Kolara; ಬಂಗಾರಪೇಟೆ ಶಾಸಕರ ವಿರುದ್ಧ ಪ್ರಾಣ ಬೆದರಿಕೆ ಆರೋಪ

By Suvarna News  |  First Published Oct 9, 2022, 7:56 PM IST

ಕೋಲಾರ ಜಿಲ್ಲೆಯ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಸಮಾಜ ಸೇವಕರೊಬ್ಬರಿಗೆ ಪ್ರಾಣ ಬೆದರಿಕೆ ಹಾಕಿಸಿರುವ ಆರೋಪ ಕೇಳಿಬಂದಿದ್ದು,ಕೆಜಿಎಫ್ ನ ಎಸ್ಪಿ  ಯನ್ನು ನೇರವಾಗಿ ಭೇಟಿ ಮಾಡಿ ದೂರು ದಾಖಲು ಮಾಡಿದ್ದಾರೆ.


ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, 

ಕೋಲಾರ (ಅ.9): ಕೋಲಾರ ಜಿಲ್ಲೆಯ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಸಮಾಜ ಸೇವಕರೊಬ್ಬರಿಗೆ ಪ್ರಾಣ ಬೆದರಿಕೆ ಹಾಕಿಸಿರುವ ಆರೋಪ ಕೇಳಿಬಂದಿದ್ದು,ಕೆಜಿಎಫ್ ನ ಎಸ್ಪಿ  ಯನ್ನು ನೇರವಾಗಿ ಭೇಟಿ ಮಾಡಿ ದೂರು ದಾಖಲು ಮಾಡಿದ್ದಾರೆ. ಬಂಗಾರಪೇಟೆಯಲ್ಲಿರುವ ಒಬ್ಬಟ್ಲು ಎಂಬ ಕೆರೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ವಿಚಾರವಾಗಿ ಸಮಾಜ ಸೇವಕರೊಬ್ಬರಿಗೆ ಬಂಗಾರಪೇಟೆ ಶಾಸಕ ಪ್ರಾಣ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ, ಕೆಜಿಎಫ್ ಎಸ್ಪಿ ಅವರಿಗೆ ದೂರು ನೀಡಲಾಗಿದೆ. ಬಂಗಾರಪೇಟೆಯ ಸಮಾಜ ಸೇವಕ ಶ್ರೀಧರ್ ಎಂಬುವವರಿಗೆ ಶಾಸಕರ ಸಹಚರರ ಕರೆ ಮಾಡಿ ಪ್ರಾಣ ಬೆದರಿಕೆ ಹಾಕಿಸಿದ್ದಾರೆ ಎಂದು ಆರೋಪಿಸಲಾಗಿದ್ದು ನನಗೆ ಹಾಗೂ ತಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಕೋರಿ,‌ಕೆಜಿಎಫ್ ಎಸ್ಪಿ ಧರಣಿ ದೇವಿ ಅವರಿಗೆ ಶ್ರೀಧರ್ ದೂರು ಸಲ್ಲಿಸಿದ್ದಾರೆ. ಇನ್ನು ಬಂಗಾರಪೇಟೆ ಪಟ್ಟಣದ ಸರ್ವೇ ನಂಬರ್ 137 ರ ಒಬ್ಬಟ್ಲು ಕೆರೆಯಲ್ಲಿ ಇದ್ದು,ಇಲ್ಲಿ ಶಾಸಕರು ಅಂಬೇಡ್ಕರ್ ಭವನ ನಿರ್ಮಾಣ ಮಾಡುವುದಾಗಿ ಹೇಳಿದ್ದರು,ಕೆರೆಯ ಜಾಗದ 3 ಎಕರೆ ಜಮೀನು ಒತ್ತುವರಿಯಾಗಿದ್ದು,ಇದರಲ್ಲಿ ತೋಟಗಾರಿಕೆ ಇಲಾಖೆ, ಕನ್ನಡ ಭವನ, ವಿದ್ಯಾರ್ಥಿ ನಿಲಯ ಮತ್ತು ಪ್ರಾಥಮಿಕ ಶಾಲೆಯನ್ನು ಕಟ್ಟಲಾಗಿದೆ ಅಂತ ಹೇಳಲಾಗ್ತಿದೆ.

Tap to resize

Latest Videos

ಆದ್ರೀಗ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಅಂಬೇಡ್ಕರ್ ‌ಭವನ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂದು ಸಮಾಜ ಸೇವಕ ಶ್ರೀಧರ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು ಕೋರ್ಟ್ ನಲ್ಲಿ ಮಧ್ಯಂತರ ತಡೆಯಾಜ್ಞೆ ಸಹ ತರಲಾಗಿತ್ತು. ಅನಧಿಕೃತವಾಗಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮುಂದಾಗಿದ್ದು, ಅಲ್ಲಿನ ಒತ್ತುವರಿಯನ್ನು ಸಂಪೂರ್ಣವಾಗಿ ತೆರವುಗೊಳಿಸಲು ಜಿಲ್ಲಾಧಿಕಾರಿಗಳಿಗೆ ನ್ಯಾಯಾಲಯ ಸೂಚನೆ ಸಹ ನೀಡಿತ್ತು.

ಇನ್ನು ಇದಕ್ಕೆ ಆಕ್ರೋಶಗೊಂಡ ಶಾಸಕರ ಬೆಂಬಲಿಗರಾದ ಸೂಲಿಕುಂಟೆ‌ ರಮೇಶ, ಹುಣಸಹಳ್ಳಿ ವೆಂಕಟೇಶ, ಮಣಿವಣ್ಣನ್,‌ಚಿಕ್ಕನಾರಾಯಣ ತಮ್ಮ ಮನೆಯ ಮುಂದೆ ಧರಣಿ ಮಾಡುವುದಾಗಿ ಬೆದರಿಕೆ ಹಾಕುವುದರ ಜೊತೆ ಅಕ್ಟೋಬರ್ 19ರೊಳಗೆ ಪ್ರಕರಣ ಏನಾದ್ರು ಇತ್ಯರ್ಥವಾಗದಿದ್ರೆ ಬಂಗಾರಪೇಟೆ ಬಂದ್  ಮಾಡುವುದಾಗಿ ಧಮಕಿ ಹಾಕಿದ್ದಾರೆ ಅಂತ ಆರೋಪಿಸಿ  ನನಗೆ ಮತ್ತು ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಎಸ್ಪಿ ಧರಣಿ ದೇವಿ ಅವರಿಗೆ ದೂರು ನೀಡಿದ್ದಾರೆ.

ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಕಾಂಗ್ರೆಸ್‌ ಶಾಸಕರ ದಬ್ಬಾಳಿಕೆ, ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಆರೋಪ
ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಜನವಿರೋಧಿ ನೀತಿ ಹಾಗೂ ಹಿಟ್ಲರ್‌ ಧೋರಣೆಯ ವಿರುದ್ಧ ಜನರು ಬೇಸತ್ತಿದ್ದಾರೆ. ಸೋಲಿನ ಭೀತಿಯ ಹತಾಶೆಯಲ್ಲಿ ಪ್ರಾಮಾಣಿಕ ತಹಸೀಲ್ದಾರ್‌ ಎಂ.ದಯಾನಂದ್‌ ವಿರುದ್ಧ ಆಧಾರ ರಹಿತವಾಗಿ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಕುವೆಂಪು ವೃತ್ತದಲ್ಲಿ ತಾಲೂಕು ಬಿಜೆಪಿ ವತಿಯಿಂದ ಎಸ್‌ಸಿ ಎಸ್ಟಿ ಮೀಸಲಾತಿ ಹೆಚ್ಚಳ ಪರ ಹಮ್ಮಿಕೊಂಡಿದ್ದ ವಿಜಯೋತ್ಸವ ಕಾರ‍್ಯಕ್ರಮದಲ್ಲಿ ಸಿಹಿ ಹಂಚಿ ಮಾತನಾಡಿದ ಅವರು, ತಹಸೀಲ್ದಾರ್‌ ಎಂ.ದಯಾನಂದ್‌ ಶಾಸಕರು ಹೇಳಿದಂತೆ ಸರ್ಕಾರಿ ಕೆಲವನ್ನು ಮಾಡದೇ ಇರುವುದಕ್ಕೆ ಅವರ ವಿರುದ್ದ ಪ್ರತಿ ದಿನ ಆರೋಪಗಳನ್ನು ಮಾಡುತ್ತಿದ್ದಾರೆ. 10 ವರ್ಷಗಳಿಂದ ಶಾಸಕರಾಗಿರುವವರು ಒಬ್ಬ ತಹಸೀಲ್ದಾರ್‌ರನ್ನು ತನ್ನ ವೈಯುಕ್ತಿಕ ಕೆಲಸಗಳಿಗೆಬಳಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆಂದು ಲೇವಡಿ ಮಾಡಿದರು.

click me!