ಮಂಡ್ಯ: ರಂಗನಾಥಸ್ವಾಮಿ ದೇವಸ್ಥಾನದ ಪಾಕಶಾಲೆಗೆ ಬೆಂಕಿ, ತಪ್ಪಿದ ಭಾರೀ ದುರಂತ..!

Published : Sep 01, 2023, 08:59 AM ISTUpdated : Sep 01, 2023, 10:21 AM IST
ಮಂಡ್ಯ: ರಂಗನಾಥಸ್ವಾಮಿ ದೇವಸ್ಥಾನದ ಪಾಕಶಾಲೆಗೆ ಬೆಂಕಿ, ತಪ್ಪಿದ ಭಾರೀ ದುರಂತ..!

ಸಾರಾಂಶ

ರಂಗನಾಥಸ್ವಾಮಿಯ ಪ್ರಸಾದದ ಲಡ್ಡು ತಯಾರು ಮಾಡುವ ಪಾಕ ಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಿನ್ನೆ ರಾತ್ರಿ 8 ಗಂಟೆ ವೇಳೆಗೆ ಘಟನೆ ನಡೆದಿದೆ. ಈ ವೇಳೆ ಪ್ರಸಾದ ಲಡ್ಡುಗಳು ಬೆಂಕಿಗೆ ನಾಶವಾಗಿವೆ.   

ಮಂಡ್ಯ(ಸೆ.01):  ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನದ ಪಾಕಶಾಲೆಗೆ ಬೆಂಕಿ ಬಿದ್ದ ಘಟನೆ ನಿನ್ನೆ(ಗುರುವಾರ) ರಾತ್ರಿ ನಡೆದಿದೆ. 

ರಂಗನಾಥಸ್ವಾಮಿಯ ಪ್ರಸಾದದ ಲಡ್ಡು ತಯಾರು ಮಾಡುವ ಪಾಕಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಿನ್ನೆ ರಾತ್ರಿ 8 ಗಂಟೆ ವೇಳೆಗೆ ಘಟನೆ ನಡೆದಿದೆ. ಈ ವೇಳೆ ಪ್ರಸಾದ ಲಡ್ಡುಗಳು ಬೆಂಕಿಗೆ ನಾಶವಾಗಿವೆ ಅಂತ ತಿಳಿದು ಬಂದಿದೆ. 

ತಮಿಳುನಾಡಿಗೆ ನೀರು: 100 ಅಡಿಗೆ ಕುಸಿದ ಕೆಆರ್‌ಎಸ್‌ ಸಂಗ್ರಹ, ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿ

ಬೆಂಕಿಯ ಕೆನ್ನಾಲಿಗೆಗೆ ಪ್ರಸಾದ ತಯಾರಿಕೆಯ ಪಾತ್ರೆಗಳು ಹಾಗೂ ಸಾಮಾಗ್ರಿಗಳು ಸುಟ್ಟು ಕರಕಲಾಗಿವೆ. ಬಳಿಕ ಸ್ಥಳೀಯರು ಹಾಗೂ ದೇವಸ್ಥಾನದ ಸಿಬ್ಬಂದಿಗಳು ಬೆಂಕಿಯನ್ನ ನಂದಿಸಿದ್ದಾರೆ. ಅದೃಷ್ಟವಷಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 

PREV
Read more Articles on
click me!

Recommended Stories

ಕಸದ ರಾಶಿಯಿಂದ ಹತ್ತಿಕೊಂಡ ಬೆಂಕಿ ನೀಲಗಿರಿ ತೋಪಿಗೆ ; ಸ್ಥಳೀಯರ ಸಾಹಸದಿಂದ ತಪ್ಪಿದ ಭಾರಿ ಅನಾಹುತ!
ರಸ್ತೆ ಮೇಲೆಯೇ ಕಾರ್ ಪಾರ್ಕ್ ಮಾಡಿ ಹೋದ ಆಸಾಮಿ! ಟ್ರಾಫಿಕ್ ಜಾಮ್, ಸಾರ್ವಜನಿಕರು ಸೇರಿ ಏನು ಮಾಡಿದ್ರು ನೋಡಿ!