ಕಲಬುರಗಿಯಲ್ಲಿ ಮುಂದುವರಿದ ಹೆಮ್ಮಾರಿ ಮರಣ ಮೃದಂಗ: ಬೆಚ್ಚಿಬಿದ್ದ ಜನತೆ

By Kannadaprabha NewsFirst Published Jul 5, 2020, 2:30 PM IST
Highlights

ಸೋಂಕಿನ ಪ್ರಮಾಣದಲ್ಲಿನ ನಿರಂತರ ಹೆಚ್ಚಳದಿಂದ ಕಲಬುರಗಿ ಜಿಲ್ಲೆಯಲ್ಲಿ ಕೊರೋನಾ ಆತಂಕ ಮತ್ತೆ ಹೆಚ್ಚುತ್ತಿದೆ| ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯೆ 1839 ಕ್ಕೆ ಏರಿಕೆ| ಕೆಲವು ಪ್ರಕರಣಗಳಲ್ಲಿ ಮಹಾರಾಷ್ಟ್ರ ಸಂಪರ್ಕ ಖಚಿತ|

ಕಲಬುರಗಿ(ಜು.06): ಜಿಲ್ಲೆಯಲ್ಲಿ ಶುಕ್ರವಾರ ಹೆಮ್ಮಾರಿ ಕೊರೋನಾಕ್ಕೆ ಮೂವರು ಬಲಿಯಾದ ಬೆನ್ನಲ್ಲೇ ಶನಿವಾರವೂ ಮತ್ತೆ ಸೋಂಕಿಗೆ ಮೂವರು ಬಲಿಯಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನಾ ಮರಣ ಮೃದಂಗ ಹಾಗೇ ಮುಂದುವರಿದಂತಾಗಿದೆ.

ಕೊರೋನಾ ಹೆæಮ್ಮಾರಿ ಸೋಂಕಿನಿಂದ ಜು. 4 ರ ಶನಿವಾರ ಕಲಬುರಗಿ ನಗರದಲ್ಲಿ ಓರ್ವ ಮಹಿಳೆ ಮತ್ತು ಇಬ್ಬರು ವೃದ್ಧರು ಮೃತಪಟಟಿದ್ದಾರೆ. ರಾಜ್ಯ ಕೋವಿಡ್‌ ಹೆಲ್ತ್‌ ಬುಲೆಟಿನ್‌ನ ಈ ಸಂಗತಿ ಖಡಿತಪಡಿಸಿದೆ. ಇದರಿಂದ ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ತೀವ್ರ ಜ್ವರ, ಉಸಿರಾಟ ತೊಂದರೆ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿ ನಗರದ ಇಸ್ಲಾಮಾಬಾದ ಕಾಲೋನಿಯ 45 ವರ್ಷದ ಮಹಿಳೆ (ರೋಗಿ ಸಂಖ್ಯೆ-21323) ಕಳೆದ ಜು.1 ರಂದು ಕಲಬುರಗಿ ಜಿಮ್ಸ್‌ ಆಸ್ಪತ್ರೆಗೆ ದಾಖಲಾಗಿ ಜು.3 ರಂದು ನಿಧನ ಹೊಂದಿರುತ್ತಾರೆ.

ಕಲಬುರಗಿ: ಕೊರೋನಾದಿಂದ ಗುಣಮುಖರಾಗಿದ್ದ ವ್ಯಕ್ತಿ ಸಾವು

ತೀವ್ರ ಜ್ವರ, ಉಸಿರಾಟ ತೊಂದರೆ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿ ನಗರದ ಇಸ್ಲಾಮಾಬಾದ ಕಾಲೋನಿಯ 75 ವರ್ಷದ ವೃದ್ಧ (ರೋಗಿ ಸಂಖ್ಯೆ-21343) ಕಳೆದ ಜು.1 ರಂದು ಕಲಬುರಗಿ ಜಿಮ್ಸ… ಆಸ್ಪತ್ರೆಗೆ ದಾಖಲಾಗಿ ಜು.2 ರಂದು ನಿಧನ ಹೊಂದಿರುತ್ತಾರೆ.

ಅದೇ ರೀತಿ  ಎದೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಕಲಬುರಗಿ ನಗರದ ದರ್ಗಾ ಪ್ರದೇಶದ 73 ವರ್ಷದ ವೃದ್ಧ (ರೋಗಿ ಸಂಖ್ಯೆ-21344) ಜು.1 ರಂದು ಇಲ್ಲಿನ ಜಿಮ್ಸ… ನಲ್ಲಿ ದಾಖಲಾಗಿ ಜು.2 ರಂದು ನಿಧನ ಹೊಂದಿದ್ದು, ಶನಿವಾರ ಇವರೆಲ್ಲರಿಗೂ ಕೋವಿಡ್-19 ದೃಢವಾಗಿದೆ ಎಂದು ಡಿ.ಸಿ. ಶರತ್‌ ಬಿ. ತಿಳಿಸಿದ್ದಾರೆ.

ಇದಲ್ಲದೆ ಜಿಲ್ಲೆಯಲ್ಲಿ ಶನಿವಾರ ಮತ್ತೆ ಹೊಸತಾಗಿ 37 ಕೊರೋನಾ ಸೆಂಕಿನ ಪ್ರಕರಣಗಲು ಪತ್ತೆಯಾಗಿದ್ದು ಇದರೊಂದಿಗೆ ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯಾಬಲ 1839 ಗೆ ಹೆಚ್ಚಾಗಿದೆ. ಸ್ಥಳೀಯವಾಗಿ ಹಲವು ಪ್ರಕರಣಗಳಲ್ಲಿ ಸೋಂಕಿನ ಮೂಲವೇ ಗೊತ್ತಾಗಿಲ್ಲ, ಜೊತೆಗೇ ಇನ್ನು ಕೆಲವು ಪ್ರಕರಣಗಳಲ್ಲಿ ಮಹಾರಾಷ್ಟ್ರ ಸಂಪರ್ಕ ಖಚಿತವಾಗಿದೆ. ಹೀಗಾಗಿ ಸಾವು ಹಾಗೂ ಸೋಂಕಿನ ಪ್ರಮಾಣದಲ್ಲಿನ ನಿರಂತರ ಹೆಚ್ಚಳದಿಂದ ಜಿಲ್ಲೆಯಲ್ಲಿ ಕೊರೋನಾ ಆತಂಕ ಮತ್ತೆ ಹೆಚ್ಚುತ್ತಿದೆ.
 

click me!