪೀಸ್‌!

ಕೊಟ್ಟೂರು ತಾಲೂಕಿನ ಬತ್ತನಹಳ್ಳಿಯ ತಿಪ್ಪಣ್ಣ ಹಾಗೂ ಅವರ ಸಂಬಂಧಿಕರು ಹುಲಿಗಿ ದೇವಾಲಯಕ್ಕೆ ಹೊರಟಿದ್ದರು. ಮಿನಿ ಲಾರಿ ಹತ್ತಿದ 10 ಜನರು, ಸಾಸಲವಾಡ ಕ್ರಾಸ್ ಬಳಿ, ತಮ್ಮ ಸಂಬಂಧಿಕರಿಗಾಗಿ ಕಾಯ್ತಾ ಇದ್ರು. ನಿಂತಿದ್ದ ಮಿನಿ ಲಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. 

ಉಳಿದವರಿಗೆ ಸಣ್ಣ, ಪುಟ್ಟ ಗಾಯಗಳಾಗಿದ್ದು, ಕೂಡ್ಲಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಜಯನಗರ ಎಸ್ಪಿ ಶ್ರೀಹರಿಬಾಬು ಬಿಎಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

click me!