ಮತದಾರರಿಗೆ ಧಮ್ಕಿ; ರೌಡಿಶೀಟರ್ಸ್‌ಗೆ ವಿಜಯಪುರ ಎಸ್‌ಪಿ ಖಡಕ್ ವಾರ್ನಿಂಗ್

By Ravi Janekal  |  First Published May 10, 2023, 5:45 AM IST

ಮತದಾರರಿಗೆ ಧಮ್ಕಿ ಹಾಕಿ ವೋಟು ಹಾಕಿಸಿದ್ರೆ ಅಂಥವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ  ಹುಷಾರ್ ಎಂದು ರೌಡಿಶೀಟರ್‌ಗಳಿಗೆ ಎಸ್ಪಿ ಆನಂದಕುಮಾರ್ ಖಡಕ್ ಎಚ್ಚರಿಕೆ ನೀಡಿದರು.


ವಿಜಯಪುರ (ಮೇ.10) : ಮತದಾರರಿಗೆ ಧಮ್ಕಿ ಹಾಕಿ ವೋಟು ಹಾಕಿಸಿದ್ರೆ ಅಂಥವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ  ಹುಷಾರ್ ಎಂದು ರೌಡಿಶೀಟರ್‌ಗಳಿಗೆ ಎಸ್ಪಿ ಆನಂದಕುಮಾರ್ ಖಡಕ್ ಎಚ್ಚರಿಕೆ ನೀಡಿದರು.

ವಿಜಯಪುರದಲ್ಲಿ ಏಷಿಯಾನೆಟ್ ಸುವರ್ಣನ್ಯೂಸ್ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಬೆದರಿಸಿ ಮತ ಹಾಕಿಸುತ್ತಿರುವ ಬಗ್ಗೆ ದೂರುಗಳು ಇವೆ. ಹಾಗೆ ಮತದಾರರನ್ನು ಹೆದರಿಸಿ ಬೆದರಿಸುವವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದರು.

Tap to resize

Latest Videos

ಈಗಾಗಲೇ ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದ ಕ್ರಿಮಿನಲ್ಸ್ ಮೇಲೆ ನಿಗಾ ಪೊಲೀಸರು ನಿಗಾ ಇಟ್ಟಿದ್ದಾರೆ. ಧಮ್ಕಿ ಹಾಕಿ ವೋಟು ಹಾಕಿಸ್ತಿದ್ದವರನ್ನು ಗುರುತಿಸಿದ ವಿಜಯಪುರ ಪೊಲೀಸರು. 74 ಜನರ ಮೇಲೆ ಸೆಕ್ಯೂರಿಟಿ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದರು. ಭೀಮಾತೀರದ ಹಂತಕರ ಮೇಲೂ ಪೊಲೀಸರು ಹದ್ದಿನ ಕಣ್ಣು ಇಟ್ಟಿರುವ ಖಾಕಿ ಪಡೆ. ಶಾಂತಿಯುತ ಮತದಾನಕ್ಕಾಗಿ ರೌಡಿಗಳಿಂದ ಬಾಂಡ್ ಓವರ್ ಮಾಡಿಸಿಕೊಳ್ಳಲಾಗಿದೆ ಎಂದರು.

ಒಂದು ಮತಕ್ಕಿದೆ ಎಲ್ಲವನ್ನೂ ಬದಲಿಸುವ ಶಕ್ತಿ: ರಮೇಶ್ ಅರವಿಂದ

ಮುಕ್ತ ಚುನಾವಣೆಗೆ ಪೊಲೀಸ್‌ ಸರ್ಪಗಾವಲು

ಮುಕ್ತ, ನ್ಯಾಯಸಮ್ಮತ ಚುನಾವಣೆಗಾಗಿ ಹಾಗೂ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್‌ ಇಲಾಖೆ ಮತಗಟ್ಟೆಗಳ ಸುತ್ತ ಪೊಲೀಸ್‌ ಭದ್ರಕೋಟೆಯನ್ನು ರೂಪಿಸಿದೆ. ಈಗಾಗಲೇ ಪೊಲೀಸ್‌ ಸಿಬ್ಬಂದಿ ನಿಯೋಜಿತ ಮತಗಟ್ಟೆಕೇಂದ್ರಗಳತ್ತ ತೆರಳಿದ್ದಾರೆ. ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ವೆಬ್‌ಕಾಸ್ಟಿಂಗ್‌ ಮೂಲಕ ಹದ್ದಿನ ಕಣ್ಣು ಇರಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಗಳಲ್ಲಿ ಸಾಮಾನ್ಯ, ಸೂಕ್ಷ್ಮ, ಅತಿಸೂಕ್ಷ್ಮ ಹಾಗೂ ಕ್ಲಸ್ಟರ್‌ ಮತಗಟ್ಟೆಗಳೆಂದು ವಿಭಜಿಸಲಾಗಿದ್ದು, ಮತಗಟ್ಟೆಗಳ ಸುರಕ್ಷತೆಗಾಗಿ 6 ಡಿಎಸ್ಪಿ, 17 ಸಿಪಿಐ, 54 ಪಿಎಸ್‌ಐ, 357 ಎಎಸ್‌ಐ, 1127 ಹೆಡ್‌ ಕಾನ್‌ಸ್ಟೆಬಲ್‌, 750 ಹೋಂಗಾರ್ಡ್‌ ಸೇರಿ 2113 ಜನರನ್ನು ನೇಮಿಸಿದ್ದು, ಹೊರ ಜಿಲ್ಲೆಯಿಂದ 3 ಡಿಎಸ್‌ಪಿ, 16 ಸಿಪಿಐ, 7 ಪಿಎಸ್‌ಐ ಹಾಗೂ 1 ಎಎಸ್‌ಐ ಮತ್ತು 351 ಕಾನ್‌ಸ್ಟೆಬಲ್‌ ಸೇರಿ 678 ಪೊಲೀಸ್‌ರನ್ನು ನಿಯೋಜಿಸಲಾಗಿದೆ.

ಕೇಂದ್ರ ಮೀಸಲು ಪಡೆಯ 24 ಪಡೆಗಳು, ಐಆರ್‌ಬಿ-ಕೆಎಸ್‌ಆರ್‌ಪಿ 8, ಡಿಎಆರ್‌-3 ತುಕಡಿಗಳು ಸೇರಿ ಒಟ್ಟು 5256 ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 33 ವಲ್ನರೇಬಲ್‌ ಮತಗಟ್ಟೆಗಳು ಸೇರಿ 334 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಈ ಮತಗಟ್ಟೆಗಳ ಪೈಕಿ 274 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಸರ್‌ವರ್‌, 60 ಮತಗಟ್ಟೆಗಳಲ್ಲಿ ವಿಡಿಯೋ ಗ್ರಾಫಿ ವ್ಯವಸ್ಥೆ ಹಾಗೂ ಎಲ್ಲ 334 ಸೂಕ್ಷ್ಮ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಮುದ್ದೇಬಿಹಾಳ ಮತಕ್ಷೇತ್ರದ 102 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ಸೌಲಭ್ಯ ಕಲ್ಪಿಸಲಾಗಿದೆ. 14 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಜರ್ವರ್‌ ಹಾಗೂ 7 ವಿಡಿಯೊಗ್ರಾಫರ್‌, ದೇವರಹಿಪ್ಪರಗಿ ಮತಕ್ಷೇತ್ರದ 109 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ಸೌಲಭ್ಯ ಕಲ್ಪಿಸಲಾಗಿದೆ. 21 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಜರ್ವರ್‌ ಹಾಗೂ 7 ವಿಡಿಯೊಗ್ರಾಫರ್‌ಗಳನ್ನು ನೇಮಿಸಲಾಗಿದೆ.

ಬಸವನಬಾಗೇವಾಡಿ ಮತಕ್ಷೇತ್ರದ 101 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ಸೌಲಭ್ಯ ಕಲ್ಪಿಸಲಾಗಿದೆ. 24 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಜರ್ವರ್‌ ಹಾಗೂ 7 ವಿಡಿಯೊಗ್ರಾಫರ್‌, ಬಬಲೇಶ್ವರ ಮತಕ್ಷೇತ್ರದ 149 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ಸೌಲಭ್ಯ ಕಲ್ಪಿಸಲಾಗಿದೆ. 23 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಜರ್ವರ್‌ ಹಾಗೂ 8 ವಿಡಿಯೊಗ್ರಾಫರ್‌ಗಳನ್ನು ನೇಮಿಸಲಾಗಿದೆ.

ವಿಜಯಪುರ ನಗರ ಮತಕ್ಷೇತ್ರದ 178 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ಸೌಲಭ್ಯ ಕಲ್ಪಿಸಲಾಗಿದೆ. 61 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಜರ್ವರ್‌ ಹಾಗೂ 8 ವಿಡಿಯೊಗ್ರಾಫರ್‌ ಹಾಗೂ ನಾಗಠಾಣ ಮತಕ್ಷೇತ್ರದ 150 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ಸೌಲಭ್ಯ ಕಲ್ಪಿಸಲಾಗಿದೆ. 21 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಜರ್ವರ್‌ ಹಾಗೂ 8 ವಿಡಿಯೊಗ್ರಾಫರ್‌ಗಳನ್ನು ನೇಮಿಸಲಾಗಿದೆ.

ಮತದಾನಕ್ಕೆ ಬೆಂಗಳೂರು ಸಜ್ಜು: 28 ಕ್ಷೇತ್ರಗಳಲ್ಲಿ ಬಿಗಿ ಭದ್ರತೆ

ಇಂಡಿ ಮತಕ್ಷೇತ್ರದ 123 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ಸೌಲಭ್ಯ ಕಲ್ಪಿಸಲಾಗಿದೆ. 24 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಜರ್ವರ್‌ ಹಾಗೂ 7 ವಿಡಿಯೊಗ್ರಾಫರ್‌ ಹಾಗೂ ಸಿಂದಗಿ ಮತಕ್ಷೇತ್ರದ 137 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ಸೌಲಭ್ಯ ಕಲ್ಪಿಸಲಾಗಿದೆ. 16 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಜರ್ವರ್‌ ಹಾಗೂ 8 ವಿಡಿಯೊಗ್ರಾಫರ್‌ಗಳನ್ನು ನೇಮಿಸಲಾಗಿದ್ದು, ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 2078 ಮತಗಟ್ಟೆಗಳ ಪೈಕಿ 1049 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ಸೌಲಭ್ಯ, 204 ಮೈಕ್ರೋ ಆಬ್ಜರ್ವರ್‌ ಹಾಗೂ 60 ವಿಡಿಯೋಗ್ರಾಫರ್‌ಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

click me!