ಹಾಸನದ ಮಸೀದಿಗಳಿಗೆ ಬೆದರಿಕೆ : ಇಬ್ಬರು ಮುಖಂಡರ ಹೆಸರಲ್ಲಿ ಪತ್ರ

Suvarna News   | Asianet News
Published : Jan 19, 2020, 12:45 PM IST
ಹಾಸನದ ಮಸೀದಿಗಳಿಗೆ ಬೆದರಿಕೆ : ಇಬ್ಬರು ಮುಖಂಡರ ಹೆಸರಲ್ಲಿ ಪತ್ರ

ಸಾರಾಂಶ

ಹಾಸನ ಜಿಲ್ಲೆಯಲ್ಲಿರುವ ವಿವಿಧ ಮಸೀದಿಗಳಿಗೆ ಬಿಜೆಪಿ ಮುಖಂಡರಿಬ್ಬರ ಹೆಸರಿನಲ್ಲಿ ಬೆದರಿಕೆ ಪತ್ರ ಬರೆಯಲಾಗಿದೆ. ಮುಸ್ಲಿಮರೆಲ್ಲಾ ಹಿಂದೂಗಳಾಗಿ ಬದಲಾಗಬೇಕು ಎಂದು ಎಚ್ಚರಿಕೆ ನೀಡಲಾಗಿದೆ. 

ಹಾಸನ [ಜ.19]: ಕಳೆದು 15 ದಿನಗಳಿಂದ ಹಾಸನದಲ್ಲಿರುವ ಮಸೀದಿಗೆ ಬೆದರಿಕೆ ಕರೆ ಬರುತ್ತಿದ್ದು, ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ, ಆನಂದ್ ಸಿಂಗ್ ಹೆಸರಿನಲ್ಲಿ ಪತ್ರ ಬರೆಯಲಾಗಿದೆ.

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಜಾರಿ ಮಾಡಿರುವ ಸಿಎಎ ಕಾಯ್ದೆಯಿಂದ ಸಂತೋಷವಾಗಿದ್ದು, ಮುಸ್ಲಿಮರೆಲ್ಲಾ ಹಿಂದೂಗಳಾಗಿ ಬದಲಾಗಬೇಕು. ಈ ದೇಶದಲ್ಲಿ ಉಳಿಯಬೇಕು ಎಂದರೆ ಬದಲಾವಣೆ ಅನಿವಾರ್ಯ ಎಂದು ಪತ್ರದಲ್ಲಿ ಬರೆಯಲಾಗಿದೆ. 

ಲಕ್ಷ ಸಂಬಳದ ಕೆಲಸ ತೊರೆದು ಕನ್ನಡದಲ್ಲೇ ಪರೀಕ್ಷೆ ಬರೆದು IAS ಪಾಸ್ ಮಾಡಿದ..!..

ಒಂದು ವೇಳೆ ಬದಲಾಗದೇ ಇದ್ದಲ್ಲಿ ಇಲ್ಲಿಂದ ಹೊರಹೋಗಬೇಕಾಗುತ್ತದೆ ಎಂದು ಕನ್ನಡ ಅಕ್ಷರಗಳಲ್ಲಿ ಉರ್ದು ಭಾಷೆ ಬಳಸಲಾಗಿದೆ. 

ಪುಳಿಯೋಗರೆ’ ಪದ ಹೇಳಿಸಿ ಹಾಸ್ಯ ಮಾಡಿದ್ದ ಶಿಕ್ಷಕ ಸಸ್ಪೆಂಡ್!...

ಹಾಸನ ಜಿಲ್ಲೆಯ ವಿವಿಧ ಮಸೀದಿಗಳಿಗೆ ಆನಂದ್ ಸಿಂಗ್ ಹಾಗೂ ಸೋಮಶೇಖರ್ ರೆಡ್ಡಿ ಕಚೇರಿ ಮುದ್ರೆಯೊಂದಿಗೆ ಬರೆದಿರುವ ಪತ್ರದ ಬಗ್ಗೆ ಅಲ್ಪ ಸಂಖ್ಯಾತ ಮುಖಂಡರು ದೂರು ದಾಖಲಿಸಿದ್ದಾರೆ. 

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ