ಪ್ರಮುಖ ಘಟ್ಟದಲ್ಲಿ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‌ಸಿಟಿ ಯೋಜನೆ..!

By Kannadaprabha News  |  First Published Nov 23, 2020, 10:31 AM IST

ಫೆಬ್ರವರಿ ವೇಳೆಗೆ 15 ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ| ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ ಟೆಂಡರ್‌ ಕರೆಯೋದು ಮಾತ್ರ ಬಾಕಿ| ಪೂರ್ಣಗೊಂಡ 10, ಚಾಲ್ತಿಯಲ್ಲಿ 43 ಕಾಮಗಾರಿ| ಕೊರೋನಾ ಕಾರಣಕ್ಕೆ ವಿಳಂಬ| 


ಮಯೂರ ಹೆಗಡೆ

ಹುಬ್ಬಳ್ಳಿ(ನ.23): ಖೇಲೋ ಇಂಡಿಯಾ ಅಡಿಯ 150 ಕೋಟಿ ಮೊತ್ತದ ಇಂಟಿಗ್ರೆಟೆಡ್‌ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ ಯೋಜನೆಯ ಡಿಪಿಆರ್‌ ಪೂರ್ಣಗೊಂಡು ಟೆಂಡರ್‌ ಕರೆದಲ್ಲಿ ‘ಹುಬ್ಬಳ್ಳಿ-ಧಾ​ರ​ವಾಡ ಸ್ಮಾರ್ಟ್‌ಸಿಟಿ ಯೋಜನೆ’ಯ ಮೊದಲ ಹಂತದ ಎಲ್ಲ ಕಾಮಗಾರಿಗಳು ಒಂದು ಹಂತ ತಲುಪಿದಂತಾಗಲಿದೆ.

Tap to resize

Latest Videos

ಭಾನುವಾರ ಹೊಸೂರು ವಾಣಿವಿಲಾಸ ಜಂಕ್ಷನ್‌ ಬಳಿಯಿರುವ ಮನೆಗಳ ತೆರವು, ಜಿ+3 ಮಾದರಿಯ ಮನೆ ನಿರ್ಮಾಣದ 12 ಕೋಟಿ ವೆಚ್ಚದ ಮನೆ ನಿರ್ಮಾಣ ಹಾಗೂ ಈಚೆಗೆ ಹಳೆ ಬಸ್‌ ನಿಲ್ದಾಣ ಮರು ನಿರ್ಮಾಣಕ್ಕೆ 40 ಕೋಟಿ ವೆಚ್ಚದ ಟೆಂಡರ್‌ ಕೂಡ ಕರೆಯಲಾಗಿದೆ.

ಸ್ಮಾರ್ಟ್‌ಸಿಟಿಯಡಿ ಈ ವರೆಗೆ ಇಂಟಿಗ್ರೆಟೆಡ್‌ ಕಮಾಂಡ್‌ ಸೆಂಟರ್‌, ಈಜುಕೊಳ, ಮಳೆನೀರು ಕೊಯ್ಲು, ಸ್ಮಾರ್ಟ್‌ ಕ್ಲಾಸ್‌, ನ್ಯಾಪ್‌ಕಿನ್‌ ಮಷಿನ್‌ ಸೇರಿ 10 ಕಾಮಗಾರಿ ಪೂರ್ಣಗೊಂಡಿದೆ. ಮುಂದಿನ ಜನವರಿ-ಫೆಬ್ರವರಿ ವೇಳೆಗೆ ಬೆಂಗೇರಿ ಹಾಗೂ ಉಣಕಲ್‌ ಸ್ಮಾರ್ಟ್‌ ಮಾರುಕಟ್ಟೆಸೇರಿ 15 ಹಾಗೂ ಜೂನ್‌ ವೇಳೆಗೆ 8 ಕಾಮಗಾರಿಗಳನ್ನು ಜನತೆಗೆ ಅರ್ಪಿಸುವ ಗುರಿ ಹೊಂದಲಾಗಿದೆ ಎನ್ನುತ್ತಾರೆ ಎಚ್‌ಡಿಎಸ್‌ಸಿಎಲ್‌ ವಿಶೇಷಾಧಿಕಾರಿ ಎಸ್‌.ಎಚ್‌. ನರೇಗಲ್‌.
ರಾಮಲಿಂಗೇಶ್ವರ ನಗರದಲ್ಲಿ ಸ್ಮಾರ್ಟ್‌ರೋಡ್‌ ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಗೋಕುಲ ಇಂಡಸ್ಟ್ರಿಯಲ್‌ ಏರಿಯಾದಲ್ಲಿ ರಸ್ತೆ ಕಾಮಗಾರಿ, ತಬೀಬ್‌ ಲ್ಯಾಂಡ್‌, ಜೆ.ಸಿ. ರೋಡ್‌ ಕಾಮಗಾರಿಗಳು ಹಂತ-ಹಂತವಾಗಿ ಪೂರ್ಣಗೊಳ್ಳಲಿವೆ. ಗ್ರೀನ್‌ ಮೊಬಿಲಿಟಿ ಕಾರಿಡಾರ್‌ನ ಮೊದಲ ಹಂತದಲ್ಲಿ ಒಂದು ಕಿಲೋಮೀಟರ್‌ ಕಾಮಗಾರಿ ಡಿಸೆಂಬರ್‌ ಮೊದಲ ಹಂತದಲ್ಲಿ ಆರಂಭವಾಗಲಿದೆ. ಉಣಕಲ್‌ ಕೆರೆ ಸ್ವಚ್ಛತಾ ಕಾಮಗಾರಿ ಪೂರ್ಣಗೊಳ್ಳಲು ವರ್ಷ ಬೇಕು. ಒಟ್ಟಾರೆ 2022 ಮೇ ಒಳಗಾಗಿ ಸ್ಪೋಟ್ಸ್‌ರ್‍ ಕಾಂಪ್ಲೆಕ್ಸ್‌ ಹೊರತುಪಡಿಸಿ ಎಲ್ಲ ಕಾಮಗಾರಿಗಳೂ ಪೂರ್ಣಗೊಳ್ಳಲಿವೆ ಎಂದು ಎಂಬುದು ಅಧಿಕಾರಿಗಳ ವಿಶ್ವಾಸ.

ಹುಬ್ಬಳ್ಳಿ: ಸ್ಮಾರ್ಟ್‌ಸಿಟಿಯ 30 ಕೋಟಿಯಲ್ಲೇ ಹಳೆ ಬಸ್‌ ನಿಲ್ದಾಣ ಪುನರ್‌ ನಿರ್ಮಾಣ

ಅಸ​ಮಾ​ಧಾ​ನಕ್ಕೆ ಕೋವಿಡ್‌ ಕಾರಣ:

ಕೋರ್ಟ್‌ ಸರ್ಕಲ್‌ನ ಮಲ್ಟಿಲೇವಲ್‌ ಪಾರ್ಕಿಂಗ್‌ಗೆ ಪಾಯಕ್ಕಾಗಿ ಗುಂಡಿ ತೋಡಿ ನಾಲ್ಕೈದು ತಿಂಗಳು ಕಳೆದಿದೆ. ತೋಳನಕೆರೆ ಸ್ಮಾರ್ಟ್‌ ಯೋಜನೆ ಇನ್ನೂ ಕುಂಟುತ್ತ ಸಾಗಿದೆ. ಇಂದಿರಾ ಗಾಜಿನ ಮನೆ ಸ್ಮಾರ್ಟ್‌ ಆಗುವ ಮುನ್ನವೆ ಮಗುವೊಂದು ಬಿದ್ದು ಪ್ರಾಣ ಕಳೆದುಕೊಂಡು ವಿವಾದ ಆಗಿದೆ. ನಿಗದಿತ ವೇಳೆಯಲ್ಲಿ ಕಾಮಗಾರಿ ಮುಗಿದಿಲ್ಲ. ಗೋಕುಲ ಇಂಡಸ್ಟ್ರಿಯಲ್‌ ಏರಿಯಾದಲ್ಲಿ ರಸ್ತೆ, ಚರಂಡಿಯಂತ ಕಾಮಗಾರಿ ನಡೆದಿದೆ. ಆದರೂ ಸ್ಮಾರ್ಟ್‌ಸಿಟಿ ಯೋಜನೆ ಬಗ್ಗೆ ಒಂದು ಕಡೆ ಅಸಮಾಧಾನ ಇದ್ದೇ ಇದೆ. ಇದಕ್ಕೆಲ್ಲ ಕೊರೋನಾ ಕೂಡ ಕಾರಣ, ಕಾರ್ಮಿಕರು ಇಲ್ಲದೆ ಸ್ಥಗಿತಗೊಂಡಿದ್ದರಿಂದ ಇವೆಲ್ಲ ವಿಳಂಬಗತಿಯಲ್ಲಿ ಸಾಗಿವೆ.

ಪೂರ್ಣಗೊಂಡ ಯೋಜನೆ 10-  15.192 ಕೋಟಿ

ಚಾಲ್ತಿಯಲ್ಲಿರುವ ಯೋಜನೆ 43-  702.17 ಕೋಟಿ
ಟೆಂಡರ್‌ ಕರೆದಿರುವುದು 02 - 38 ಕೋಟಿ
ಡಿಪಿಆರ್‌ ಹಂತದಲ್ಲಿ 02 - 165 ಕೋಟಿ
ಒಟ್ಟು ಯೋಜನೆಗಳು 57 -1000 ಕೋಟಿ

‘ಐಕಾನ್‌’ ಕಣ್ಣಿಗೆ ಕಾಣ್ತಿಲ್ಲವೆಂಬ ಕೊರಗು

ಸ್ಮಾರ್ಟ್‌ಸಿಟಿ ಎಂದರೆ ಕಣ್ಣಿಗೆ ರಾಚುವಂಥ ಕಾಮಗಾರಿ ಈ ವರೆಗೂ ಕಾಣ್ತಿಲ್ಲ ಎಂಬ ಅಸಮಾಧಾನ ಜನತೆಯಲ್ಲಿದೆ. ಸಚಿವ ಪ್ರಹ್ಲಾದ ಜೋಶಿ ಸಭೆ ಕರೆದಾಗೆಲ್ಲ ಕಾಮಗಾರಿ ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಚುರುಕು ಮೂಡಿಸುತ್ತಲೆ ಇರುತ್ತಾರೆ. ಆದರೆ, ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಕಾಮಗಾರಿ ಆರಂಭವಾದ ಎರಡು ವರ್ಷದಲ್ಲಿ ಇ-ಟಾಯ್ಲೆಟ್‌, ಇಂದಿರಾ ಗಾಜಿನಮನೆ, ಈಜುಕೊಳ, ಮಳೆನೀರು ಕೊಯ್ಲು, ಸ್ಮಾರ್ಟ್‌ ಕ್ಲಾಸ್‌ ಸೇರಿ ಹಲವು ಉದ್ಘಾಟನೆಗೊಂಡಿವೆ. ಆದರೆ, ಸ್ಮಾರ್ಟ್‌ಸಿಟಿ ಎಂದ ತಕ್ಷಣ ನೆನಪಿಗೆ ಬರುವಂಥ ಯಾವುದೆ ಒಂದೆ ಒಂದು ‘ಐಕಾನ್‌’ ಮಾದರಿಗಳು ಕಣ್ಣಿಗೆ ಕಾಣ್ತಿಲ್ಲ ಎಂಬುದು ಜನತೆಯ ಅಭಿಪ್ರಾಯ. ಹೀಗಾಗಿಯೆ ನಗರದಲ್ಲಿ ರಸ್ತೆ, ವಿದ್ಯುತ್‌ ಸೇರಿ ಏನೇ ಎಡವಟ್ಟಾದರೂ ಸೋಶಿಯಲ್‌ ಮಿಡಿಯಾದಲ್ಲಿ ‘ಇದು ಸ್ಮಾರ್ಟ್‌ಸಿಟಿ ಹಣೆಬರಹ’ ಎಂದು ನೆಟ್ಟಿಗರು ಕಿಚಾಯಿಸುತ್ತಲೆ ಇದ್ದಾರೆ.

ಇದಕ್ಕೆ ಪ್ರತಿಕ್ರಿಯಿಸುವ ಅಧಿಕಾರಿಗಳು, ಸಾಕಷ್ಟುಕಾಮಗಾರಿಗಳಾಗಿವೆ. ಇಂದಿರಾ ಗ್ಲಾಸ್‌ಹೌಸ್‌ನಲ್ಲಿ ಫಜಲ್‌ ಪಾರ್ಕಿಂಗ್‌ ಇನ್ನೇನು ಪೂರ್ಣಗೊಳ್ಳಲಿದೆ. ಅಲ್ಲಿಯೆ 6 ಪ್ರಾಜೆಕ್ಟ್ಗಳಿವೆ ಎಂದು ಹೇಳುತ್ತಾರೆ.

ರಾಜ್ಯದಲ್ಲಿ ಮೊದಲ ಸ್ಥಾನ

ಭಾನುವಾರ ಬಿಡುಗಡೆಯಾದ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಟೆಂಡರ್‌, ಕಾರ್ಯಾದೇಶ, ಪೂರ್ಣಗೊಂಡ ಕಾಮಗಾರಿ, ಪ್ರಗತಿಯಲ್ಲಿರುವ ಕಾರ್ಯಗಳ ಮಾನದಂಡದ ಮೇಲೆ ಅಂಕಪಟ್ಟಿಯಲ್ಲಿ ದೇಶದಲ್ಲಿ ಹು-ಧಾ ಸ್ಮಾರ್ಟ್‌ ಸಿಟಿ 27ನೇ ರಾರ‍ಯಂಕಿಂಗ್‌ನಿಂದ 13ನೇ ಸ್ಥಾನಕ್ಕೇರಿದೆ. ರಾಜ್ಯದಿಂದ ಮೊದಲ ಸ್ಥಾನದಲ್ಲಿದ್ದು, 2ನೇ ಸ್ಥಾನದಲ್ಲಿ ದಾವಣಗೆರೆ, ತುಮಕೂರು 3ನೇ ಸ್ಥಾನಲ್ಲಿದೆ.

ಒಂದು ಯೋಜನೆ ಡಿಪಿಆರ್‌ ಹಂತದಲ್ಲಿವೆ. ಇದರ ಪ್ರಕ್ರಿಯೆ ಪೂರ್ಣಗೊಂಡರೆ ಸ್ಮಾರ್ಟ್‌ಸಿಟಿ ಯೋಜನೆ ಮೊದಲ ಹಂತದ ಎಲ್ಲ ಯೋಜನೆಗಳು ಟೆಂಡರ್‌ ಆದಂತಾಗುತ್ತದೆ. ಕೊರೋನಾ ಕಾರಣಕ್ಕೆ ವಿಳಂಬವಾಗಿದೆ. ಅಲ್ಲದಿದ್ದರೆ ಕಣ್ಣಿಗೆ ಕಾಣುವಂತಹ ಕಾಮಗಾರಿಗಳು ಪೂರ್ಣಗೊಳ್ಳುತ್ತಿದ್ದವು ಎಂದು ಸ್ಮಾರ್ಟ್‌ ಸಿಟಿ ವಿಶೇಷಾಧಿಕಾರಿ ಎಸ್‌.ಎಚ್‌. ನರೇಗಲ್‌ ಅವರು ತಿಳಿಸಿದ್ದಾರೆ. 
 

click me!