ಜಿಲ್ಲೆಯಿಂದ ಹೊರಗಿಡಲು ನಾನೇನು ಟೆರರಿಸ್ಟಾ?: ವಿನಯ್‌ ಕುಲಕರ್ಣಿ

By Kannadaprabha NewsFirst Published Oct 9, 2022, 7:09 PM IST
Highlights

ರಾಜಕಾರಣದಲ್ಲಿ ಈ ರೀತಿ ಷಡ್ಯಂತ್ರ ಮಾಡೋದು ಏನಿದೆ..? ಯಾರಿಗೂ ನನಗೆ ಬಂದ ಪರಿಸ್ಥಿತಿ ಬರೋದು ಬೇಡ. ನನ್ನ 25 ವರ್ಷದ ರಾಜಕೀಯದಲ್ಲಿ ಒಮ್ಮೆಯೂ ಈ ರೀತಿಯ ರಾಜಕಾರಣ ಮಾಡಿಲ್ಲ ಎಂದ ವಿನಯ್‌ ಕುಲಕರ್ಣಿ 

ಬೆಳಗಾವಿ(ಅ.09):  ಯಾವುದೇ ಪಕ್ಷದ ಶಾಸಕ ಹಾಗೂ ಸಮುದಾಯ ಎಂದು ಭೇದ- ಭಾವ ಮಾಡದೇ ಎಲ್ಲರಿಗೂ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಟ್ಟಿರುವ ನನ್ನನ್ನು ಜಿಲ್ಲೆಯಿಂದ ಹೊರಗಿಡಲು ನಾನೇನು ದೊಡ್ಡ ಟೆರರಿಸ್ಟಾ? ಇದರಿಂದ ನನಗೆ ಬಹಳಷ್ಟು ನೋವಾಗಿದೆ. ನನಗೆ ಬಂದ ಪರಿಸ್ಥಿತಿ ಯಾರಿಗೂ ಬರೋದು ಬೇಡ ಎಂದು ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಸಚಿವ ವಿನಯ್‌ ಕುಲಕರ್ಣಿ ಭಾವುಕರಾಗಿ ತಮ್ಮ ನೋವನ್ನು ಹೊರ ಹಾಕಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹಿತೈಸಿಗಳು, ವಿರೋಧ ಪಕ್ಷದವರು ಕೂಡ ಇಂತಹವರನ್ನು ಹೋಗಿ ಅಲ್ಲಿ ಇಟ್ಟರಲ್ಲ ಎನ್ನುತ್ತಿದ್ದಾರೆ. ಬಿಜೆಪಿಯ ಶೇ.80 ಅಲ್ಲ, ಶೇ.90ರಷ್ಟು ಜನರು ಅದನ್ನೇ ಬಯಸುತ್ತಿದ್ದಾರೆ. ನಾನು ಶಾಸಕನಾಗಿದ್ದಾಗ ಯಾವುದೇ ರೀತಿ ಪಾರ್ಟಿ ನೋಡದೇ ನಮ್ಮ ಮನೆ ಬಾಗಿಲಿಗೆ ಬಂದ ಎಲ್ಲರ ಕೆಲಸ ಮಾಡಿಕೊಟ್ಟಿದ್ದೇನೆ ಎಂದು ಭಾವುಕರಾಗಿ ಮಾತನಾಡಿದರು. ಎಲ್ಲದಕಿಂತ ಹೆಚ್ಚು ನೋವು ಇರೋದು ನಾನು ಸಾಕಿದ ಜಾನುವಾರುಗಳನ್ನು ನೋಡದೇ ಇರೋದು. ರಾಜಕಾರಣದಲ್ಲಿ ಈ ರೀತಿ ಷಡ್ಯಂತ್ರ ಮಾಡೋದು ಏನಿದೆ..? ಯಾರಿಗೂ ನನಗೆ ಬಂದ ಪರಿಸ್ಥಿತಿ ಬರೋದು ಬೇಡ. ನನ್ನ 25 ವರ್ಷದ ರಾಜಕೀಯದಲ್ಲಿ ಒಮ್ಮೆಯೂ ಈ ರೀತಿಯ ರಾಜಕಾರಣ ಮಾಡಿಲ್ಲ ಎಂದರು.

ಬೆಳಗಾವಿ: ಜೋಡಿ ಕೊಲೆ ಪ್ರಕರಣ: ಆರು ಜನ ಆರೆಸ್ಟ್‌

ನಾನೊಬ್ಬ ರೈತ:

ನಾನು ರಾಜಕಾರಣಿ ಎನ್ನುವುದಕ್ಕಿಂತ ನಾನೊಬ್ಬ ರೈತ. ಒಂದು, ಎರಡು ಆಕಳು ಇದ್ದರೆ ಸಾಕುವುದು ಕಷ್ಟವಾಗುತ್ತದೆ. ಆದರೆ ನಾನು ಹೊರಗೆ ಇದ್ದು ಸಾವಿರಾರು ಆಕಳುಗಳನ್ನು ಹೇಗೆ ಸಾಕಬೇಕು. ನನ್ನ ಮಕ್ಕಳಿಗಿಂತ ಜಾಸ್ತಿ ನಾನು ಅವುಗಳನ್ನು ಸಾಕುತ್ತಿದ್ದೆ. ನನಗೆ ಎಷ್ಟು ನೋವಾಗಬಹುದು. ನಾನು ಮಂತ್ರಿ ಆದಾಗೂ ಬೆಂಗಳೂರಿನಲ್ಲಿ ಇದ್ದಾಗ ಹೊರತುಪಡಿಸಿ ಒಂದು ದಿನವೂ ಡೈರಿಗೆ ಹೋಗದ ದಿನವೇ ಇಲ್ಲ. ರಾಜ್ಯದಿಂದ, ಜಿಲ್ಲೆಯಿಂದ ಹೊರಗೆ ಇಡಲು ನಾನೇನು ದೊಡ್ಡ ಟೆರರಿಸ್ಟಾ..? ಇದರಿಂದ ನನಗೆ ಬಹಳಷ್ಟುನೋವಾಗಿದೆ. ಇವತ್ತಿಗೂ ನಾನು ನನ್ನ ಒಂದು ಎಕರೆಯನ್ನೂ ಯಾರಿಗೂ ಲಾವಣಿ ಕೊಟ್ಟಿಲ್ಲ. ಎಲ್ಲಾ ಹೊಲ ಹಾಗೂ ಡೈರಿಯನ್ನೂ ನಾನೇ ನಿರ್ವಹಣೆ ಮಾಡುತ್ತಿದ್ದೇನೆ ಎಂದರು.

ಧಾರವಾಡ ಗ್ರಾಮೀಣ ಕ್ಷೇತ್ರದಿಂದಲ್ಲೇ ಸ್ಪರ್ಧೆ:

ನಾನು ಸುಮ್ಮನೆ ಕೂರುವ ವ್ಯಕ್ತಿಯಲ್ಲ. ನಾನು ಎಲ್ಲಿಯೇ ಕುಳಿತರೂ ಆಕ್ಟಿವ್‌ ಆಗಿರುತ್ತೇನೆ. ಇಲ್ಲೆ ಕುಳಿತು ವಿಡಿಯೋ ಕಾಲ್‌ ಮೂಲಕ ಡೈರಿಯನ್ನು ನೋಡುತ್ತಿದ್ದೇನೆ. ಗಾಲಿ ಜನಾರ್ಧನ ರೆಡ್ಡಿಯವರ ಗಣಿಗಾರಿಕೆ ಬಂದ ಆದರೆ ನಡೆಯುತ್ತದೆ. ವಿಜಯ ಮಲ್ಯ ಸೇರಿ ಬೇರೆ ಅದೇಷ್ಟೋ ಉದ್ಯಮಿಗಳು ಹೊರಗೆ ಇದ್ದಾರೆ. ಆದರೆ ಐದು ಸಾವಿರ ಜೀವಂತ ಪ್ರಾಣಿಗಳು ನನ್ನು ಇವೆ. ಪ್ರತಿದಿನ ಅವಕ್ಕೆ ಊಟ ಹಾಕಬೇಕು. ಇನ್ನು 100 ಪರ್ಸೆಂಟ್‌ ಕಾನೂನು ಹೋರಾಟ ಮಾಡಿಯೇ ಮಾಡುತ್ತೇನೆ. ನ್ಯಾಯಾಂಗಕ್ಕೆ ನಾವು ಗೌರವ ಕೊಡಬೇಕಾಗುತ್ತೆ. ನ್ಯಾಯಾಂಗ ಏನು ಆದೇಶ ನೀಡುತ್ತದೆ ಅದರ ಮೇಲೆ ಮತ್ತು ಮುಂದಿನ ಅವಕಾಶಗಳಿಗೆ ನಾವು ಅರ್ಜಿ ಸಲ್ಲಿಸುತ್ತೇವೆ. ಈಗಾಗಲೇ ನನಗೆ ಜಾಮೀನು ಸಿಕ್ಕು ಒಂದು ವರ್ಷ ಆಗಿದೆ. ಅದಕ್ಕೆ ಕೆಲ ವಿನಾಯಿತಿ ಕೊಡಬೇಕಾಗುತ್ತದೆ. ಹೀಗಾಗಿ ಅದರ ಮೇಲೆ ಕೇಳಿಕೊಳ್ಳುತ್ತೇನೆ. ಇನ್ನು ನೂರಕ್ಕೆ ನೂರು ನಾನು 2023ರ ಚುನಾವಣೆಯಲ್ಲಿ ಧಾರವಾಡ ಗ್ರಾಮೀಣ ಮತಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಯಾವುದೇ ಕಾರಣಕ್ಕೂ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಯಡಿಯೂರಪ್ಪರನ್ನು ಕರ್ಕೊಂಡು ತಿರುಗಾಡಿದರೆ ಸಿಎಂ ಬೊಮ್ಮಾಯಿ ಅವರೇ ನೀವು ಲಗಾ ಒಗಿತೀರಿ: ಯತ್ನಾಳ್‌

ಕ್ರೆಡಿಟ್‌ಗಾಗಿ ಹೋಗಲ್ಲ:

ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಕ್ರೆಡಿಟ್‌ ವಾರ ನಡೆಯುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ ವಿನಯ್‌ ಕುಲಕರ್ಣಿ, ನಾನಂತೂ ಎಂದಿಗೂ ಕ್ರೆಡಿಟ್‌ ಸಿಗುತ್ತೆ ಎಂದು ಹೋಗುವ ಮನುಷ್ಯ ಅಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ಇವತ್ತು ನಾನು ಎಲ್ಲಾ ಸಮಾಜಗಳ ಜತೆಗೂ ಇದ್ದೇನೆ. ಒಂದೇ ಸಮಾಜದ ಪರವಾಗಿ ನಾನು ಕೆಲಸ ಮಾಡಿಲ್ಲ. ಎಲ್ಲಾ ಸಮಾಜ, ವರ್ಗಗಳ ಜತೆಗೆ ಬಹಳ ಸಣ್ಣ ವಯಸ್ಸಿನಿಂದ ರಾಜಕೀಯಕ್ಕೆ ಬಂದಿದ್ದೇನೆ. ಎಲ್ಲಾ ಸಮಾಜಗಳ ಜನರು ಕೂಡ ಅಷ್ಟೇ ನನ್ನನ್ನು ಪ್ರೀತಿಸುತ್ತಾರೆ. ಒಂದೇ ಸಮಾಜ ಫಿಕ್ಸ್‌ ಇಟ್ಟುಕೊಂಡು ನಾವು ಯಾವತ್ತೂ ಹೋರಾಟ ಮಾಡಲು ಆಗೋದಿಲ್ಲ. ಎಲ್ಲ ಸಮಾಜದವರಿಗೂ ಅವರವರ ಯೋಗ್ಯತೆ ಅನುಸಾರ ಅವರಿಗೆ ಸಿಗಬೇಕಾದ ಸೌಲಭ್ಯಗಳು ಸಿಗಲಿ ಎಂಬುದಕ್ಕೆ ನಮ್ಮ ಹೋರಾಟ ಎಂದರು.

ವಾಲ್ಮೀಕಿ ಶ್ರೀ ಧರಣಿ ಕುಳಿತ್ತಿದ್ದರಿಂದ ಮೀಸಲಾತಿ: ಅಭಿನಂದನೆ

ಒಂದೇ ಸಮಾಜ ಅಲ್ಲ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವುದು, ಕುರುಬ ಸಮಾಜ ಎಸ್‌ಟಿಗೆ ಸೇರಿಸುವುದು ಸೇರಿ ಸಾಕಷ್ಟು ಸಮಾಜಗಳ ಹೋರಾಟ ನಡೆಯುತ್ತಿದೆ. ಎಲ್ಲ ಸಮಾಜಗಳ ಬಗ್ಗೆ ತುಲನೆ ಮಾಡಿ ನ್ಯಾಯ ಕೊಡಿಸಬೇಕು. ನಿರಂತರವಾಗಿ 8 ತಿಂಗಳಿನಿಂದ ವಾಲ್ಮೀಕಿ ಸಮಾಜದ ಸ್ವಾಮೀಜಿ ಧರಣಿ ಕುಳಿತಿದ್ದರು. ಅವರು ಗಟ್ಟಿತನದಿಂದ ಕುಳಿತಿದ್ದರಿಂದ ಇಂದು ಜಯ ಸಿಕ್ಕಿದೆ. ಇದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಉದ್ಯೋಗ ಸೇರಿ ಬೇರೆ ಹಲವಾರು ಸಮಾಜಗಳ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಲ್ಲಿ ಸೀಟ್‌ ತೆಗೆದುಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ. ವಿದ್ಯಾಕಾಶಿ ಧಾರವಾಡಕ್ಕೆ ಬೇರೆ ಬೇರೆ ಭಾಗಗಳಿಂದ ಸಾಕಷ್ಟುವಿದ್ಯಾರ್ಥಿಗಳು ಬರುತ್ತಾರೆ. ಹೀಗೆ ಬರುವ ಅದೆಷ್ಟೋ ವಿದ್ಯಾರ್ಥಿಗಳಿಗೆ ನಾನು ಕೂಡ ಹಾಸ್ಟೇಲ್‌ನಲ್ಲಿ ಸೀಟ್‌ ಕೊಡಿಸಿದ್ದೇನೆ. ಇವತ್ತು ಆ ಪರಿಸ್ಥಿತಿ ಇಲ್ಲ. ಶೇ.100ರಷ್ಟು ಮೆರಿಟ್‌ ಮೇಲೆ ಹಾಸ್ಟೆಲ್‌ನಲ್ಲಿ ಸೀಟ್‌ ಕೊಡುವ ವ್ಯವಸ್ಥೆ ಮಾಡಿದ್ದಾರೆ. ಕೂಲಿ ಕಾರ್ಮಿಕರು, ಬಡವರ ಮಕ್ಕಳು ಬಂದರೆ ಅವರಿಗೆ ಹಾಸ್ಟೆಲ್‌ ಕೊಡಲು ಕೂಡ ಅಸಾಧ್ಯ. ಹಾಸ್ಟೆಲ್‌ ಸೀಟ್‌ನಲ್ಲಿ ಜನರಲ್‌ ಮೆರಿಟ್‌ಗೆ ಶೇ. 96 ಅಂಕಕ್ಕೆ ನಿಂತಿದೆ. ಹೀಗಾಗಿ ಬಡವರ ಮಕ್ಕಳನ್ನು ಹೊರಗೆ ರೂಮ್‌, ಪಿಜಿ ಮಾಡಿ ಕಲಿಸಲು ಬಡವರಿಗೆ ಸಾಧ್ಯವಾಗುತ್ತಾ ಎಂಬುದನ್ನು ಗಮನಿಸಬೇಕಿದೆ. ನಾವ್ಯಾರು ಶ್ರೀಮಂತರಿಗೆ ಮೀಸಲಾತಿ ಕೊಡಿ ಎಂದು ನಾವು ಕೇಳುತ್ತಿಲ್ಲ. ಯಾರು ಬಡವರಿದ್ದಾರೆ, ಅವರ ಯೋಗ್ಯತೆ, ಆರ್ಥಿಕ ಪರಿಸ್ಥಿತಿ ಪರಿಗಣಿಸಿ ಒಂದು ಕಾನೂನು ತರಬೇಕು. ಎಲ್ಲಾ ಸಮಾಜಗಳಲ್ಲಿಯೂ ಬಡವರಿದ್ದಾರೆ. ಹೀಗಾಗಿ ಬಡತನ ರೇಖೆಯಲ್ಲಿ ಕಡಿಮೆ ಇದ್ದವರಿಗೆ ಅವರ ವಿದ್ಯಾಭ್ಯಾಸಕ್ಕೆ ಮೊದಲ ಆದÜ್ಯತೆ ಕೊಡಬೇಕು. ಅದೇ ರೀತಿ ಸರ್ಕಾರಿ ಉದ್ಯೋಗದಲ್ಲಿಯೂ ಮೀಸಲಾತಿ ಸಿಗಲಿ ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ವಿನಯ ಕುಲಕರ್ಣಿ ತಿಳಿಸಿದರು.
 

click me!