ಯಲ್ಲಾಪುರ: ಕಾಣೆಯಾದ ಮೂವರು ನದಿಯಲ್ಲಿ ಶವವಾಗಿ ಪತ್ತೆ

Kannadaprabha News   | Asianet News
Published : Nov 23, 2020, 10:51 AM IST
ಯಲ್ಲಾಪುರ: ಕಾಣೆಯಾದ ಮೂವರು ನದಿಯಲ್ಲಿ ಶವವಾಗಿ ಪತ್ತೆ

ಸಾರಾಂಶ

ನ. 20ರಂದು ಮನೆಯಿಂದ ಕಾಣೆಯಾಗಿದ್ದ ಮೂವರು| ಗಣೇಶ್‌ ಪಾಲ್‌ ಹೊಳೆಯಲ್ಲಿ ಶವವಾಗಿ ಪತ್ತೆ|  ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಲಗೊಡ್ಲುವಿ ಗ್ರಾಮದಲ್ಲಿ ನಡೆದ ಘಟನೆ| 

ಯಲ್ಲಾಪುರ(ನ.23): ತಾಲೂಕಿನ ಹಿತ್ಲಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲಗೊಡ್ಲುವಿನಲ್ಲಿ ಶುಕ್ರವಾರ ಮನೆಯಿಂದ ಕಾಣೆಯಾಗಿದ್ದ ತಾಯಿ, ಮಗಳು ಹಾಗೂ ಮೊಮ್ಮಗ ಭಾನುವಾರ ಗಣೇಶ್‌ ಪಾಲ್‌ ಹೊಳೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಮೃತಪಟ್ಟವರನ್ನು ಹಿತ್ಲಳ್ಳಿ ಕಲಗೊಡ್ಲುವಿನ ರಾಜೇಶ್ವರಿ ನಾರಾಯಣ ಹೆಗಡೆ (52), ವಾಣಿ ಪ್ರಕಾಶ್‌ ವೈ. (28) ಹಾಗೂ ವಾಣಿಯ ಇನ್ನೂ ಹೆಸರಿಡದ 11 ತಿಂಗಳ ಗಂಡು ಮಗು ಎಂದು ಗುರುತಿಸಲಾಗಿದೆ. 

ಮಲ್ಪೆ, ಕಾರವಾರದಲ್ಲಿ ನೀಲವಾಯ್ತು ಕಡಲ ಅಲೆ

ನ. 20ರಂದು ಅವರು ಮನೆಯಿಂದ ಕಾಣೆಯಾಗಿದ್ದರು. ಎಲ್ಲೆಡೆ ಹುಡುಕಾಡಿದ ಅವರ ಮನೆಯವರು ದೂರು ನೀಡಲು ಭಾನುವಾರ ಯಲ್ಲಾಪುರ ಪೊಲೀಸ್‌ ಠಾಣೆಗೆ ಬಂದಿದ್ದರು. ಅದೇ ಸಮಯಕ್ಕೆ ಗಣೇಶ್‌ ಪಾಲ್‌ ಹೊಳೆಯಲ್ಲಿ ಮೃತದೇಹ ದೊರಕಿರುವ ಕುರಿತು ಮಾಹಿತು ಲಭಿಸಿದೆ.
 

PREV
click me!

Recommended Stories

ಬೆಂಗಳೂರು ಜನರಿಗೆ ಹೊಟ್ಟೆತುಂಬಾ ಬಿರಿಯಾನಿ ಬಾಡೂಟ ಕೊಟ್ಟ ಕುಟುಂಬ ಸಾಲದ ಸುಳಿಗೆ ಸಿಲುಕಿ ಆತ್ಮ*ಹತ್ಯೆ!
ಗಡೀಪಾರು ಸಂಕಷ್ಟದಲ್ಲಿ Mahesh Shetty Timarodi: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ ದೇಗುಲದಲ್ಲಿ ಪ್ರಾರ್ಥನೆ